ಶಾಸಕರಾಗಿ‌ ಕೆಲಸ ಮಾಡಲು ಅವಕಾಶ ನೀಡಿದ್ದರೆ ಸಾಕಿತ್ತು : ಜಗದೀಶ್ ಶೆಟ್ಟರ್ ಮಾತಿನ ಅರ್ಥವೇನು..?

suddionenews
1 Min Read

 

 

ಶಿರಸಿ : ಇಂದು ಜಗದೀಶ್ ಶೆಟ್ಟಿರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯಿಂದ ಟಿಕೆಟ್ ಸಿಗದ ಹಿನ್ನೆಲೆ ರಾಜೀ‌ನಾಮೆ ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ನನಗೆ ಯಾವ ಹುದ್ದೆಯೂ ಬೇಡವಾಗಿತ್ತು. ಶಾಸಕರಾಗಿ ಕೆಲಸ ಮಾಡಲು ಅವಕಾಶ ನೀಡಿದ್ದರೆ ಸಾಕಿತ್ತು ಎಂದಿದ್ದಾರೆ.

ನಾನು ಈ ಹಿಂದೆ ನಿರ್ಧಾರ ಮಾಡಿದಂತೆಯೇ ರಾಜೀನಾಮೆ ನೀಡುತ್ತಿದ್ದೇನೆ. ನಾಯಕರು ನಿನ್ನೆ ನನ್ನನ್ನು ಸಂಪರ್ಕ ಮಾಡಿದ್ದರು. ಇಂದು ಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿದ್ದೇನೆ. ಪಕ್ಷಕ್ಕೆ ಸಹಕಾರ ನೀಡಿ ಸಂಘಟನೆ ಮಾಡಿದ್ದೇನೆ. ನನಗೆ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿ ಮಾಡಿರುವುದು ಬೇಸರ ತರಿಸಿದೆ.

ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇಡೀ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದೆ. ಯಡಿಯೂರಪ್ಪ ಅವರು ನನ್ನ ಪರವಾಗಿ ಮಾತನಾಡಿದರು. ಆದರೆ ಈಗ ಈ ರೀತಿ ಹೇಳುತ್ತಿರುವುದು ಮೇಲಿನ ನಾಯಕರ ಕಾರಣದಿಂದ ಮುಂದಿನ ನಿರ್ಧಾರವನ್ನು ಹುಬ್ಬಳ್ಳಿಗೆ ಹೋಗಿ ತೀರ್ಮಾನ ಮಾಡುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *