Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಂಚಮಸಾಲಿ ಪೀಠದಿಂದ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ..!

---Advertisement---

ಕೂಡಲ ಸಂಗಮ ಪೀಠದಲ್ಲಿ ದೊಡ್ಡ ಬೆಳವಣಿಗೆಯೇ ನಡೆದಿದ್ದು, ಪೀಠದಿಂದ ಜಯಮೃತ್ಯುಂಜಯ ಸ್ವಾಮೀಜಿಯನ್ನ ಉಚ್ಛಾಟನೆ ಮಾಡಲಾಗಿದೆ. ಜಯ ಮೃತ್ಯುಂಜಯ ಸ್ವಾಮೀಜಿಗಳು ಹೆಚ್ಚಾಗಿ ರಾಜಕಾರಣಿಗಳ ಬಗ್ಗೆಯೇ ಮಾತನಾಡ್ತಾ ಇದ್ದರು. ಹಿಂದಿನಿಂದಲೂ ನೇರವಾಗಿ ರಾಜಕಾರಣಿಗಳ ಮೇಲೆ ಕಿಡಿಕಾರುತ್ತಿದ್ದರು. ಅದರಲ್ಲೂ ಕಾಶಪ್ಪನವರ್ ಮೇಲೆ ಆಕ್ರೋಶ ಹೊರ ಹಾಕುತ್ತಿದ್ದರು. ಇದೀಗ ಟ್ರಸ್ಟ್ ನಿಂದಲೇ ಉಚ್ಛಾಟನೆಗೊಂಡಿದ್ದಾರೆ.

ಟ್ರಸ್ಟ್ ಸದಸ್ಯರ ಮಾತು ಕೇಳಲ್ಲ, ಪೀಠದಲ್ಲಿ ಇರಲ್ಲ. ಸ್ವಾಮೀಜಿ ಸ್ವಂತವಾಗಿ ಜೋರು ಆಸ್ತಿ ಪಾಸ್ತಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಅವರನ್ನು ಉಚ್ಛಾಟನೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾಶಪ್ಪನವರ್ ಮಾತನಾಡಿ, ಕೂಡಲಸಂಗಮ ಪೀಠದಲ್ಲಿಯೇ ಆಸ್ತಿ ಇದೆ. 13 ಎಕರೆಯಿದೆ. ಇಲ್ಲಿಯೇ ಒಂದು ಶಾಲೆಯನ್ನು ಕೂಡ ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲೂ ಆಸ್ತಿ ಇದೆ. ಅದು ಅವರ ಸ್ವಯಂ ಘೋಷಿತ ಟ್ರಸ್ಟ್. ಇಲ್ಲಿ ಏನಿದೆ, ಸ್ವಯಂ ಘೋಷಿತ ಆಸ್ತಿಯನ್ನ ಪೂಜ್ಯರಾಗಲಿ, ಯಾರೂ ಹೊಂದಬಾರದು ಎಂಬ ಕಾರಣಕ್ಕೆ ನಮ್ಮ ಹಿರಿಯರು ಒಂದು ಮಹತ್ವದ ನಿರ್ಣಯವನ್ನ ಕೈಗೊಂಡಿದ್ದಾರೆ. ಆ ನಿರ್ಧಾರಕ್ಕೆ ನಾನು ಕೂಡ ಬದ್ಧವಾಗಿದ್ದೇನೆ.

ಇಲ್ಲಿ ನಾನೊಬ್ಬನೆ ಇಲ್ಲ, ಎಲ್ಲಾ ಧರ್ಮದರ್ಶಿಗಳು ಸುಮಾರು 47 ಧರ್ಮದರ್ಶಿಗಳು ಮಾಡಿರುವಂತಹ ನಿರ್ಧಾರ ಅದು. ಅದನ್ನ ಒಪ್ಪಿಕೊಳ್ಳಲೇಬೇಕಿದೆ. ಯಾಕಂದ್ರೆ ನಾನು ಅಧ್ಯಕ್ಷನಾಗಿದ್ದೇನೆ. ರಾಜಕಾರಣಿ ಕೂಡ. ನನ್ನ ಹೊತ್ತಿ ಉರಿಯುವಂತ ಕೆಲಸವನ್ನ ಈಗಾಗಲೇ ಮಾಡಿದ್ದಾರೆ. ಬಾಗಿಲ ಹಾಕಿದ್ರು, ವಿಷ ಪ್ರಾಶನ ಮಾಡಿದ್ರು ಇನ್ನು ಆರೋಪಗಳನ್ನ ನಮ್ಮ ಮೇಲೆ ಮಾಡುವುದಕ್ಕೆ ಬರ್ತಾರೆ ಎಂದಿದ್ದಾರೆ. ಪ್ರಸ್ತುತ ಕೂಡಲ ಸಂಗಮದಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತಿವೆ. ಮುಂದೆ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...