ಬೆಂಗಳೂರು: ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆಗೆ ಒತ್ತಾಯಿಸಿ ಪಾದಯಾತ್ರೆ ಘೋಷಣೆ ಮಾಡುತ್ತಿದ್ದಂತೆ, ಜೆಡಿಎಸ್ ನವರು ಜಲಧಾರೆ ಯಾತ್ರೆ ಮೂಲಕ ಜನರನ್ನ ಸೆಳೆಯಲು ಸಿದ್ದತೆ ನಡೆಸಿಕೊಂಡಿದ್ದರು. ಇದೇ ಜನವರಿ 26 ರಿಂದ ಜೆಡಿಎಸ್ ಜಲಾಧಾರೆ ಯಾತ್ರೆ ಆರಂಭವಾಗಬೇಕಿದೆ.
ಆದ್ರೆ ರಾಜ್ಯದಲ್ಲಿ ಕೊರೊನಾ ಹೆಚ್ಚಳದ ಭಯದಲ್ಲಿ ಸರ್ಕಾರವೂ ಇದೆ, ಜನರು ಇದ್ದಾರೆ. ಈ ಕಾರಣದಿಂದಾಗಿಯೇ ಕಾಂಗ್ರೆಸ್ ನಾಯಕರ ಮೇಕೆದಾಟು ಪಾದಯಾತ್ರೆ ಐದೆ ದಿನಕ್ಕೆ ಅಂತ್ಯವಾಗಿದ್ದು. ಇದೀಗ ಜೆಡಿಎಸ್ ನ ಜಲಧಾರೆಗೂ ಕೊರೊನಾ ಅಡ್ಡಿಯಾಗುತ್ತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ರಾಜ್ಯದ ನಿರಾವರಿ ಯೋಜನೆಗಳ ಜಾರಿಗಾಗಿ ಮಹಾ ಸಂಕಲ್ಪ ಮಾಡುವ ಉದ್ದೇಶದಿಂದ ಜೆಡಿಎಸ್ ಜಲಧಾರೆ ಯೋಜನೆಯನ್ನ ಹಾಕಿಕೊಂಡಿದ್ದರು. ರ್ಯಾಲಿ, ಪಾದಯಾತ್ರೆ ಹೀಗೆ ಹೆಚ್ಚು ಜನ ಒಗ್ಗೂಡುವ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಹೀಗಾಗಿ ಜಲಧಾರೆ ಕಾರ್ಯಕ್ರಮಕ್ಕೆ ಆರಂಭಕ್ಕೂ ಮುನ್ನವೇ ವಿಘ್ನ ಕಾಡುತ್ತಿದೆ.
ಇನ್ನು ಈಗಾಗಲೇ ಜೆಡಿಎಸ್ ನಲ್ಲೆ ಈ ಯಾತ್ರೆ ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಯಾಕಂದ್ರೆ ಕೊರೊನಾ ಟಫ್ ರೂಲ್ಸ್ ಮುರಿದು, ಕೊರೊನಾ ಹೆಚ್ಚಾದರೆ ಆ ಅಪವಾದ ಜೆಡಿಎಸ್ ಮೇಲೆಯೇ ಬರಲಿದೆ. ಹೀಗಾಗಿ ಆ ಅಪವಾದಕ್ಕಿಂತ ಕೊರೊನಾ ತಗ್ಗಿದ ಮೇಲೆಯೇ ಯಾತ್ರೆ ಕೈಗೊಳ್ಳುವ ಫ್ಲ್ಯಾನ್ ಜೆಡಿಎಸ್ ನವರದ್ದಾಗಿದೆ.