
ಸುದ್ದಿಒನ್ ಡೆಸ್ಕ್

ಚಿತ್ರದುರ್ಗ, (ಮಾ.17) : ಇಂದು ಕಬ್ಜ ಸಂಭ್ರಮ.. ಕಬ್ಜ ಸಿನಿಮಾ ನೋಡುವ ಕುತೂಹಲಕ್ಕಿಂದು ತೆರೆ ಬೀಳುತ್ತಿದೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗಾಗಿ ಈ ಸಿನಿಮಾ ಅರ್ಪಣೆ ಮಾಡಲಾಗಿದೆ. ಹೀಗಾಗಿ ಇಂದು ಅಪ್ಪು ಅವರ ಹುಟ್ಟಿದ ಹಬ್ಬದ ದಿನಕ್ಕೆಂದೆಏ ಸಿನಿಮಾ ರಿಲೀಸ್ ಮಾಡಲಾಗಿದೆ. ಎಲ್ಲೆಡೆ ಕಬ್ಜ ಸಿನಿಮಾದ ಜೋಶ್ ನಲ್ಲಿದ್ದಾರೆ ಜನ. ಕೋಡೆನಾಡು ಚಿತ್ರದುರ್ಗದಲ್ಲೂ ಬೆಳಗ್ಗೇನೆ ಥಿಯೇಟರ್ ಮುಂದೆ ಸಾಲು ಗಟ್ಟಿ ನಿಂತ ದೃಶ್ಯ ಕಂಡು ಬಂದಿದೆ.
ಚಿತ್ರದುರ್ಗದಲ್ಲಿ ಕಬ್ಜ ಚಿತ್ರ ನೋಡಲು ಬಂದ ಪ್ರೇಕ್ಷಕರು…! pic.twitter.com/uwDfNkfSm6
— suddione-kannada News (@suddione) March 17, 2023
ನಗರದ ಬಸವೇಶ್ವರ ಚಿತ್ರಮಂದಿರದಲ್ಲಿ ಕಬ್ಜ ಸಿನಿಮಾ ತೆರೆ ಕಂಡಿದೆ. ಇಂದು ಬೆಳಿಗ್ಗೆ 8 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಈ ಮೊದಲ ಶೋ ನೋಡಲು ಪ್ರೇಕ್ಷಕರು ಬೆಳಗ್ಗೇನೆ ಬಂದಿದ್ದಾರೆ. ಇನ್ನು ಕಬ್ಜ ಸಿನಿಮಾದ ಕಟೌಟ್ ಗೆ ಕ್ಷೀರಾಭಿಷೇಕ ಮಾಡಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಈ ಸಿನಿಮಾವು ಶತದಿನೋತ್ಸವ ಆಚರಿಸಲೆಂದು ಶುಭ ಹಾರೈಸಿದರು.
ಚಿತ್ರಮಂದಿರದ ಆವರಣದಲ್ಲಿ ಉಪೇಂದ್ರ ಅವರ ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿದ್ದರು. ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕುತ್ತಾ ಎಂಜಾಯ್ ಮಾಡಿದ್ದಾರೆ. ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.
GIPHY App Key not set. Please check settings