ಮಳೆಗಾಲ ಶುರುವಾಗಿದೆ. ಮಳೆಯಿಂದಾಗಿ ಹೊರಗೆ ಹೆಜ್ಜೆ ಇಡುವುದು ಕಷ್ಟ ಎಂದುಕೊಂಡರೆ ಮನೆಯ ಒಳಗೆ ಇರುವ ಗೋಡೆಗಳು, ನೆಲ ಸಂಪೂರ್ಣ ತೇವಾಂಶವನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ ಈ ತೇವಾಂಶ ಮೈಗೆ ತಾಕದಂತೆ ನೋಡಿಕೊಳ್ಳಲು ಮ್ಯಾಟ್ ಹಾಕೋದು ಸೇರಿದಂತೆ ಹಲವು ದಾರಿಗಳನ್ನು ಹುಡುಕುತ್ತೇವೆ. ಕಡಿಮೆ ಆಗಲ್ಲ. ಆದ್ರೆ ಈಗ ಹೇಳುವ ಟಿಪ್ಸ್ ಫಾಲ್ ಮಾಡಿ ನೋಡಿ ಒಮ್ಮೆ.
ಕಲ್ಲು ಉಪ್ಪಿನಿಂದ ಮನೆಯ ತೇವಾಂಶ ಕಡಿಮೆ ಮಾಡಬಹುದಾಗಿದೆ. ಒಂದು ಪಾತ್ರೆಯಲ್ಲಿ ಉಪ್ಪನ್ನು ಹಾಕಿ, ಒಂದು ಮೂಲೆಯಲ್ಲಿಡಿ. ಅದು ತೇವಾಂಶವನ್ನು ಕಡಿಮೆ ಮಾಡುತ್ತದೆ.
ಮನೆಯ ಅಡುಗೆ ಕೋಣೆಯಲ್ಲಿ ಅಡಿಗೆ ಸೋಡಾ ಇದ್ದೆ ಇರುತ್ತದೆ. ಅತ್ಯಂತ ತೇವಾಂಶವಿರುವ ಪ್ರದೇಶದಲ್ಲಿ ಅಡಿಗೆ ಸೋಡಾ ತುಂಬಿದ ಬೌಲ್ ಅನ್ನು ಇರಿಸಿ. ಇದು ನಿಧಾನವಾಗಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದಲ್ಲದೇ, ಆರ್ದ್ರತೆಯನ್ನು ಕಡಿಮೆ ಮಾಡಲು ಇದ್ದಿಲು ಬಳಸಬಹುದು. ಒಂದು ಪಾತ್ರೆಯಲ್ಲಿ ಸಣ್ಣ ಇದ್ದಿಲು ತುಂಡುಗಳನ್ನು ತುಂಬಿಸಿ ಮತ್ತು ಅದರ ಮುಚ್ಚಳವನ್ನು ತೆರೆದಿಡಿ.
ಮನೆಯ ಅತ್ಯಂತ ತೇವಾಂಶದ ಪ್ರದೇಶಗಳಲ್ಲಿ ಎಕ್ಸಾಸ್ಟ್ ಫ್ಯಾನ್ಗಳನ್ನು ಫಿಟ್ ಮಾಡಬಹುದು. ಇದು ತೇವಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಶಾಖದಿಂದ ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಅಲ್ಲದೇ, ಮನೆಯ ಕಿಟಕಿಗಳನ್ನು ತೆರೆದಿಡಿ. ಕಿಟಕಿಗಳನ್ನು ತೆರೆಯುವುದು ನಿಮ್ಮ ಮನೆಯ ತೇವಾಂಶವನ್ನು ಕಡಿಮೆ ಮಾಡಲು ಸಹಾಯಕವಾಗಿದೆ.