ಬೆಳಗಾವಿ: ಎಂಇಎಸ್ ಪುಂಡರ ಪುಂಡಾಟ ನಿಲ್ಲುವ ಲಕ್ಷಣಗಳೇ ಕಾಣ್ತಿಲ್ಲ. ಒಂದಲ್ಲ ಒಂದು ಕಾರಣಕ್ಕೆ ಮತ್ತೆ ಮತ್ತೆ ಕನ್ನಡಿಗರನ್ನ ಕೆಣಕುತ್ತಲೆ ಇದ್ದಾರೆ. ಇದೀಗ ಅವರಿಗೆ ಬುದ್ಧಿ ಕಲಿಸಲು ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಡಿಸೆಂಬರ್ 31ಕ್ಕೆ ಕರ್ನಾಟಕ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಬಂದ್ ಸಂಬಂಧಿಸಿದಂತೆ ಮಾತನಾಡಿದ ಸಚಿವ ಆರ್ ಅಶೋಕ್, ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಈಗಾಗಲೇ ಕೊರೊನಾದಿಂದ ಜನ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಈಗ ಎಲ್ಲರ ಜೀವನ ಸುಧಾರಿಸುತ್ತಿದೆ. ಈಗ ಯಾವುದೇ ಕಾರಣಕ್ಕೂ ಬಂದ್ ಮಾಡೋದು ಬೇಡ ಎಂದಿದ್ದಾರೆ.
ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಚರ್ಚೆಯಾಗಿದೆ. ಇದೊಂದು ಪಕ್ಷ ಆಗಿರೋದ್ರಿಂದ ಕಾನೂನು ರೀತಿಯೇ ಬ್ಯಾನ್ ಮಾಡಬೇಕು ಎಂದಿದ್ದಾರೆ. ಬಂದ್ ಮಾಡುವವರಿಗೆ ನನ್ನದೊಂದು ಮನವಿ. ಯಾವುದೇ ಕಾರಣಕ್ಕೂ ಬಂದ್ ಮಾಡಬೇಡಿ ಎಂದಿದ್ದಾರೆ.
ಕನ್ನಡಿಗರಿಗೆ ಅಪಮಾನ ಆಗಿದೆ. ಹೀಗಾಗಿ ಬಂದ್ ಬಿಟ್ಟು ಬೇರೆ ದಾರಿಯಿಲ್ಲ. ಬಂದ್ ಗೆ ನೈತಿಕ ಬೆಂಬಲ ಬೇಡ. ನೇರವಾಗಿ ಬಂದ್ ನಲ್ಲಿ ಪಾಲ್ಗೊಳ್ಳಿ ಅಂತ ವಾಟಾಳ್ ನಾಗರಾಜ್ ಕರೆ ನೀಡಿದ್ದಾರೆ.