ಸುಪ್ರಸಿದ್ಧ ಜಾತ್ರೆಯಲ್ಲಿ ಒಂದಾದ ಶಿರಸಿ ಜಾತ್ರೆ ಪಾರಂಭವಾಗಿದ್ದು, ಜಾತ್ರೆ ನೋಡಲ ಕರ್ನಾಟಕದ ಮೂಲೆ ಮೂಲೆಯಿಂದಲೂ ಜನ ಆಗಮಿಸುತ್ತಾರೆ. ಆದರೆ ಶಿರಸಿ ರಸ್ತೆ ವಾಹನ ಸವಾರರ ಪಾಲಿಗೆ ನಿರಾಶೆಸೂಚಕವಾಗಿದೆ. ಎಷ್ಟೊ ಜನರು ರಸ್ತೆಗೆ ಹೆದರೆ ಜಾತ್ರೆಗೆ ತೆರಳು ಹಿಂದೇಟು ಹಾಕುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಗಡಿ ದಾಟುತ್ತಿದ್ದಂತೆ 20 ಕಿಲೋ ಮೀಟರ್ ರಸ್ತೆಯಲ್ಲಿ ಜೀವದ ಹಂಗು ತೊರೆದು ವಾಹನ ಸವಾರರು ಸಂಚರಿಸಬೇಕಿದೆ. ಈ ಹೆದ್ದಾರಿಯ ಕಾಮಗಾರಿ ಎಷ್ಟೊ ವರ್ಷದಿಂದ ಕುಂಟುತ್ತಾ ಸಾಗಿದ್ದು ಇದೀಗ ಸಂಪೂರ್ಣವಾಗಿ ಕೆಸರು ಗದ್ದೆಯಂತಾಗಿ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬಸ್‌ಗಳಂತಹ ದೊಡ್ಡ ವಾಹನಗಳೂ ಸಹ ಈ ರಸ್ತೆಯನ್ನು ದಾಟಲು ಹರಸಾಹಸ ಪಡುತ್ತಿವೆ.ಕೆಸರಿನಲ್ಲಿ ಬೈಕ್ ಚಕ್ರಗಳು ಸ್ಕಿಡ್ ಆಗುತ್ತಿದ್ದು, ನಿಯಂತ್ರಣ ತಪ್ಪಿ ಸವಾರರು ಕೆಸರಿನಲ್ಲೇ ಉರುಳಿ ಬೀಳುತ್ತಿದ್ದಾರೆ.ಈ ರಸ್ತೆಯಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ನರಕಯಾತನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.









