ಸುದ್ದಿಒನ್, ಬೆಂಗಳೂರು, ಜೂನ್. 22 : ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ ಬೆಂಗಳೂರು ಉಚ್ಚ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಹಾಗೂ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಗೌತಮ್ ಚಂದ್ ಎಸ್.ಎಫ್. ಅವರು ಸತತ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಪರಿಷತ್ತಿನ 23 ಸದಸ್ಯ ಸ್ಥಾನಗಳಿಗೆ ಮಾರ್ಚ್ 11ರಂದು ಚುನಾವಣೆ ನಡೆದು, ಮಾರ್ಚ್ 16ರಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿತ್ತು. ಬುಧವಾರ (ಜೂನ್ 17)ರ ವರೆಗಿನ ಮತ ಎಣಿಕೆ ಫಲಿತಾಂಶದಂತೆ ಗೌತಮ್ ಚಂದ್ ಎಸ್.ಎಫ್ ಅವರು ಜಯಗಳಿಸಿದ್ದಾರೆ. ಈ ಮೂಲಕ ಸತತ ಎರಡನೇ ಬಾರಿಗೆ ಅವರು ವಕೀಲರ ಪರಿಷತ್ತಿನ ಸದಸ್ಯರಾಗಿ ಚುನಾಯಿತರಾಗಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು149 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕರ್ನಾಟಕ ರಾಜ್ಯದ್ಯಂತ ಎಲ್ಲಾ ವಕೀಲರು ಮತ ಚಲಾಯಿಸಿದ್ದರು. ಇವರ ಗೆಲುವಿಗೆ ಚಿತ್ರದುರ್ಗದ ವಕೀಲರಾದ ಡಿ.ಸಿ. ವೆಂಕಟೇಶ್ ಮೂರ್ತಿಯವರು ಅಭಿನಂದನೆಗಳನ್ನು ಸಲ್ಲಿಸಿ ಶುಭ ಕೋರಿದ್ದಾರೆ.








