ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಿಂದ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khameni) ಅವರ ಸಾವನ್ನಪ್ಪಿದ್ದು, ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದಲ್ಲೂ ದುಃಖದ ಅಲೆ ಎಬ್ಬಿಸಿದೆ.
ಅಲಿಪುರ ಗ್ರಾಮದಲ್ಲಿ ಕಪ್ಪು ಬಾವುಟಗಳನ್ನು ಪ್ರದರ್ಶಿಸಿ, ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಜನರು ಖಮೇನಿ ಅವರನ್ನು ಸ್ಮರಿಸುತ್ತಿದ್ದಾರೆ. ಗ್ರಾಮದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಾಗಿದೆ.ಗ್ರಾಮದ ಅಂಜುಮನ್-ಎ-ಜಾಫ್ರಿಯಾ ಸಂಸ್ಥೆ ಈ ಶೋಕಾಚರಣೆಯನ್ನು ಆಯೋಜಿಸಿದೆ. ಸ್ಥಳೀಯ ನಾಯಕರು ಹೇಳುವಂತೆ, “ಖಮೇನಿ ನಮ್ಮ ಸಮುದಾಯದ ಆಧಾರ ಸ್ತಂಭ. ಅವರ ಸಾವು ನಮಗೆ ದೊಡ್ಡ ಆಘಾತ” ಎಂದು ಭಾವುಕರಾಗಿದ್ದಾರೆ.
ಅಲಿಪುರ ಗ್ರಾಮ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುಮಾರು 70 ಕಿ.ಮೀ. ಬೆಂಗಳೂರಿನಿಂದ ದೂರದಲ್ಲಿದೆ. ಇಲ್ಲಿನ ಜನಸಂಖ್ಯೆ ಸುಮಾರು 25,000, ಅದರಲ್ಲಿ 90% ಶಿಯಾ ಮುಸ್ಲಿಮರು. ಈ ಸಮುದಾಯಕ್ಕೆ ಇರಾನ್‌ನೊಂದಿಗೆ ಆಳವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳಿವೆ. ಖಮೇನಿ ಅವರು ಶಿಯಾ ಇಸ್ಲಾಂನ ಕೇಂದ್ರ ವ್ಯಕ್ತಿ,ಗ್ರಾಮದಲ್ಲಿ ಖಮೇನಿ ಅವರ ಮಾರ್ಗದರ್ಶನವನ್ನು ಅನುಸರಿಸುತ್ತಾರೆ ಎಂದು ಹೇಳಲಾಗುತ್ತದೆ. 1981-82ರಲ್ಲಿ ಖಮೇನಿ ಅವರು ಅಲಿಪುರಕ್ಕೆ ಭೇಟಿ ನೀಡಿದ್ದರು ಎಂಬ ಐತಿಹಾಸಿಕ ನೆನಪುಗಳು ಇವೆ.

ಅನೇಕರ ಕುಟುಂಬ ಸದಸ್ಯರು ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ. ಅನೇಕರು ಇರಾನ್‌ಗೆ ಧಾರ್ಮಿಕ ಪ್ರವಾಸ, ಅಧ್ಯಯನ ಅಥವಾ ವ್ಯಾಪಾರಕ್ಕಾಗಿ ಹೋಗಿದ್ದಾರೆ. ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಅಲಿಪುರ ಗ್ರಾಮಸ್ಥರು ತಮ್ಮ ಸಂಬಂಧಿಕರ ಸುರಕ್ಷತೆಗಾಗಿ ಆತಂಕದಲ್ಲಿದ್ದಾರೆ.




