Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರತಿಯೊಬ್ಬರೂ ಪರಿಸರ ಕಾಳಜಿ ಹೊಂದುವುದು ಅವಶ್ಯ : ಪ್ರಾಚಾರ್ಯ ಪಿ. ಪಾಪಣ್ಣ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

 

ಸುದ್ದಿಒನ್, ಚಿತ್ರದುರ್ಗ ಮೇ. 19 : ಮಾನವನಿಗೆ ಪರಿಸರ ಅಗತ್ಯವಾಗಿದೆ, ಇದು ನಮ್ಮೆಲ್ಲರ ಉಸಿರಾಗಿದೆ. ಇದನ್ನು ಬೆಳಸುವುದರ ಮೂಲಕ  ಪರಿಸರ ಕಾಳಜಿ ಹೊಂದುವುದು ಅವಶ್ಯವಾಗಿದೆ ಎಂದು ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಚಾರ್ಯ ಪಿ. ಪಾಪಣ್ಣ ಹೇಳಿದರು.

ಐಮಂಗಲ ಗ್ರಾಮದ ಪೊಲೀಸ್ ತರಬೇತಿ ಶಾಲೆ ಆವರಣದಲ್ಲಿ ಮಂಗಳವಾರ ಬೆಂಗಳೂರಿನ ಶಾಹಿ ಎಕ್ಸ್ಪೋರ್ಟ್‍ಪ್ರೈ.ಲಿ. ಜವಗೊಂಡನಹಳ್ಳಿ ಘಟಕದಿಂದವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗಿಡ ಮರಗಳ ವಿನಾಶದಿಂದ ಇಂದು ಸ್ವಚ್ಛವಾದ ಗಾಳಿ ದೊರೆಯದೆ ವಾತಾವರಣ ಕಲುಷಿತಗೊಳ್ಳುತ್ತಿರುವುದು ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ, ಪ್ರತಿಯೊಬ್ಬರೂ ತಮ್ಮ ಮನೆಯ ಮುಂದೆ ಸಮೀಪವಿರುವ ಖಾಲಿ ಸ್ಥಳಗಳಲ್ಲಿ ಗಿಡಗಳನ್ನು ಹಾಕಿ ಬೆಳೆಸುವುದು ಅವಶ್ಯವಾಗಿದೆ ಎಂದರು.

ಶಾಹಿ ಎಕ್ಸ್ಪೋರ್ಟ್ ಪ್ರೈ. ಲಿ ಸಹಾಯಕ ವ್ಯವಸ್ಥಾಪಕ ನಾಗಯ್ಯ ಹಿರೇಮಠ್ ಮಾತನಾಡಿ ಸಾಮಾಜಿಕ ಹೊಣೆಗಾರಿಕೆ ನಿಧಿ ಸಹಯೋಗದೊಂದಿಗೆ  ಅಂಕುರ ಯೋಜನೆ ಅಡಿ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ 86  ವಿವಿಧ ಬಗೆಯ ಸುಮಾರು 10,000 ಗಿಡಗಳನ್ನು  ಹಾಕುವುದರ ಜೊತೆಗೆ ಅವುಗಳ ಪಾಲನೆ ಪೋಷಣೆಯನ್ನು ಇನ್ನು ಎರಡು ವರ್ಷಗಳ ಕಾಲ ನಮ್ಮ ಸಂಸ್ಥೆ ನಿರ್ವಹಿಸುತ್ತದೆ.  ಪ್ರತಿ ವರ್ಷ ನಮ್ಮ ಸಂಸ್ಥೆಯ ಸಾಮಾಜಿಕ ಕಾರ್ಯಗಳಾದ ಶಿಕ್ಷಣ ,ಆರೋಗ್ಯ, ಕೌಶಲ್ಯ ,ಸಂವರ್ಧನೆ ಪರಿಸರದ ಬಗ್ಗೆ ಕಾಳಜಿ ಹೊಂದಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು ಕಾರ್ಯಗತ ಮಾಡಲಾಗಿದೆ. 1974 ರಲ್ಲಿ ಸರಳ ಅಹುಜ ಶಾಹಿ ಎಕ್ಸ್ಪೋರ್ಟ್ ಕಂಪನಿಯನ್ನು ಆರಂಭಿಸಿದ್ದು ದೇಶದಲ್ಲಿ ಸುಮಾರು 60 ಘಟಕಗಳನ್ನು ಹೊಂದಿದೆ. 1,50,000 ಜನರಿಗೆ ಉದ್ಯೋಗ ನೀಡುವುದರ ಜೊತೆಗೆ ಅವರ ಜೀವನಕ್ಕೆ ಭದ್ರತೆಯಾಗಿದೆ. ಇದರಲ್ಲಿ ವಿಶೇಷವಾಗಿ ಶೇಕಡ 80ರಷ್ಟು ಮಹಿಳೆಯರಿಗೆ ಉದ್ಯೋಗ ನೀಡಿರುವುದು ಹೆಮ್ಮೆಯ ವಿಚಾರ ರಾಜ್ಯದಲ್ಲಿ ಹೆಚ್ಚಿನ ಘಟಕಗಳು ಕರ್ತವ್ಯ ಕನ್ನಡಿಗರಿಗೆ ಹೆಚ್ಚಿನ ಉದ್ಯೋಗ ನೀಡಿದೆ ಜೀವನ್ ಮುಕ್ತಿ ಫೌಂಡೇಶನ್ ಅವರು ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಅವರ ಅನುದಾನದಲ್ಲಿ ನಾವು ಈ ಯೋಜನೆಯನ್ನು ಮುಂದುವರಿಸುತ್ತಿದ್ದೇವೆ ಎಂದರು.

ಈ ವೇಳೆ ಡಿವೈಎಸ್ಪಿಬಿ.ಪರಶುರಾಮ್,ಸಿಪಿಐ.ಶಿವಕುಮಾರ್.ಡಿ, ಪಿಎಸ್‍ಐ. ಶರಣಬಸವ, ಮದಕರಿನಾಯಕ ಸಾಂಸ್ಕøತಿಕ ಸಂಘದ ಅಧ್ಯಕ್ಷರಾದ ಗೋಪಾಲಸ್ವಾಮಿ ನಾಯಕ್, ಶಾಹಿ ಎಕ್ಸ್ಪೋರ್ಟ್ ಪ್ರೈಲಿ.ನ ಸೂರ್ಯಪ್ರಕಾಶ್, ಸಹಾಯಕ ವ್ಯವಸ್ಥಾಪಕ ಸಾಗರ್, ಮಾನವ ಸಂಪನ್ಮೂಲ ವ್ಯಕ್ತಿ ನರಸಿಂಹ ಮೂರ್ತಪ್ಪ ,ರಾಜೇಂದ್ರ ರಾಥೋಡ್, ಸೇವಾ ನಿರತ ಪುನರ್‍ಮನನ ಪ್ರಶಿಕ್ಷಣಾರ್ಥಿಗಳು ,ಸಿಬ್ಬಂದಿಗಳು ಮತ್ತು ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...