ನವದೆಹಲಿ: ರಾಜ್ಯದಲ್ಲಿ ಮಳೆ ಇಲ್ಲದೆ ರೈತ ಕಂಗಲಾಗಿದ್ದಾನೆ. ಕೆಆರ್ಎಸ್ ನಲ್ಲಿ ಇರುವ ಅಷ್ಟೊ ಇಷ್ಟೋ ನೀರನ್ನೇ ನಂಬಿಕೊಂಡು ರೈತರು ಜೀವನ ನಡೆಸಲು ಮುಂದಾಗಿದ್ದಾರೆ. ಆದರೆ ತಮಿಳುನಾಡಿಗೂ ನೀರು ಬಿಡಬೇಕಾದ ಅನಿವಾರ್ಯತೆ ಇರುವುದರಿಂದ ಕಾವೇರಿ ನೀರು ಬತ್ತುವುದರಲ್ಲಿ ಅನುಮಾನವೇ ಇಲ್ಲ. ನಮ್ಮ ರಾಜ್ಯಕ್ಕೆ ನೀರಿಲ್ಲ, ಇನ್ನು ಪರರ ರಾಜ್ಯಕ್ಕೆ ಬಿಡುವುದು ಹೇಗೆ ಅನ್ನೋದು ನಮ್ಮ ರೈತರ ವಾದ.
ಆದರೆ ಇದೀಗ ಸುಪ್ರೀಂ ಕೋರ್ಟ್ ನಲ್ಲೂ ತೀರ್ಪು ತಮಿಳುನಾಡುನ ಪರವೇ ಬಂದಿದೆ. 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್ ಬಿಡುವಂತೆ ಸೂಚಿಸಿದೆ. ಈ ಮೂಲಕ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾಗಿದೆ. ಇಂದಿನ ತೀರ್ಪಿನ ಬಗ್ಗೆ ರೈತರು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು.
ಈಗ ಕೇಂದ್ರ ನಾಯಕರಿಗೆ ನಮ್ಮ ರಾಜ್ಯದ ನಾಯಕರು ಮನವಿ ಮಾಡಿದ್ದಾರೆ. ರಾಜ್ಯದ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತೆ ಎಂದೇ ನಮ್ಮ ನಾಯಕರು ಭಾವಿಸಿದ್ದಾರೆ.