Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೇರಳದ ಹುಡುಗಿಯದ್ದು ಆತ್ಮಹತ್ಯೆಯೋ.. ಕೊಲೆಯೋ : ಚಿಕ್ಕಮಗಳೂರು ಎಸ್ಪಿ ಹೇಳಿದ್ದೇನು..?

---Advertisement---

ಚಿಕ್ಕಮಗಳೂರು: ರಜೆ ಇದ್ದ ಕಾರಣ ಕೇರಳದಿಂದ ಚಿಕ್ಕಮಗಳೂರು ಕಡೆಗೆ ಪ್ರವಾಸಕ್ಕೆಂದು ಬಂದಿದ್ದರು. ಆದರೆ ಅಲ್ಲಿ ಶ್ರೀನಂದಾ ನಾಪತ್ತೆಯಾಗಿದ್ದವರು ಶವವಾಗಿ ಪತ್ತೆಯಾಗಿದ್ದಾರೆ. ಈ ಸಂಬಂಧ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಈ ಬಗ್ಗೆ ಚಿಕ್ಕಮಗಳೂರು ಎಸ್ಪಿ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಾಚರಣೆ ಬೆಳಗ್ಗೆಯಿಂದ ನಡೀತಾ ಇತ್ತು. ಮಹಜರು ಮಾಡಲು ಹೋಗಿದ್ದಾರೆ.

ನಾವೂ ಆ ಹುಡುಗಿ ಬಿದ್ದಿದ್ದ ಸ್ಥಿತಿ ನೋಡಿದಾಗ ಜಂಪ್ ಮಾಡಿರಬಹುದು ಅಥವಾ ಸ್ಲಿಪ್ ಆಗಿರಬಹುದು ಎನಿಸುತ್ತಿದೆ. ಬೇರೆ ಥರ ಪಾಸಿಬಲಿಟಿಗಳು ಕಾಣಿಸ್ತಾ ಇಲ್ಲ. ಇದು ಪ್ರವಾಸಿ ತಾಣವಾಗಿದೆ. ಹೀಗಾಗಿ ಬೇರೆ ಬೇರೆ ರಾಜ್ಯದಿಂದಾನೂ ಜನ ಇಲ್ಲಿಗೆ ಬರ್ತಾರೆ. ಕೇರಳಕ್ಕೂ ಮಾಹಿತಿಯನ್ನ ಕೊಟ್ಟಿದ್ದೇವೆ. ತಂಡವಿದೆ ಅದನ್ನೆಲ್ಲಾ ನೋಡಿಕೊಳ್ಳೋದಕ್ಕೆ. ದೇಹವನ್ನ ಅಲ್ಲಿಗೆ ರವಾನೆ ಮಾಡಲಾಗುತ್ತದೆ ಎಂದಿದ್ದಾರೆ.

ಶ್ರೀನಂದಾ ಸಾವಿನ ಬಗ್ಗೆ ಹಲವು ಅನುಮಾನಗಳು ಮೂಡುವುದಕ್ಕೆ ಕಾರಣ ಅವರ ತಾಯಿ ನೀಡಿದ ಕೆಲ ಹೇಳಿಕೆಗಳು. ನನ್ನ ಮಗಳನ್ನ ಕಿಡ್ನ್ಯಾಲ್ ಮಾಡಿರಬಹುದು, ನಮಗೆ ಅನುಮಾನವಿದೆ ಎಂಬ ಮಾತನ್ನ ಹೇಳಿದ್ದರು. ಹಂಪಿ ಟೂರ್ ಅನ್ನ ಮುಗಿಸಿ 40 ಜನ ಮಾಣಿಕ್ಯಧಾರಕ್ಕೆ‌ ಬಂದಿದ್ದರು. ಆ ಜಲಪಾತವನ್ನ ನೋಡೊದಕ್ಕೆ ಬಹಳ ಉತ್ಸುಕರಾಗಿದ್ದರು‌. ಟ್ರಕ್ಕಿಂಗ್ ಅನ್ನ ಖುಷಿ ಖುಷೊಯಾಗಿಯೇ ಹತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ನಾಪತ್ತೆಯಾಗಿದ್ದರು. ಆದರೆ ಶೋಧ ಕಾರ್ಯಾಚರಣೆ ವೇಳೆ 1,500 ಅಡಿ ಕೆಳಗೆ ಶವ ಪತ್ತೆಯಾಗಿದೆ. ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆಯನ್ನ ಮಾಡ್ತಾ ಇದ್ದಾರೆ. ಸದ್ಯಕ್ಕೆ ಮೇಲ್ನೋಟಕ್ಕೆ ಕಂಡಂತೆ ಕಾಲು ಜಾರಿ ಬಿದ್ದಿರಬಹುದು ಎನ್ನಲಾಗಿದೆ. ಮುಂದಿನ ತನಿಖೆಯಲ್ಲಿ ಇದೇ ಸತ್ಯವಾ ಏನು ನಡೆದಿದೆ ಅನ್ನೋದು ತಿಳಿಯಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...