ಜಟ್ ಪಟ್ ನಗರದ ಸರ್ಕಾರಿ ಶಾಲೆ 75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಕಾರ್ಯಕ್ರಮ

suddionenews
1 Min Read

ಚಿತ್ರದುರ್ಗ, (ಆ.15) : ಚಿತ್ರದುರ್ಗ ಜಿಲ್ಲಾ ಕಂಪ್ಯೂಟರ್ಸ್ ಮಾರಾಟಗಾರರ ಸಂಘ (ರಿ). ಚಿತ್ರದುರ್ಗ (Chitradurga District IT Dealers Association)  75ನೇ ಸ್ವಾತಂತ್ರ್ಯ ದ ಅಮೃತ ಮಹೋತ್ಸವ  ಕಾರ್ಯಕ್ರಮನ್ನು ಸರ್ಕಾರಿ  ಹಿರಿಯ ಪ್ರಾಥಮಿಕ ಶಾಲೆ ಜಟ್ ಪಟ್  ನಗರ ಚಿತ್ರದುರ್ಗ ಇಲ್ಲಿ ಆ 15 ಸೋಮವಾರದಂದು ನಡೆಯಿತು,

ಕಾರ್ಯಕ್ರಮದಲ್ಲಿ ಶ್ರೀ ದೂರೆಸ್ವಾಮಿಗಳಿಂದ ಧ್ವಜಾರೋಹಣ ನೇರವೇರಿತು. ನಂತರ ಮಕ್ಕಳಿಂದ ದೇಶಭಕ್ತಿಗೀತೆ, ನಾಡಗೀತೆ ಮತ್ತು ನೃತ್ಯರೂಪಕ ಕಾರ್ಯಕ್ರಮಗಳು ನೇರೆವೇರಿದವು.

ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಯಲ್ಲಿ ಮಕ್ಕಳಿಗೆ CDITDA ಸಂಘದ ವತಿಯಿಂದ ಬಹುಮಾನಗಳನ್ನು ವಿತರಣೆ ಮಾಡಲಾಯಿತು . ಮತ್ತು ಶಾಲೆಯ ಎಲ್ಲಾ 99 ಮಕ್ಕಳಿಗೆ ಪುಸ್ತಕ, ಪೆನ್ ,ಪೆನ್ಸಿಲ್  ಮತ್ತು ಜಾಮಿಟ್ರಿಗಳನ್ನು ಸಂಘದ ನಿರ್ದೇಶಕರಾದ  ಮಹೇಶ.ಜಿ.ಎನ್, ದಸ್ತಗೀರ್ ಬೇಗ್ ,ನಾಗರಾಜ್ ಮಲಸಾನಿ,ರಾಘವೇಂದ್ರ .ಎಂ.ಜೆ ,ವಿಜಯ್ ಕುಮಾರ್
ಮೋಹನ್ .ಸಿ.ಎನ್, ದಿವಾಕರ್ , ರಾಘವೇಂದ್ರ .ಜಿ ಮತ್ತು ಸದಸ್ಯರಾದ ಶ್ರೀ ಬಸವರಾಜಯ್ಯ ಬಿ.ಎಮ್ ವಿತರಿಸಿದರು.

CDITDA ಸಂಘದ ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಮಾತನಾಡಿ ಮಕ್ಕಳಿಗೆ ದೇಶಭಕ್ತಿಯ ಬಗ್ಗೆ ತಿಳಿಸಿದರು ಹಾಗೂ ಮುಂದಿನ ಸ್ವಾತಂತ್ರ್ಯದ ಶತಮಾನೋತ್ಸವ ಪ್ರಜೆಗಳಾಗಿ ಬಾಳಿ ದೇಶ ನಾಡಿಗೆ ಕೀರ್ತಿಯನ್ನು ತರುವಂತೆ ಆಶಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಭೂದಾನಿಗಳಾದ ದೂರೆಸ್ವಾಮಿ, SDMC  ಅಧ್ಯಕ್ಷರಾದ ಸುನಿತಾಕುಮಾರಿ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಸುಧಾದೇವಿ ಆಗನೂರು,ಹಾಗೂ  ಶಿಕ್ಷಕರ ಮಂಡಳಿ ಮತ್ತು CDITDA ಜಿಲ್ಲಾ ಅಧ್ಯಕ್ಷರಾದ ಶಿವಕುಮಾರ್.ಕೆ.ಸಿ, ಜಿಲ್ಲಾ ಕಾರ್ಯದರ್ಶಿಯಾದ ವೆಂಕಟೇಶ್‍ಮೂರ್ತಿ.ಎನ್.ವಿ, ಹಾಗೂ ಸಂಘದ ನಿರ್ದೇಶಕರು ಮಂಡಳಿಯ ಸದಸ್ಯರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *