ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾವಾಗಲೂ ಕಿಡಿಕಾರುತ್ತಲೇ ಇರುತ್ತಾರೆ. ಇದೀಗ ಮತ್ತೆ ಯಡಿಯೂರಪ್ಪ ವಿರುದ್ಧ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿ ನರೇಂದ್ರ ಮೋದಿಯವರ ಹೆಸರಿಗೆ ವೋಟು ಹಾಕುತ್ತಾರೆ ವಿನಃ, ಯಾವ ‘ಯಪ್ಪ’ನ ಮುಖ ನೋಡಿಯೂ ವೋಟ್ ಹಾಕುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಯತ್ನಾಳ್ ಅವರು, ನಾನು ದೆಹಲಿಗೆ ಯಾರ ಭೇಟಿಗೂ ಹೋಗಿಲ್ಲ, ಯಾರ appointment ಕೂಡ ತೆಗೆದುಕೊಂಡಿಲ್ಲ. ಯಾರ appointment ಕೂಡ ಬೇಕಿಲ್ಲ. ನಾನು ನನ್ನ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ. ಕಾರ್ಖಾನೆ ವಿಚಾರಕ್ಕೆ ಹೋಗಿದ್ದೆ. ಈ ವೇಳೆ ಶೋಭಾ ಕರಂದ್ಲಾಜೆ, ಜೋಶಿ ಸೇರಿದಂತೆ ಇತರೆ ಸಂಸದರನ್ನು ಭೇಟಿಯಾಗಿದ್ದೇನೆ ಅಷ್ಟೇ.
ವಿಜಯೇಂದ್ರ ಇರುವುದರಿಂದ 35 ಲೋಕಸಭಾ ಸೀಟುಗಳು ಬರುತ್ತವೆ ಎಂದು ಹೊಗಳಿ ನನ್ನದೇನು ಗಂಟು ಹೋಗುತ್ತದೆ. 28 ಕ್ಷೇತ್ರಗಳು ಇದ್ದರು 35 ಕ್ಷೇತ್ರಗಳು ಬರುತ್ತವೆ ಎಂದು ಹೇಳಿದ್ದೀರಿ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆಯೇ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತದೆ. ಯಾ ಯಪ್ಪಂದು ಏನು ಇಲ್ಲ. ಇವರ ಮುಖ ನೋಡಿ ಯಾರೂ ವೋಟು ಹಾಕಲ್ಲ. ನನ್ನ ಹೋರಾಟ ವಂಶವಾರು, ಭ್ರಷ್ಟಾಚಾರ ಹಾಗೂ ಅಡ್ಜೆಸ್ಟ್ಮೆಂಟ್ ಗಳ ವಿರುದ್ಧವಾಗಿದೆ. ಇವುಗಳ ಮೇಲಿನ ನನ್ನ ಹೋರಾಟ ನಿರಂತರವಾಗಿರುತ್ತದೆ. ನನಗೆ ಯಾರೋ ಬೈದು ಇಲ್ಲ, ಎಚ್ಚರಿಕೆಯನ್ನು ನೀಡಿಲ್ಲ. ಗಂಭೀರವಾದ ಎಚ್ಚರಿಕೆಯನ್ನು ಯಾವನು ಕೊಟ್ಟಿಲ್ಲ ಎಂದೇ ಪ್ರತಿಕ್ರಿಯೆ ನೀಡಿದ್ದಾರೆ.