ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ಶ್ರೀರಾಮುಲು ನಡುವಿನ ಮನಸ್ತಾಪದ ನಡುವೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹೆಸರು ಕೂಡ ಪ್ರಸ್ತಾಪವಾಗಿದೆ. ಇಂದು ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ ಅವರು, ಶ್ರೀರಾಮುಲು ಬೇಕು ಬೇಡ ಎಂದರು ಸಾಯೋ ತನಕ ಅವನನ್ನು ಸ್ನೇಹಿತನಾಗಿಯೆರ ನೋಡುತ್ತೇನೆ. ಪಕ್ಷ ಬಿಡೋದು ಅವರ ವೈಯಕ್ತಿಕ ವಿಚಾರ. ಹೋಗೊದಾದ್ರೆ ಹೋಗಲಿ. ಹೋದಾಗ ನನ್ನ ಮೇಲೆ ಆರೋಪ ಮಾಡುವುದು ಎಷ್ಟು ಸರಿ. ಬಳ್ಳಾರಿ ಭಾಗದಲ್ಲಿ ಜನರು ಮಾತಾಡ್ತಾ ಇದಾರೆ. ಡಿಕೆ ಶಿವಕುಮಾರ್ ಅವರು ಸತೀಶ್ ಜಾರಕಿಹೊಳಿ ಅವರನ್ನು ಮಣಿಸಲು ಹೇಗಾದರೂ ಮಾಡಿ ಶ್ರೀರಾಮುಲು ಅವರನ್ನು ತಮ್ಮ ಪಕ್ಷಕ್ಕೆ ಕರೆದುಕೊಳ್ಳಬೇಕೆಂದು ಮಾತಾಡ್ತಾ ಇದ್ದಾರೆ ಎಂದಿದ್ದಾರೆ.
ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ನನ್ನನ್ನು ಯಾರೂ ಭೇಟಿ ಮಾಡಿಲ್ಲ ಇದು ಅವರ ಪಕ್ಷದ ಆಂತರಿಕ ಸಂಘರ್ಷವೇ ಹೊರತು ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಅವರೇ ಬಹುಶಃ ಪಕ್ಷಕ್ಕೆ ಕಳುಹಿಸಬೇಕೆಂದು ಪ್ರಯತ್ನಿಸುತ್ತಿರಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ.
ರೆಡ್ಡಿ ಅವರ ಮಾತಿಗೆ ಶ್ರೀರಾಮುಲು ಕೂಡ ಪ್ರತಿಕ್ರಿಯೆ ನೀಡಿದ್ದು, ನಾನೇನು ಹಾದಿಬೀದಿಯಲ್ಲಿ ಓಡಾಡುವ ವ್ಯಕ್ತಿ ಏನಲ್ಲ. ನನ್ನದು ರಾಜಕಾರಣದ ಫ್ಯಾಮಿಲಿ. ಅವತ್ತಿನ ಕಾಲದಲ್ಲಿಯೇ ರಾಜೀವ್ ಗಾಂಧಿ ಅವರು ನಮ್ಮ ಮಾವನ ಬಳಿ ಮಾತಾಡುತ್ತಿದ್ದರು. ಅವತ್ತಿನ ಕಾಲದಲ್ಲಿ ನನ್ನ ಸೋದರ ಮಾವಂದಿರು ರಾಜಕೀಯದಿಂದಾನೇ ಬಂದವರು. ರಾಮುಲು ಬಗ್ಗೆ ಸುಳ್ಳಿನ ಮೇಲೆ ಕೋಟೆ ಕಟ್ಟಿಕೊಂಡು ಬರ್ತಾ ಇದಾರೆ. ದಬ್ಬಾಳಿಕೆ ಮಾಡಿದವರ ವಿರುದ್ಧ ಹೋರಾಡಿದ್ದೀನಿ. ಬಡವರಿಗೆ ಅನ್ಯಾವಾದಗ ಮುಂದೆ ನಿಂತಿದ್ದೀನಿ. ಬಳ್ಳಾರಿ ಜನತೆಗೆ ಗೊತ್ತು ರಾಮುಲು ಹೋರಾಟದಿಂದ ಮೇಲೆ ಬಂದವನು ಅಂತ. ಯಾರ ಕೃಪಾಶೀರ್ವದ, ಕೃಪಾ ಕಟಾಕ್ಷದಿಂದ ಮೇಲೆ ಬಂದವನಲ್ಲ ಎಂದು ಜನಾರ್ದನ ರೆಡ್ಡಿಗೆ ತಿರುಗೇಟು ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್