ಚಿತ್ರದುರ್ಗ, (ಅ.11) : ದೊಡ್ಡ ಬ್ಯಾಂಕ್‍ಗಳ ರೀತಿಯಲ್ಲಿ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ವಹಿವಾಟು ನಡೆಸಿಕೊಂಡು ಸುಸ್ಥಿತಿಯಲ್ಲಿದೆ ಎನ್ನುವುದಾದರೆ ಅದಕ್ಕೆ ಅನೇಕರ ಶ್ರಮವಿದೆ ಎಂದು ಬೆಂಗಳೂರಿನ ವಾಸವಿ ಪೀಠಂ ಪೀಠಾಧ್ಯಕ್ಷರಾದ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಸಂತಸ ವ್ಯಕ್ತಪಡಿಸಿದರು.
ಇಲ್ಲಿನ ಅಂಬೇಡ್ಕರ್ ಪ್ರತಿಮೆ ಬಳಿಯಿರುವ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ನವೀಕೃತ ಶಾಖೆಯನ್ನು ಸೋಮವಾರ ಉದ್ಘಾಟಿಸಿ ನಂತರ ರೋಟರಿ ಬಾಲಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಬ್ಯಾಂಕ್, ಆಸ್ಪತ್ರೆ, ದೇವಸ್ಥಾನ, ಫೈನಾನ್ಸ್ ವಹಿವಾಟು ಇವುಗಳು ಎಲ್ಲಿ ಪಾರದರ್ಶಕವಾಗಿರುತ್ತದೋ ಅಂತಹ ಸಮಾಜ ಸದೃಢವಾಗಿ ಬೆಳೆಯುತ್ತದೆ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ಚಿತ್ರದುರ್ಗದಲ್ಲಿ ಉತ್ತಮ ವಹಿವಾಟು ನಡೆಸುತ್ತಿದ್ದು, ಗ್ರಾಹಕರಿಗೆ ಗುಣಮಟ್ಟದ ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಇದು ಜನಾಂಗದ ದೊಡ್ಡ ಸಾಧನೆ. ಎಲ್ಲಿಯೂ ನಷ್ಟ ಅನುಭವಿಸಿಲ್ಲ. ದಸರಾ ಹಬ್ಬದ ನವರಾತ್ರಿಯಲ್ಲಿ ದುರ್ಗಿ, ಮಹಾಲಕ್ಷ್ಮಿ, ಸರಸ್ವತಿಗೆ ಮೂರು ಮೂರು ದಿನಗಳ ಕಾಲ ಪೂಜೆ ಸಲ್ಲಿಸಲಾಗುವುದು. ಅದೇ ರೀತಿ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತಕ್ಕೆ ಆರ್ಥಿಕ ಶಕ್ತಿಯಿದೆ. ಮುಂದಿನ ದಿನಗಳಲ್ಲಿ ಇನ್ನು ಬಲವಾಗಲಿ ಎಂದು ಹಾರೈಸಿದರು.
ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಟಿ.ಭದ್ರಿನಾಥ್ ಮಾತನಾಡಿ ಯಾವುದೇ ಒಂದು ಸಮಾಜ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆದಾಗ ಮಾತ್ರ ಬಲಿಷ್ಟ ಸಮಾಜವಾಗಿ ಬೆಳೆಯಬಹುದು. ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತ ಮೂರು ಶಾಖೆಗಳನ್ನು ಹೊಂದಿದ್ದು, ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ವ್ಯಾಪಿಸುವಂತಾಗಲಿ. ಇಂದು ನವೀಕೃತ ಶಾಖೆಯ ಉದ್ಘಾಟನೆಯಾಗುತ್ತಿದೆ ಎಂದರೆ ನೂರಾರು ಮಂದಿ ಪರಿಶ್ರಮಪಟ್ಟಿದ್ದಾರೆ. ಹೀಗೆ ಮುಂದುವರೆಸಿಕೊಂಡು ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ. ಇದಕ್ಕೆ ಸಾರ್ವಜನಿಕರ ಸಹಕಾರ ಅತ್ಯವಶ್ಯಕ ಎಂದು ಹೇಳಿದರು.
ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತದ ಅಧ್ಯಕ್ಷ ಪಿ.ಎಸ್.ನಾಗರಾಜಶೆಟ್ರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇವಲ ಇ.ಸ್ಟಾಂಪಿಂಗ್ ತೆರೆಯುವುದಕ್ಕಾಗಿ ಇಲ್ಲಿ ಆರಂಭಿಸಿದ ಕನ್ಯಕಾಪರಮೇಶ್ವರಿ ಸೌಹಾರ್ಧ ಸಹಕಾರಿ ನಿಯಮಿತಿ ಈಗ ನವೀಕೃತ ಶಾಖೆಯನ್ನು ತೆರೆದಿರುವುದು ಅತ್ಯಂತ ಖುಷಿ ಕೊಟ್ಟಿದೆ. ಇದಕ್ಕೆ ಎಲ್ಲರ ಸಹಕಾರವಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಶಾಖೆಗಳನ್ನು ತೆರೆಯುವಂತಾಗಲಿ ಎಂದರು.
ದಿ.ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್‍ನ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಆರ್ಯವೈಶ್ಯ ಸಂಘದ ಅಧ್ಯಕ್ಷ ಎಸ್.ಎನ್.ಕಾಶಿವಿಶ್ವನಾಥಶೆಟ್ಟಿ, ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಎಲ್.ಸುರೇಶ್‍ರಾಜು ವೇದಿಕೆಯಲ್ಲಿದ್ದರು.
ಎಸ್.ಕೃಷ್ಣಕುಮಾರ್, ಎಲ್.ಆರ್.ಅನಿತಾರಾಜ್, ಎಲ್.ಬ್ರಹ್ಮಾನಂದಗುಪ್ತ, ಎಸ್.ಶ್ವೇತ, ಸಿ.ಹರೀಶ್, ಎಸ್.ಶೈಲಜಾ, ಕೆ.ವಿ.ಮಂಜುಪ್ರಸಾದ್, ಕೆ.ಎಸ್.ಸಂಜಯ್‍ಕುಮಾರ್ ಇನ್ನು ಅನೇಕರು ಸಮಾರಂಭದಲ್ಲಿದ್ದರು.
ಶ್ರೀವಳ್ಳಿ ರಾಜ್‍ಕುಮಾರ್ ಪ್ರಾರ್ಥಿಸಿದರು. ಎಲ್.ಬ್ರಹ್ಮಾನಂದಗುಪ್ತ ಸ್ವಾಗತಿಸಿದರು. ಎಸ್.ಕೃಷ್ಣಕುಮಾರ್ ವಂದಿಸಿದರು. ಶ್ರೀಮತಿ ಎಸ್.ಶ್ವೇತಾ ಕಾರ್ತಿಕ್, ಶ್ರೀಮತಿ ಎಸ್.ಶೈಲಜ ಇವರುಗಳು ನಿರೂಪಿಸಿದರು.