ನವದೆಹಲಿ: ದೇಶದಲ್ಲಿ ಉಪ ರಾಷ್ಟ್ರಪತಿ ಹುದ್ದೆ ಖಾಲಿಯಾಗಿದೆ. ಇದೀಗ ಆ ಉಪ ರಾಷ್ಟ್ರಪತಿ ಹುದ್ದೆಗೆ ಸೆಪ್ಟೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. ಮುಂದಿನ ಉಪ ರಾಷ್ಟ್ರಪತಿಗಾಗಿ ಹಲವರು ರೇಸ್ ನಲ್ಲಿದ್ದಾರೆ. ಅದರಲ್ಲೂ ನಮ್ಮ ಕರ್ನಾಟಕದ ರಾಜ್ಯಪಾಲರ ಹೆಸರು ಕೂಡ ಕೇಳಿ ಬಂದಿದೆ. ಈ ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಹಾಗೂ ಇಂಡಿಯಾ ಮೈತ್ರಿಕೂಟಗಳು ಸ್ಪರ್ಧೆ ನಡೆಸಲಿವೆ. ಈ ಸ್ಪರ್ಧೆಯಲ್ಲಿ ಎನ್ಡಿಎ ಅಭ್ಯರ್ಥಿಯೇ ಗೆಲ್ಲುವ ಎಲ್ಲಾ ಸಾಧ್ಯತೆಗಳು ಇದೆ.
ಅನೇಕ ರಾಜ್ಯದ ರಾಜ್ಯಪಾಲರು ಉಪ ರಾಷ್ಟ್ರಪತಿ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಹಲವರು ಈಗಾಗಲೇ ಪ್ರಧಾನಿ ಮೋದಿ, ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿಯನ್ನು ಮಾಡಿದ್ದಾರೆ. ಬಿಜೆಪಿ ಕೂಡ ಈಗಾಗಲೇ ಉಪ ರಾಷ್ಟ್ರಪತಿ ಯಾರಾಗಬಹುದು ಎಂಬುದನ್ನ ಸ್ಪಷ್ಟಪಡಿಸಿದೆ. ಅಂದ್ರೆ ಬಿಜೆಪಿಯ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿರುವವರನ್ನೇ ಉಪ ರಾಷ್ಟ್ರಪತಿಯನ್ನಾಗಿಸುತ್ತೇವೆ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಈ ಹಿನ್ನೆಲೆ ಬಿಜೆಪಿಯಲ್ಲಿಯೇ ಚರ್ಚಿತವಾಗುತ್ತಿರುವ ಹೆಸರು ಅಂದ್ರೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ, ಬಿಹಾರ ಗವರ್ನರ್ ಆರೀಫ್ ಮೊಹಮ್ಮದ್ ಖಾನ್, ಗುಹರಾತ್ ಗವರ್ನರ್ ಆಚಾರ್ಯ ದೇವವ್ರತ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಕ್ಕಿಂ ಗವರ್ನರ್ ಓಂ ಮಾಥೂರ್, ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಆರ್ ಎಸ್ಎಸ್ ನ ಶೇಷಾದ್ರಿ ಚಾರಿ ಹೆಸರು ಕೂಡ ಚಾಲ್ತಿಯಲ್ಲಿದೆ. ಅಷ್ಟೇ ಅಲ್ಲ ಜೆಡಿಯು ಪಕ್ಷದವರ ಹೆಸರು ಕೂಡ ಉಪ ರಾಷ್ಟ್ರಪತಿ ಸ್ಥಾನಕ್ಕೆ ಓಡಾಡ್ತಾ ಇದೆ. ರಾಜ್ಯಸಭೆಯ ಹಾಲಿ ಉಪಸಭಾಪತಿ ಹರಿವಂಶ ರಾಯ್ ಅವರ ಹೆಸರು ಕೂಡ ಕೇಳಿ ಬರುತ್ತಿದೆ.
