Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಶೋಕ್‍ಬಾದರದಿನ್ನಿರವರನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ : ಕೆ.ಎಂ.ವೀರೇಶ್

---Advertisement---

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ಶ್ರೇಷ್ಠ ಕಲಾವಿದ, ಉತ್ಕøಷ್ಟ ನಾಟಕಕಾರ ಅಶೋಕ್‍ಬಾದರದಿನ್ನಿರವರನ್ನು ನೆನಪು ಮಾಡಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಕೆ.ಎಂ.ವೀರೇಶ್ ಹೇಳಿದರು.

ಬಾದರದಿನ್ನಿ ಆಟ್ರ್ಸ್ ಅಕಾಡೆಮಿ., ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯದ ಸಹಯೋಗದೊಂದಿಗೆ ರಾಷ್ಟ್ರೀಯ ಹೆದ್ದಾರಿ-13 ಪಿಳ್ಳೆಕೆರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಾದರದಿನ್ನಿರವರ 75 ನೇ ಜನ್ಮದಿನ ಪ್ರಯುಕ್ತ ಶುಕ್ರವಾರ ಏರ್ಪಡಿಸಲಾಗಿದ್ದ ಬಾದರದಿನ್ನಿ ಒಂದು ನೆನಪು. ರಂಗ ಉಪನ್ಯಾಸ ಮತ್ತು ರಂಗ ಗೀತೆಗಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 

ಸಿರಿಗೆರೆ, ಸಾಣೆಹಳ್ಳಿ, ಮುರುಘಾಮಠದಲ್ಲಿ ರಂಗ ನಿರ್ದೇಶಕರಾಗಿದ್ದ ಅಶೋಕ್ ಸಾಮ್ರಾಟ್ ಅಶೋಕ್‍ಬಾದರದಿನ್ನಿರವರು ನಮ್ಮ ಸಂಸ್ಥೆಯಲ್ಲಿಯೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ನೂರಾರು ಪ್ರಶಿಕ್ಷಣಾರ್ಥಿಗಳಿಗೆ ರಂಗಕಲೆಯನ್ನು ಹೇಳಿಕೊಟ್ಟಿದ್ದಾರೆ. ಅವರ ಬಸವೇಶ್ವರ ನಾಟಕ ಬಾಂಬೆ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಪ್ರದರ್ಶನಗೊಂಡಿದೆ. ಅಂತಹ ಮಹಾನ್ ದಿಗ್ಗಜ ಅಶೋಕ್‍ಬಾದರದಿನ್ನಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಕೇವಲ ರಂಗಭೂಮಿಯಲ್ಲಷ್ಟೆ ಅಲ್ಲ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆಂದು ಸ್ಮರಿಸಿದರು.

 

ಹಾರ್ಮೊನಿಯಂ ನುಡಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ನಾಟಕಗಳಲ್ಲಿ ಹೇಗೆ ಅಭಿನಯಿಸಬೇಕೆಂಬುದನ್ನು ಕಲಿಸುತ್ತಿದ್ದ ಅಶೋಕ್‍ಬಾದರದಿನ್ನಿ ಸಿರಿಗೆರೆ, ಸಾಣೆಹಳ್ಳಿ, ಮುರುಘಾಮಠದಲ್ಲಿ ನಾಟಕಗಳನ್ನು ಆಡಿದ್ದಾರೆ. ಇಂತಹವರನ್ನು ಇಂದಿನ ಪೀಳಿಗೆಗೆ ಪರಿಚಯಿಸಬೇಕು. ರಮ್ಯವಾಗಿರುವ ನಾಟಕ ಕಣ್ಣು, ಮನಸ್ಸುಗಳಿಗೆ ಆಪ್ಯಾಯಮಾನವಾದ ಸಂದೇಶಗಳನ್ನು ನೀಡುತ್ತದೆ. ಕಾವ್ಯ ರಂಗಕಲೆ ಉತ್ಕøಷ್ಟವಾದುದು. ಎರಡು ಸಾವಿರ ವರ್ಷಗಳ ಹಿಂದಿನ ಕವಿ ಕಾಳಿದಾಸ ಸಂಸ್ಕøತದಲ್ಲಿ ನಾಟಕಗಳನ್ನು ಬರೆಯುತ್ತಿದ್ದರು ಎಂದರು.

 

ಹದಿನೆಂಟನೆ ಶತಮಾನದಲ್ಲಿ ವಿಲಿಯಂ ಜೋನ್ಸ್ ಸಂಸ್ಕøತ ನಾಟಕಗಳನ್ನು ಫ್ರೆಂಚ್, ಇಂಗ್ಲಿಷ್‍ಗೆ ಅನುವಾದಿಸುತ್ತಿದ್ದರು. ಹಳ್ಳಿ ಮತ್ತು ಪೇಟೆಯಲ್ಲಿ ನಾಟಕಗಳು ಇಂದಿಗೂ ಉಳಿದುಕೊಂಡಿದೆ. ಅಶೋಕ್‍ಬಾದರದಿನ್ನಿರವರಂತ ಶ್ರೇಷ್ಠ ನಾಟಕಕಾರನನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು ಎಂದು ತಿಳಿಸಿದರು.

 

ರಂಗಭೂಮಿ ಕಲಾವಿದ ಸಿ.ಪಿ.ಜ್ಞಾನದೇವ್ ಮಾತನಾಡಿ ನಾನೊಬ್ಬ ಕಲಾವಿದನಾಗಲು ಅಶೋಕ್‍ಬಾದರದಿನ್ನಿ ಕಾರಣ ಎಂದು ಸ್ಮರಿಸಿಕೊಂಡು ಅವರಿಂದ ರಂಗಕಲೆಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಕನ್ನಡ ರಂಗಭೂಮಿ ಇತಿಹಾಸ ಗುರುತಿಸುವುದು ಕಷ್ಟ. ಪೂರ್ವಜರ ಕಾಲದಿಂದಲೂ ನಾಟ್ಯ ಮಾಡುವವರೆಲ್ಲಾ ನಾಟಕಕಾರರು. ಆಧುನಿಕ ರಂಗಭೂಮಿ ಹೊಸ ಆಯಾಮದೊಂದಿಗೆ ಪರಿಷ್ಕøತಗೊಂಡಿದೆ. ಕಾವ್ಯವನ್ನು ನಾಟಕವಾಗಿ ನೋಡಬಲ್ಲ ದೊಡ್ಡ ಶಕ್ತಿ ರೂಪಿಸಿದ್ದು, ರನ್ನ ಎಂದು ನುಡಿದರು.

 

ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಬಿಇಡಿ. ಕಾಲೇಜು ಪ್ರಾಂಶುಪಾಲರಾದ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡುತ್ತ ಅಭಿನಯ ಕಲೆ ಎಂದರೆ ಏನು ಎನ್ನುವುದನ್ನು ಅಶೋಕ್‍ಬಾದರದಿನ್ನಿರವರು ಬಿಇಡಿ. ಪ್ರಶಿಕ್ಷಣಾರ್ಥಿಗಳಿಗೆ ಹೇಳಿಕೊಡುತ್ತಿದ್ದರು. ಅಭಿನಯದ ಜೊತೆಗೆ ನೂರಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಸಕಲ ಕಲಾ ವಲ್ಲಭರಾಗಿದ್ದ ಅಶೋಕ್‍ಬಾದರದಿನ್ನಿರವರಲ್ಲಿ ರಂಗಕಲೆ ಎನ್ನುವ ಗಟ್ಟಿತನವಿತ್ತು ಎಂದು ನೆನಪಿಸಿಕೊಂಡರು.
ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಉಪ ಪ್ರಾಚಾರ್ಯರಾದ ಎಚ್.ಎನ್.ಶಿವಕುಮಾರ್ ಮಾತನಾಡಿ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹತ್ತು ಬೆಳದಿಂಗಳ ಕಾರ್ಯಕ್ರಮವನ್ನು ಪರಿಚಯಿಸಿದ ಕೀರ್ತಿ ರಂಗ ಕಲಾವಿದ ಅಶೋಕ್‍ಬಾದರದಿನ್ನಿರವರಿಗೆ ಸಲ್ಲುತ್ತದೆ. ದೆಹಲಿಯಲ್ಲಿ ನಾಟಕ ತರಬೇತಿ ಪಡೆದುಕೊಂಡಿದ್ದ ಅವರಲ್ಲಿ ಜ್ಞಾನದ ಜೊತೆ ಅನುಭವ ಬೆರೆತು ಹೋಗಿತ್ತು. ಹಾಗಾಗಿ ಅವರೊಬ್ಬ ದಿಗ್ಗಜ ನಾಟಕಕಾರರಾಗಿ ಎಲ್ಲೆಡೆ ಹೆಸರು ಗಳಿಸಲು ಸಾಧ್ಯವಾಯಿತು ಎಂದು ಗುಣಗಾನ ಮಾಡಿದರು.

 

ರಂಗ ಭೂಮಿ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ಮಾತನಾಡುತ್ತ ಸಮಯ ಪ್ರಜ್ಞೆ, ನಿರ್ದೇಶನದ ನೋಟ, ಪಾತ್ರಗಳ ಅಭಿನಯ, ಪರಿಕರ ಭಂಗಿ, ವಾಕ್ಚಾತುರ್ಯವಿಟ್ಟುಕೊಂಡು ಅಶೋಕ್‍ಬಾದರದಿನ್ನಿ ರೂಪಕ, ನಾಟಕಗಳನ್ನು ರಚಿಸುತ್ತಿದ್ದರು. ನೋಡಲು ಸಾದುವಂತೆ ಕಂಡರೂ ಗಟ್ಟಿತನ, ಕಠೋರತೆಯಿತ್ತು. ನೂರಾರು ಪ್ರಶಿಕ್ಷಣಾರ್ಥಿಗಳು ಅವರಿಂದ ಅಭಿನಯ ಕಲಿತಿದ್ದಾರೆ. ನಾಟಕಗಳ ಮೂಲಕ ಪಾಠ ಪ್ರವಚನಲ್ಲಿ ತೊಡಗಿಕೊಳ್ಳಿ ಎಂದು ಬಿಇಡಿ. ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

 

ಪ್ರಕಾಶ್ ಬಾದರದಿನ್ನಿ ವೇದಿಕೆಯಲ್ಲಿದ್ದರು.
ಉಪನ್ಯಾಸಕರಾದ ಹನುಮಂತರೆಡ್ಡಿ, ಕೆ.ಎಂ.ಎಸ್.ಕಾಲೇಜು ಪ್ರಾಂಶುಪಾಲರಾದ ಮಂಜುಳ, ರುದ್ರೇಶ್ ಇವರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಚನ್ನಬಸಪ್ಪ ಮತ್ತು ಸಂಗಡಿಗರು ರಂಗ ಗೀತೆಗಳನ್ನು ಹಾಡಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now