ಜಾಗತಿಕ ಭಯೋತ್ಪಾದನೆ ಮತ್ತು ಭದ್ರತಾ ಸವಾಲು : ಬೆಳಗಾವಿಯಲ್ಲಿ ನಡೆಯುತ್ತಿದೆ ಭಾರತ – ಜಪಾನ್ ನಡುವೆ ಸಮರಾಭ್ಯಾಸ..!

ಬೆಳಗಾವಿ: ಜಿಲ್ಲೆಯ ಮರಾಠ ಲಘುಪದಾತಿದಳದ ಕೇಂದ್ರದಲ್ಲಿ ಸಮಾರಾಭ್ಯಾಸ ನಡೆಯುತ್ತಿದೆ. ಭಾರತ ಮತ್ತು ಜಪಾನ್ ಜಂಟಿ ಅಭ್ಯಾಸ ನಡೆಸುತ್ತಿವೆ. ಮಾರ್ಚ್ 12ರವರೆಗೂ ಈ ಸಮಾರಾಭ್ಯಾಸ ನಡೆಯಲಿದೆ.

ಜಾಗತಿಕ ಭಯೋತ್ಪಾದನೆ ಮತ್ತು ಭದ್ರತಾ ಸವಾಲುಗಳ ಹಿನ್ನೆಲೆಯಲ್ಲಿ ಈ ಸಮಾರಾಭ್ಯಾಸ ನಡೆಯುತ್ತಿದೆ. ಅರಣ್ಯ ಮತ್ತು ನಗರ ಪ್ರದೇಶದಲ್ಲಿನ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೂ ಈ ತರಬೇತಿ ನೀಡಲಾಗುತ್ತಿದೆ. ಈ ಸಮಾರಾಭ್ಯಾಸಕ್ಕೆ ಧರ್ಮ ಗಾರ್ಡಿಯನ್ 2021 ಎಂದು ಹೆಸರಿಡಲಾಗಿದೆ.

ರಕ್ಷಣಾ ಸಹಾಕಾರ ಮಟ್ಟದ ವೃದ್ಧಿಗಾಗಿಯೂ ಈ ಜಂಟಿ ಅಭ್ಯಾಸ ನಡೆಸಲಾಗುತ್ತಿದೆ. ಫೆಬ್ರವರಿ 12ರಿಂದ ಶುರುವಾಗಿರುವ ಈ ಸಮಾರಾಭ್ಯಾಸ ಮಾರ್ಚ್ 12ಕ್ಕೆ ಮುಗಿಯಲಿದೆ. ಸದ್ಯಕ್ಕೆ ಎರಡು ದೇಶದ ನಡುವಿನ ಸಮಾರಾಭ್ಯಾಸ ಅತ್ಯುತ್ತಮವಾಗಿ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *