ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಮೂಲಕ ಪ್ರತಿ ರಾಜ್ಯದ ಜನರನ್ನು ತಲುಪುತ್ತಿದ್ದಾರೆ. ಐಕ್ಯತಾ ಯಾತ್ರೆಯಲ್ಲಿ ಬ್ಯುಸಿಯಾಗಿರುವ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಕೆಜಿಎಫ್ ಸರಣಿ ಸಿನಿಮಾದ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಅದಾಗಲೇ ದೂರು ದಾಖಲಾಗಿತ್ತು. ಇದೀಗ ಮತ್ತೆ ಈ ವಿಚಾರಕ್ಕೆ ನೋಟೀಸ್ ಜಾರಿಯಾಗಿದೆ. ಹಾಡು ಬಳಕೆ ಮಾಡಿದ್ದರ ಹಿನ್ನೆಲೆ ಹೈಕೋರ್ಟ್ ಸಾಂಗ್ ತೆಗೆಯಲು ಆದೇಶ ನೀಡಿತ್ತು. ಆಧರೆ ಆದೇಶ ಪಾಲನೆ ಮಾಡದ ಹಿನ್ನೆಲೆ ಮತ್ತೆ ನೋಟೀಸ್ ಜಾರಿ ಮಾಡಿದೆ.
ಕೆಜಿಎಫ್ ಹಾಡು ಬಳಕೆ ಮಾಡಿದ್ದಕ್ಕೆ ಕೆಆರ್ಟಿ ದೂರು ದಾಖಲಿಸಿತ್ತು. ಸಾಂಗ್ ತೆಗೆಯುವಂತೆ ಸೂಚಿಸಲು ಕೋರ್ಟ್ ಬಳಿ ಮನವಿ ಮಾಡಿತ್ತು. ಅದರಂತೆ ಕೋರ್ಟ್ ಕೂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಾಮಾಜಿಕ ಜಾಲತಾಣದ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು. ಇದಾದ ಬಳಿಕ ಕಾಂಗ್ರೆಸ್ ನಿಂದ ಕೂಡ ಸ್ಪಷ್ಟನೆ ಸಿಕ್ಕುತ್ತು ಹಾಡು ತೆಗೆಯುತ್ತೇವೆ ಎಂದು. ಆದರೆ ಹಾಡನ್ನು ಸಂಪೂರ್ಣವಾಗಿ ತೆಗೆಯದ ಕಾರಣ ಮತ್ತೆ ನೋಟೀಸ್ ನೀಡಿದೆ.