ಚಿತ್ರದುರ್ಗ, (ಆ.15) : ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ (Chitradurga District IT Dealers Association) 75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಟ್ ಪಟ್ ನಗರ ಚಿತ್ರದುರ್ಗ ಇಲ್ಲಿ ಆ 15 ಸೋಮವಾರದಂದು ನಡೆಯಿತು,
ಕಾರ್ಯಕ್ರಮದಲ್ಲಿ ಶ್ರೀ ದೂರೆಸ್ವಾಮಿಗಳಿಂದ ಧ್ವಜಾರೋಹಣ ನೇರವೇರಿತು. ನಂತರ ಮಕ್ಕಳಿಂದ ದೇಶಭಕ್ತಿಗೀತೆ, ನಾಡಗೀತೆ ಮತ್ತು ನೃತ್ಯರೂಪಕ ಕಾರ್ಯಕ್ರಮಗಳು ನೇರೆವೇರಿದವು.
ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಮಕ್ಕಳಿಗೆ CDITDA ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು . ಮತ್ತು ಶಾಲೆಯ ಎಲ್ಲಾ 99 ಮಕ್ಕಳಿಗೆ ಪುಸ್ತಕ, ಪೆನ್ ,ಪೆನ್ಸಿಲ್ ಮತ್ತು ಜಾಮಿಟ್ರಿಗಳನ್ನು ಸಂಘದ ನಿರ್ದೇಶಕರಾದ ಮಹೇಶ.ಜಿ.ಎನ್, ದಸ್ತಗೀರ್ ಬೇಗ್ ,ನಾಗರಾಜ್ ಮಲಸಾನಿ,ರಾಘವೇಂದ್ರ .ಎಂ.ಜೆ ,ವಿಜಯ್ ಕುಮಾರ್
ಮೋಹನ್ .ಸಿ.ಎನ್, ದಿವಾಕರ್ , ರಾಘವೇಂದ್ರ .ಜಿ ಮತ್ತು ಸದಸ್ಯರಾದ ಶ್ರೀ ಬಸವರಾಜಯ್ಯ ಬಿ.ಎಮ್ ವಿತರಿಸಿದರು.
CDITDA ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಮಾತನಾಡಿ ಮಕ್ಕಳಿಗೆ ದೇಶಭಕ್ತಿಯ ಬಗ್ಗೆ ತಿಳಿಸಿದರು ಹಾಗೂ ಮುಂದಿನ ಸ್ವಾತಂತ್ರ್ಯದ ಶತಮಾನೋತ್ಸವ ಪ್ರಜೆಗಳಾಗಿ ಬಾಳಿ ದೇಶ ನಾಡಿಗೆ ಕೀರ್ತಿಯನ್ನು ತರುವಂತೆ ಆಶಿಸಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ಭೂದಾನಿಗಳಾದ ದೂರೆಸ್ವಾಮಿ, SDMC ಅಧ್ಯಕ್ಷರಾದ ಸುನಿತಾಕುಮಾರಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಧಾದೇವಿ ಆಗನೂರು,ಹಾಗೂ ಶಿಕ್ಷಕರ ಮಂಡಳಿ ಮತ್ತು CDITDA ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಜಿಲ್ಲಾ ಕಾರ್ಯದರ್ಶಿಯಾದ ವೆಂಕಟೇಶ್‍ಮೂರ್ತಿ.ಎನ್.ವಿ, ಹಾಗೂ ಸಂಘದ ನಿರ್ದೇಶಕರು ಮಂಡಳಿಯ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.