Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹರಕೆ ತೀರಿಸಿದ ‘ಕಾಂತಾರ’ ಟೀಂ : ಪೊಲೀಸ್ ಠಾಣೆ ಮೆಟ್ಟಿಲೇರಿದ ದೈವಸ್ಥಾನದ ಆಡಳಿತ ಮಂಡಳಿ..!

---Advertisement---

ದಕ್ಷಿಣ ಕನ್ನಡ: ಕಳೆದ‌ ಕೆಲವು ದಿನಗಳ ರಿಷಬ್ ಶೆಟ್ಟಿ ದೈವದ ಸೇವೆ ನಡೆಸಿದ್ದು, ದೈವ ಅವರ ತೊಡೆ ಮೇಲೆ ಮಲಗಿಕೊಂಡ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಅಲ್ಲಿನ ದೈವ ಭಕ್ತರೊಬ್ಬರು ದೈವಗಳನ್ನು ಬೀದಿಗೆ ತಂದು ನಿಲ್ಲಿಸಲಾಗಿದೆ ಎಂದು ಬೇಸರ ಹೊರ ಹಾಕಿದ್ದರು. ದೈವ ಈ ರೀತಿ ಮಡಿಲಲ್ಲಿ ಮಲಗುವುದು ಇಲ್ಲ ಎಂಬ ಮಾತನ್ನು ಹೇಳಿದ್ದರು. ಇದೀಗ ಇದಕ್ಕೆ ಸಂಬಂಧಿಸಿದಂತೆ ಇಂದು ಬಾರೆಬೈಲು ಶ್ರೀ ಜಾರಂದಾಯ ಬಂಟ ದೈವಸ್ಥಾನ ಮತ್ತು ಶ್ರೀ ವಾರಾಹಿ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ಸ್ಪಷ್ಟನೆ ನೀಡಿದೆ.

ನಟ ರಿಷಬ್ ಶೆಟ್ಟಿ ಅವರು ನೀಡಿದ ಹರಕೆ ನೇಮೋತ್ಸವ ಕಟ್ಟುಕಟ್ಟಳೆ ಹಾಗೂ ಕ್ಷೇತ್ರದ ಸಂಪ್ರದಾಯದಂತೆ ನಡೆದಿದೆ. ಕಳೆದ ಹಲವು ವರ್ಷಗಳಿಂದ ಇದೇ ಸಂಪ್ರದಾಯದಲ್ಲಿ ಎಣ್ಣೆ ಬೂಳ್ಯ ಪ್ರಕ್ರಿಯೆ ನಡೆಯುತ್ತದೆ. ಇಲ್ಲಿ ದೈವಕ್ಕೆ ಉಗ್ರದಲ್ಲಿ ಎಣ್ಣೆ ಬೂಳ್ಯ ಆಗುತ್ತದೆ. ರಿಷಬ್ ಶೆಟ್ಟಿ ನೇಮ ನೀಡುವುದಾಗಿ ಕೆಲ ತಿಂಗಳ ಹಿಂದೆ ಹರಕೆ ಹೇಳಿದ್ದರು. ಅದಕ್ಕಾಗಿ ದೈವದ ಬಳಿ ಅನುಮತಿ ಕೇಳಿದ್ದೆವು. ಅಪ್ಪಣೆಯೂ ದೊರಕಿತ್ತು. ಅದರಂತೆ ನೇಮ ನಡೆದಿದೆ. ಎಣ್ಣೆ ಬೂಳ್ಯದ ಸಂದರ್ಭದಲ್ಲಿ ದೈವ ಮಡಿಲಲ್ಲಿ ಮಲಗಿಲ್ಲ. ಸೇವಾಕರ್ತರ ಕೈ ಹಿಡಿದು ಅಲ್ಲೆ ನೆಲದಲ್ಲಿ ಕುಳಿತಿದೆ.

ಈ ಸಂಪ್ರದಾಯ ಹೊಸತೇನು ಅಲ್ಲ. ತುಳುನಾಡಿನ ಹಲವು ದೈವಸ್ಥಾನದಲ್ಲಿ ಈ ಸಂಪ್ರದಾಯವೇ ಇದೆ. ದೈವಸ್ಥಾನದ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಮಂಗಳೂರು ನಗರ ಪೊಲೀಸ್ ಆಯುಕ್ತರು ಮತ್ತು ಕದ್ರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...