Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಮನೂರು ಕುಟುಂಬದಿಂದಾಯ್ತು ಈಗ ಮುಸ್ಲಿಂ ಸಮುದಾಯದಿಂದಾನೂ ನಾಮಪತ್ರ ಸಲ್ಲಿಕೆ : ಏನಾಗ್ತಿದೆ ದಾವಣಗೆರೆಯಲ್ಲಿ..?

---Advertisement---

 

ಸುದ್ದಿಒನ್, ದಾವಣಗೆರೆ, ಮಾರ್ಚ್. 20 : ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ಯಾರಿಗೆ ನೀಡಬೇಕು ಎಂಬುದನ್ನೇ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅನೌನ್ಸ್ ಮಾಡಿಲ್ಲ. ಆದರೆ ಬ್ಯಾಕ್ ಟು ಬ್ಯಾಕ್ ನಾಮಪತ್ರವನ್ನಂತು ಸಲ್ಲಿಕೆ ಮಾಡ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಹೈಕಮಾಂಡ್ ನಾಯಕರಿಗೇನೆ ಎಚ್ಚರಿಕೆಯನ್ನ ನೀಡ್ತಾ ಇದ್ದಾರಾ ಅನ್ನೋ ಪ್ರಶ್ನೆ‌ ಮೂಡಿದೆ.

ಸಾದಿಕ್ ಪೈಲ್ವಾನ್ ಇದೀಗ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇವರು ಕಾಂಗ್ರೆಸ್ ನ ಮುಖಂಡರು ಕೂಡ ಹೌದು. ಭಾರತ ಸಂವಿಧಾನದ ಪ್ರಕಾರ ಎಲ್ಲರಿಗೂ ಹಕ್ಕಿದೆ ಹಾಕುವುದು, ಹಾಕಿದ್ದೀನಿ. ಬಿ ಫಾರಂ ಕಾಂಗ್ರೆಸ್ ನಿಂದ ಬರುತ್ತದೆ ಎಂದು ನಂಬಿಕೆಯಿಂದ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಸದಾ ದುಡಿಯುವುದಕ್ಕೆ ಸಿದ್ಧ. ಹಳೆ ಜನ ನಾವೂ ಅಂದಿನಿಂದಲೂ ದುಡಿಯುತ್ತಿದ್ದೇವೆ. ನಾವೂ ಕೊಂಡಜ್ಜಿ ಬಸಪ್ಪ ಅವರಿಂದ ಹಿಡಿದು ಶಾಮನೂರು ಶಿವಶಂಕರಪ್ಪ ಅವರವರೆಗೂ ಎಲೆಕ್ಷನ್ ನಲ್ಲಿ ಓಡಾಡಿದ್ದೀವಿ.

ಮುಂದಾದ್ರು ಕಾಂಗ್ರೆಸ್ ಪಕ್ಷದಿಂದ ನಮ್ಮನ್ನ ಗುರುತಿಸಲಿ ಅಂತ ಹೇಳಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ಇಸ್ಲಾಂ ಧರ್ಮದ ಪ್ರಕಾರ ನಾವೂ ಭಾರತೀಯರು. ಕರ್ನಾಟಕ ನಮ್ಮ ರಾಜ್ಯ. ನಮಗೆ ಕೇಳುವುದಕ್ಕೆ ಹಕ್ಕಿದೆ. ನಮ್ಮದು ಒಂದೇ ಗುರುತು ಅಂದ್ರೆ ನಮ್ಮದು ಜಾಸ್ತಿ ಮತ ಇದೆ. ಹಾಗಂತ ನಮ್ಮದೊಂದೆ ಮತದಿಂದ ಗೆಲ್ಲಲ್ಲ. ಎಲ್ಲಾ ಧರ್ಮದವರು ಕೈಜೋಡಿಸಬೇಕಿದೆ. ನಮ್ಮನ್ನು ಗೆಲ್ಲಿಸಬೇಕಿದೆ. ನಾಮಪತ್ರ ವಾಪಾಸ್ ತೆಗೆದುಕೊಳ್ಳಬೇಕಾ ಬೇಡವಾ ಎಂಬುದನ್ನ ಸೋಮವಾರ ನಿರ್ಧಾರ ಮಾಡುತ್ತೇವೆ ಎಂದು ಸಾಧಿಕ್ ಪೈಲ್ವಾನ್ ಹೇಳಿದ್ದಾರೆ. ದಾವಣಗೆರೆಯ ಗೊಂದಲದ ಗೂಡಿನ ಪ್ರಶ್ನೆಗೆ ಹೈಕಮಾಂಡ್ ಯಾವಾಗ ತೆರೆ ಎಳೆಯುತ್ತೆ ನೋಡಬೇಕಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now