ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 12 : ಕಲಾಶ್ರೀ ಲೈಫ್ ಸ್ಟೈಲ್ ಅಂದ್ರೆ ಕೋಟೆನಾಡಿನ ಮಂದಿಗೆ ವಿಶೇಷ ಪ್ರೀತಿ. ಬಟ್ಟೆ ಶಾಪಿಂಗ್ ಹೋಗ್ಬೇಕು ಎಂದಾಕ್ಷಣಾ ಎಲ್ಲರಿಗೂ ನೆನಪಾಗೋದು ಕೂಡ ಇದೆ ಕಲಾಶ್ರೀ ಲೈಫ್ ಸ್ಟೈಲ್. ಯಾವಾಗಲೂ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ಕಲಾಶ್ರೀ ಲೈಫ್ ಸ್ಟೈಲ್ ಈಗ ಗ್ರಾಹಕರಿಗೋಸ್ಕರ ದೊಡ್ಡ ಹೆಜ್ಜೆ ಇಟ್ಟಿದೆ. ಅದುವೆ ಕಲಾಶ್ರೀ ಲೈಫ್ ಸ್ಟೈಲ್.
ಜಿಲ್ಲೆಯಾದ್ಯಂತ ಮನೆ ಮಾತಾಗಿದ್ದ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ಮತ್ತಷ್ಟು ವಿಶೇಷಗಳೊಂದಿಗೆ ಮತ್ತು ಅತ್ಯಾಧುನಿಕ ರೀತಿಯಲ್ಲಿ ಅಕ್ಟೋಬರ್ 13 ರಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ. ಇಷ್ಟು ದಿನಗಳ ಕಾಲ ನಗರದ ಅಮೋಘ ಕಾಂಪ್ಲೆಕ್ಸ್ ಎದುರುಗಡೆ ಇದ್ದ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ನಗರದ ಆನೆ ಬಾಗಿಲು ಬಳಿ, ಮೌರ್ಯ ಲಾಡ್ಜ್ ಸಮೀಪದ ಲಕ್ಷ್ಮೀ ಬಜಾರ ಹತ್ತಿರದ ಮೂರಂತಸ್ತಿನ ಸ್ವಂತ ಮಳಿಗೆಯಲ್ಲಿ ಸ್ಥಳಾಂತರವಾಗಿದೆ. ಚಿತ್ರದುರ್ಗದ ಮಟ್ಟಿಗೆ ಇದೊಂದು ಏಕೈಕ ಮೂರು ಅಂತಸ್ತಿನ, ಅತ್ಯಾಧುನಿಕ ರೀತಿಯ ಕಣ್ಮನ ಸೆಳೆಯುವ ಶೋರೂಂ ಆಗಿದೆ. ಹೀಗಾಗಿ ಕೋಟೆನಾಡಿನ ಜನರನ್ನ ಆಕರ್ಷಿಸುವುದಕ್ಕೂ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.
ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಬಟ್ಟೆಗಳನ್ನು ನೀಡಿದರೆ ಗ್ರಾಹಕರಿಗೆ ಅದಕ್ಕಿಂತ ಮತ್ತೊಂದು ಖುಷಿ ಇದ್ಯಾ. ಈಗ ಕಲಾಶ್ರೀ ಲೈಫ್ ಸ್ಟೈಲ್ ಜನರನ್ನ ಗುಣಮಟ್ಟದ ಬಟ್ಟೆಗಳ ಜೊತೆಗೆ ಕಡಿಮೆ ದರದಲ್ಲಿ ಸೆಳೆಯುತ್ತಿದೆ. ಚಿತ್ರದುರ್ಗ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ತನ್ನದೇ ಆದ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬಂದಿರುವ ಕಲಾಶ್ರೀ ಲೈಫ್ ಸ್ಟೈಲ್ ಇದೀಗ ಮತ್ತಷ್ಟು ವಿಧವಾದ ಅತ್ಯಾಧುನಿಕ ನಮೂನೆಯ ರೇಷ್ಮೆ ಸೀರೆಗಳು, ಕಾಂಜೀವರಂ ರೇಷ್ಮೆ ಸೀರೆಗಳು, ಮದುವೆ ಸೇರಿದಂತೆ ಶುಭ ಸಮಾರಂಭಗಳಿಗೆ ಶೂಟಿಂಗ್, ಷರ್ಟಿಂಗ್, ಸೂಟ್, ಶೇರ್ವಾನಿ, ಮಕ್ಕಳ ರೆಡಿಮೇಡ್ ಉಡುಪುಗಳು ಹಾಗೂ ಎಲ್ಲಾ ರೀತಿಯ ಬ್ರಾಂಡೆಡ್ ಉಡುಪುಗಳು 10 + 5 % ರಿಯಾಯಿತಿ ದರದಲ್ಲಿ ದೊರೆಯುತ್ತವೆ. ಚಿತ್ರದುರ್ಗ ಜಿಲ್ಲೆಯ ಮದುವೆ ಜವಳಿಗೆ ಹೆಸರಾಂತ ಶೋರೂಂ ಇದಾಗಿದೆ.



