Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರ, ಅಶೋಕ್ ಅವರಿಗೆ ಮತ್ತೆ ಸವಾಲಿನ ಮ್ಯಾಟರ್ ನೆನಪಿಸಿದ ಜಮೀರ್..!

---Advertisement---

ಹುಬ್ಬಳ್ಳಿ: ನಾನು ಕೊಪ್ಪಳ ಹೋಗಿದ್ದಾಗ ಓಪನ್ ಆಗಿ ಆರ್ ಅಶೋಕ್ ಅವರಿಗೆ, ವಿಜಯೇಂದ್ರ ಅವರಿಗೆ ಒಂದು ಸವಾಲನ್ನ ಹಾಕಿದ್ದೆ. ನಿಮ್ಮ ಅವಧಿಯಲ್ಲಿ ಸ್ಲಂ ಬೋರ್ಡ್ ನಲ್ಲಿ ಒಂದೇ ಒಂದು ಮನೆಯನ್ನ ಕೊಟ್ಟಿದ್ರೆ, ಅದನ್ನ ನಿರೂಪಿಸಿದರೆ ಇವತ್ತೆ ರಾಜ್ಯಪಾಲರಿಗೆ ಹೋಗಿ ರಾಜೀನಾಮೆಯನ್ನ ಕೊಡ್ತೀನಿ ಅಂತ 6ನೇ ತಾರೀಖೆ ಹೇಳಿದ್ದೆ. ಆದ್ರೆ ಇವತ್ತು ಆಲ್ ರೆಡಿ 12ನೇ ತಾರೀಖು ಅಂತ ವಿಜಯೇಂದ್ರ ಹಾಗೂ ಆರ್ ಅಶೋಕ್ ಅವರಿಗೆ ನೆನಪಿಸಿದ್ದಾರೆ. ಒಂದು ವಾರ ಆಯ್ತು ಆ ಸುದ್ದಿನೆ ಇಲ್ಲ. ಓಪನ್ ಆಗಿ ಸವಾಲಾಕಿದ್ದೀನಿ ನಾನು ಎಂದಿದ್ದಾರೆ.

ಇದೆ ವೇಳೆ ಜಿಎಸ್ಟಿ ಬಗ್ಗೆ ಮಾತನಾಡಿ, ಅಸೆಂಬ್ಲಿ ನಡೆಯುವಾಗ ನಾನು ಸದನದಲ್ಲಿ ವಿರೋಧ ಪಕ್ಷದ ಮುಖಂಡರಿಗೆ ಕೇಳಿಕೊಂಡೆ. ನಿಮ್ಮದೇ ಪಕ್ಷದ ಸರ್ಕಾರವಿದೆ. ಬಡವರ ಮನೆಗೆ ಜಿಎಸ್ಟಿ ಹಾಕೋದು ಬೇಡ ಅಂತ ಕೇಳಿದೆ. ಆದ್ರೆ ಇದನ್ನ ನೋಡಿದ್ರೆ ಬಡವರ ಮೇಲೆ ಅವರಿಗೆ ಕಾಳಜಿ ಇಲ್ಲ ಅಂತ ಆಯ್ತು ಎಂದಿದ್ದಾರೆ.

ನವೆಂಬರ್ ಕ್ರಾಂತಿ ಬಗ್ಗೆ ಮಾತನಾಡಿ, ಯಾವ ಕ್ರಾಂತಿಯೂ ಇಲ್ಲ, ಏನೇನು ಇಲ್ಲ. ನೀವೂ ಮಾಧ್ಯಮದವರೇ ಸೃಷ್ಟಿ ಮಾಡಿಕೊಂಡಿದ್ದೀರಾ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರಿದ್ದಾರೆ. ಐದು ವರ್ಷ ಅವರೇ ಸಂಪೂರ್ಣ ಮಾಡುತ್ತಾರೆ. ಸಚಿವ ಸಂಪುಟ ಸಭೆ ಪುನರ್ ರಚನೆ ಮಾಡಬೇಕು ಅಂತ ಇದೆ. ಆದರೆ ಅದನ್ನ ಮಾಡಬೇಕಿರುವುದು ಹೈಕಮಾಂಡ್. ಮಾಡುತ್ತೆ ಎಂಬ ಮಾತಿದೆ. ಪುನರ್ ರಚನೆ ಮಾಡಿ, ಒಂದಷ್ಟು ಹೊಸ ಮುಖಗಳ ತೆಗೆದುಕೊಳ್ಳುತ್ತಾರೆ. ಎಲ್ಲರಿಗೂ ಆಸೆ ಇದ್ದೇ ಇರುತ್ತೆ ಅಲ್ವಾ ಎಂದು ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now