Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪದವೀಧರರಿಗೆ ಉದ್ಯೋಗಾವಕಾಶ: SBIನಲ್ಲಿ 7,150 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

---Advertisement---

ಸುದ್ದಿಒನ್,ಮೇ.24: ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಯುವಜನತೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಭರ್ಜರಿ ಸಿಹಿ ಸುದ್ದಿ ನೀಡಿದೆ. ದೇಶಾದ್ಯಂತ ಖಾಲಿ ಇರುವ ಒಟ್ಟು 7,150 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಮುಗಿಸಿರುವ ಅಭ್ಯರ್ಥಿಗಳಿಗೆ ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ನಲ್ಲಿ ಕೆಲಸ ಮಾಡಲು ಇದು ಸುವರ್ಣ ಅವಕಾಶವಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ಆನ್ಲೈನ್ ನೋಂದಣಿ ಪ್ರಕ್ರಿಯೆಯು ಈಗಾಗಲೇ 2026 ಮೇ 19 ರಿಂದ ಪ್ರಾರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 2026 ಜೂನ್ 8 ರ ಒಳಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.

ಪ್ರಮುಖ ವಿವರಗಳು:
ಒಟ್ಟು ಹುದ್ದೆಗಳು: 7,150

ತರಬೇತಿ ಅವಧಿ: 1 ವರ್ಷ

ಮಾಸಿಕ ಸ್ಟೈಫಂಡ್: ₹15,000 (ಒಂದು ವರ್ಷದ ಅವಧಿಗೆ ಮಾತ್ರ, ಯಾವುದೇ ಹೆಚ್ಚುವರಿ ಭತ್ಯೆಗಳು ಇರುವುದಿಲ್ಲ).

ಅರ್ಹತೆ ಮತ್ತು ವಯೋಮಿತಿ:
ವಿದ್ಯಾಹರ್ಹತೆ: ಯಾವುದೇ ವಿಷಯದಲ್ಲಿ ಪದವಿ (Degree) ಉತ್ತೀರ್ಣರಾಗಿರಬೇಕು.

ವಯೋಮಿತಿ: ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ತುಂಬಿರಬೇಕು (ಸಾಮಾನ್ಯ ಮತ್ತು EWS ಅಭ್ಯರ್ಥಿಗಳಿಗೆ). ಸರ್ಕಾರದ ನಿಯಮಗಳ ಪ್ರಕಾರ SC, ST, OBC ಮತ್ತು PwBD ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ:
ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ ಎರಡು ಹಂತಗಳಲ್ಲಿ ಮಾಡಲಾಗುತ್ತದೆ.

ಆನ್ಲೈನ್ ಲಿಖಿತ ಪರೀಕ್ಷೆ: ಈ ಪರೀಕ್ಷೆಯು 2026 ರ ಜುಲೈ ತಿಂಗಳಿನಲ್ಲಿ ನಡೆಯುವ ಸಾಧ್ಯತೆಯಿದೆ.

ಸ್ಥಳೀಯ ಭಾಷಾ ಪರೀಕ್ಷೆ (Local Language Test): ಆಯಾ ರಾಜ್ಯದ ಸ್ಥಳೀಯ ಭಾಷೆಯ ಮೇಲಿನ ಹಿಡಿತವನ್ನು ಪರೀಕ್ಷಿಸಲಾಗುತ್ತದೆ. (ಒಂದು ವೇಳೆ ನಿಮ್ಮ 10ನೇ ತರಗತಿ ಅಥವಾ ಪಿಯುಸಿಯಲ್ಲಿ ಸ್ಥಳೀಯ ಭಾಷೆಯನ್ನು ಒಂದು ವಿಷಯವಾಗಿ ಓದಿದ್ದರೆ, ಈ ಪರೀಕ್ಷೆಯಿಂದ ವಿನಾಯಿತಿ ಸಿಗುವ ಅವಕಾಶವಿದೆ).

ಪರೀಕ್ಷಾ ಮಾದರಿ:
ಒಟ್ಟು 100 ಅಂಕಗಳಿಗೆ 100 ವಸ್ತುನಿಷ್ಠ (Objective) ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಯ ಅವಧಿ 60 ನಿಮಿಷಗಳು. ಇದರಲ್ಲಿ 4 ವಿಭಾಗಗಳಿರುತ್ತವೆ:

ಜನರಲ್ / ಫೈನಾನ್ಶಿಯಲ್ ಅವೇರ್ನೆಸ್

ಜನರಲ್ ಇಂಗ್ಲಿಷ್

ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್

ರೀಸನಿಂಗ್ ಎಬಿಲಿಟಿ ಮತ್ತು ಕಂಪ್ಯೂಟರ್ ಆಪ್ಲಿಟ್ಯೂಡ್

ಅರ್ಜಿ ಶುಲ್ಕ:
ಸಾಮಾನ್ಯ (General), OBC, EWS ಅಭ್ಯರ್ಥಿಗಳಿಗೆ: ₹300

SC, ST, PwBD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ (ಸಂಪೂರ್ಣ ವಿನಾಯಿತಿ).

ಅರ್ಜಿ ಸಲ್ಲಿಸುವ ವಿಧಾನ (ಹಂತ-ಹಂತವಾಗಿ):
ಅಭ್ಯರ್ಥಿಗಳು ನೇರವಾಗಿ ಎಸ್ಬಿಐ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಮೊದಲು ಕೇಂದ್ರ ಸರ್ಕಾರದ ಎನ್ಎಪಿಎಸ್ (NAPS) ಪೋರ್ಟಲ್ನಲ್ಲಿ ನೋಂದಾಯಿಸಿಕೊಳ್ಳಬೇಕು.

ಹಂತ 1 (NAPS ನೋಂದಣಿ): ಮೊದಲು NAPS ಪೋರ್ಟಲ್ https://apprenticeshipindia.gov.in ಗೆ ಭೇಟಿ ನೀಡಿ ನಿಮ್ಮ ವಿವರಗಳೊಂದಿಗೆ ನೋಂದಣಿ ಮಾಡಿಕೊಳ್ಳಿ ಮತ್ತು ನೋಂದಣಿ ಐಡಿ ಪಡೆಯಿರಿ.

ಹಂತ 2 (SBI ವೆಬ್ಸೈಟ್ ಭೇಟಿ): ಎನ್ಎಪಿಎಸ್ ಐಡಿ ಸಿಕ್ಕ ನಂತರ, ಎಸ್ಬಿಐ ಅಧಿಕೃತ ಕೆರಿಯರ್ಸ್ ವೆಬ್ಸೈಟ್ https://www.sbi.co.in/careers ಗೆ ಭೇಟಿ ನೀಡಿ.

ಹಂತ 3 (ಲಿಂಕ್ ಕ್ಲಿಕ್ ಮಾಡಿ): ಹೋಮ್ ಪೇಜ್ನಲ್ಲಿರುವ ‘Join SBI’ ಸೆಕ್ಷನ್ಗೆ ಹೋಗಿ, ಅಲ್ಲಿ ಕಾಣಿಸುವ ‘SBI Apprentice Recruitment 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಹಂತ 4 (ಅರ್ಜಿ ಭರ್ತಿ): ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ ಮತ್ತು NAPS ನೋಂದಣಿ ಸಂಖ್ಯೆಯನ್ನು ನಮೂದಿಸಿ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ. ನಿಮ್ಮ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.

ಹಂತ 5 (ಶುಲ್ಕ ಪಾವತಿ ಮತ್ತು ಸಬ್ಮಿಟ್): ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್ಲೈನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ. ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಬ್ಮಿಟ್ ಮಾಡಿ. ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ರಶೀದಿಯನ್ನು ಪ್ರಿಂಟ್ ಅಥವಾ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now