ಚಿಕ್ಕಬಳ್ಳಾಪುರ: ಶ್ರೀರಾಮ ಚಂದ್ರ ಬಿಜೆಪಿಯವರ ಅಪ್ಪನ ಮನೆ ಆಸ್ತಿನಾ. ನಾವೂ ಹಿಂದೂಗಳೆ. ನಮಗೂ ಶ್ರೀರಾಮಚಂದ್ರ ದೇವರೇ. ಶ್ರೀರಾಮಚಂದ್ರನ ಭಕ್ತರು ಕಾಂಗ್ರೆಸ್ ನಲ್ಲೂ ಇದ್ದೀವಿ, ಜೆಡಿಎಸ್ ನಲ್ಲೂ ಇದ್ದೀವಿ. ನಾನು ರಾಮನನ್ನು ಆರಾಧಿಸುತ್ತೀನಿ, ಪೂಜಿಸುತ್ತೀನಿ. ಅಲ್ಲನು ಗೌರವಿಸುತ್ತೀವಿ, ಏಸುನು ಗೌರವಿಸುತ್ತೀವಿ. ಶ್ರೀರಾಮಚಂದ್ರ ಇವರೊಬ್ಬರಿಗೆ ಸೀಮಿತ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸಂಸದರಿಗೆ ನಾನು ಹೇಳುವುದು ಇಷ್ಟೇ. ನೀವೂ ನಮ್ಮ ನಾಯಕರ ಬಗ್ಗೆ ಮಾತನಾಡಿದರೆ, ನಾವಂತು ಸುಮ್ಮನೆ ಇರಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿ, ಈಗ ಅಖಾಡದಲ್ಲಿ ರಕ್ಷಾ ರಾಮಯ್ಯ ಅವರಿದ್ದಾರೆ, ಎಂಎಲ್ಸಿ ರವಿ ಅಣ್ಣ ಅವರ ಹೆಸರು ಕೇಳಿ ಬರುತ್ತಿದೆ. ನಮ್ಮ ಬಾಲಾಜಿ ಅಣ್ಣ ಹೆಸರು ಕೇಳಿ ಬರುತ್ತಿದೆ. ನಮ್ಮದು ಪಕ್ಷ ನಿಷ್ಠೆ ಸರ್. ಪಕ್ಷ ಯಾರಿಗೆ ಕೊಟ್ಟರು ಅದಕ್ಕೆ ದುಡೀತೀನಿ. ಇಲ್ಲ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ನೀನೆ ನಿಂತುಕೋ ಅಂದರು ನಾನು ನಿಂತುಕೊಳ್ಳುತ್ತೀನಿ. ಕೆಪಿಸಿಸಿ ಆಫೀಸಲ್ಲಿ ಕಸ ಗುಡಿಸು ಅಂದ್ರು ಗುಡಿಸುತ್ತೀನಿ. ನಾಳೆ ರಾಜೀನಾಮೆ ಕೊಡು ಅಂದರು ಕೊಡುತ್ತೀನಿ. ನಮ್ಮದು ಏನಿದ್ದರು ಕಾಂಗ್ರೆಸ್ ಪಕ್ಷದ ಐಡಿಯಾಲಜಿ ನಂಬಿಕೊಂಡು ಬಂದವರು. ನಮ್ಮದು ಪಕ್ಷ ನಿಷ್ಠೆ ಅಷ್ಟೆ ಎಂದಿದ್ದಾರೆ.
ಇದೇ ವೇಳೆ ಸುಧಾಕರ್ ವಿಚಾರಕ್ಕೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಅವರು ಏನಾದರೂ ಬಂದರೆ ನಾನು ಪಕ್ಷಕ್ಕೂ ಮನವಿ ಮಾಡಿಕೊಳ್ಳುತ್ತೇನೆ ದಯವಿಟ್ಟು ನನ್ನನ್ನೇ ಕಳ್ಸಿ ಅಂತ. ನನಗೂ ಬಹಳ ಕುತೂಹಲವಿದೆ. ಎಂಟು-ಒಂಭತ್ತು ತಿಂಗಳು ನನಗೂ ಅವರಿಗೂ ಬಹಳ ಗ್ಯಾಪ್ ಬಂದಿದೆ. ಇನ್ನೊಂದು ಅವಕಾಶ ಪಕ್ಷ ಅವಕಾಶ ಕೊಟ್ಟರೆ ನಿಲ್ಲುತ್ತೇನೆ. ನಿಂತರೆ ಖಂಡಿತ ನಾನು ಗೆಲ್ಲುತ್ತೇನೆ ಎಂದಿದ್ದಾರೆ.