ಬೆಂಗಳೂರು: ಹಿಜಾಬ್ ವಿವಾದ ರಾಜ್ಯದಲ್ಲಿ ತಾರಕಕ್ಕೇರಿದೆ. ಹೈಕೋರ್ಟ್ ಆದೇಶವಿದ್ದರೂ ಕೆಲವೊಂದಿಷ್ಟು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರುತ್ತಿದ್ದಾರೆ, ಪದರತಿಭಟಿಸುತ್ತಿದ್ದಾರೆ. ಸದ್ಯ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು, 5ನೇ ದಿನವಾದ ಇಂದು ಕೂಡ ವಾದವನ್ನ ಆಲಿಸಲಾಗಿದೆ. ಸದ್ಯ ನಾಳೆಗೆ ವಿಚಾರಣೆ ಮುಂದೂಡಿಕೆ ಮಾಡಿದ್ದು, ವಾದ ಮಂಡಿಸಲು ಸೂಚಿಸಲಾಗಿದೆ.
ವಿಚಾರಣೆ ವೇಳೆ ಸರಿಯಾಗಿ ಸಲ್ಲಿಕೆಯಾಗದ ಒಂದು ಅರ್ಜಿಯನ್ನು ವಜಾ ಮಾಡಲಾಗಿದೆ. ಈ ವೇಳೆ ತ್ರಿಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ವಕೀಲ ವಿನೋದ್ ಕುಲಕರ್ಣಿ, ಶುಕ್ರವಾರವಾದ್ರೂ ಹಿಜಾಬ್ ಧರಿಸಲು ಅನುಮತಿ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.
ಇನ್ನು ಇದೇ ವೇಳೆ ವಕೀಲರೊಬ್ಬರು ಹೊರಗಡೆ ಈ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಅನುಮತಿ ಕೋರಿದ್ದರು. ಈ ಮನವಿಗೆ ಸ್ಪಂದಿಸಿದ ತ್ರಿಸದಸ್ಯ ಪೀಠ ಸರ್ಕಾರ ಮತ್ತು ಅರ್ಜಿದಾರರು ಇದಕ್ಕೆ ಒಪ್ಪಿದರೆ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ. ಇನ್ನು ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ನಾಳೆ ವಾದ ಮಂಡನೆ ಮಾಡುವುದರ ಜೊತೆಗೆ ಆಕ್ಷೇಪ ಅರ್ಜಿ ಸಲ್ಲಿಕೆ ಮಾಡುವ ಬಗ್ಗೆಯೂ ತಿಳಿಸಿದ್ದಾರೆ.