Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಚಿತ್ರದುರ್ಗದಲ್ಲೂ ‘ಕಬ್ಜ’ ಹವಾ : ಸಿನಿಮಾ ಜೋಶು ಜೋರು…!

---Advertisement---

ಸುದ್ದಿಒನ್ ಡೆಸ್ಕ್

ಚಿತ್ರದುರ್ಗ, (ಮಾ.17) : ಇಂದು ಕಬ್ಜ ಸಂಭ್ರಮ.. ಕಬ್ಜ ಸಿನಿಮಾ ನೋಡುವ ಕುತೂಹಲಕ್ಕಿಂದು ತೆರೆ ಬೀಳುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡಲಾಗಿದೆ. ಹೀಗಾಗಿ ಇಂದು ಅಪ್ಪು ಅವರ ಹುಟ್ಟಿದ ಹಬ್ಬದ ದಿನಕ್ಕೆಂದೆ‌ಏ ಸಿನಿಮಾ ರಿಲೀಸ್ ಮಾಡಲಾಗಿದೆ. ಎಲ್ಲೆಡೆ ಕಬ್ಜ ಸಿನಿಮಾದ ಜೋಶ್ ನಲ್ಲಿದ್ದಾರೆ ಜನ. ಕೋಡೆನಾಡು ಚಿತ್ರದುರ್ಗದಲ್ಲೂ ಬೆಳಗ್ಗೇನೆ ಥಿಯೇಟರ್ ಮುಂದೆ ಸಾಲು ಗಟ್ಟಿ ನಿಂತ ದೃಶ್ಯ ಕಂಡು ಬಂದಿದೆ.

ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕಬ್ಜ ಸಿನಿಮಾ ತೆರೆ ಕಂಡಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಈ ಮೊದಲ ಶೋ ನೋಡಲು ಪ್ರೇಕ್ಷಕರು ಬೆಳಗ್ಗೇನೆ ಬಂದಿದ್ದಾರೆ. ಇನ್ನು ಕಬ್ಜ ಸಿನಿಮಾದ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಸಿನಿಮಾವು ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿದರು.

ಚಿತ್ರಮಂದಿರದ ಆವರಣದಲ್ಲಿ ಉಪೇಂದ್ರ ಅವರ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿದ್ದರು. ತಮ್ಮ‌ ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಾ ಎಂಜಾಯ್ ಮಾಡಿದ್ದಾರೆ. ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment