Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಸಿಎಂ ಆಗೋದನ್ನ ತಡೆಯುತ್ತಿರೋದೆ ಕುಮಾರಸ್ವಾಮಿ ಅವ್ರ..?

---Advertisement---

ಮಂಡ್ಯ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಸಿಎಂ ಸ್ಥಾನವನ್ನ ಸಿದ್ದರಾಮಯ್ಯ ಬಿಟ್ಟುಕೊಡ್ತಿಲ್ಲ ಅಂತ ಡಿಕೆ ಶಿವಕುಮಾರ್ ಕೊರಗುತ್ತಿದ್ದಾರೆ. ಇದರ ನಡುವೆ ಮದ್ದೂರು ಶಾಸಕ ಉದಯ್ ಅವರು ಹೆಚ್ ಡಿ ಕುಮಾರಸ್ವಾಮಿ ಅವರೇ ಇದಕ್ಕೆಲ್ಲ ಕಾರಣ ಎನ್ನುತ್ತಿದ್ದಾರೆ. ಈ ಬಗ್ಗೆ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯದಲ್ಲಿ ಮಾತನ್ನಾಡಿದ ಕುಮಾರಸ್ವಾಮಿ ಅವರು, ಬಜೆಟ್ ನಲ್ಲಿ ಮಂಡ್ಯಗೆ ಏನು ಕೊಟ್ಟಿದ್ದಾರೆ. ಘೋಷಣೆ ಒಂದು ಬಿಟ್ಟರೆ ಅಂತ ಹೇಳಿಕೊಳ್ಳುವ ಬಜೆಟ್ ಏನು ಕೊಟ್ಟಿಲ್ಲ ಎಂದು ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಮದ್ದೂರು ಶಾಸಕ ಉದಯ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ್ದು, ಅವರು ಟೀಕೆ ಯಾವುದಕ್ಕೆ ಮಾಡಿದ್ದಾರೆ. ಅಭಿವೃದ್ಧಿ ವಿಚಾರಕ್ಕೆ ಮಾಡಿದ್ದಾರಾ..? ಅವರ ಬಗ್ಗೆ ನನ್ನ ಚರ್ಚೆ ಅವಶ್ಯಕತೆ ಇಲ್ಲ. ಆ ವ್ಯಕ್ತಿಗೂ ನನಗೂ ಯಾಕೆ ಹೋಲಿಕೆ ಮಾಡ್ತೀರಾ..? ಆ ವ್ಯಕ್ತಿ ಬಗ್ಗೆ ಉತ್ತರ ಕೊಡುವುದಕ್ಕೆ ಅವಶ್ಯಕತೆ ಇದೆಯಾ..? ಎಂದಿದ್ದಾರೆ.

ಗ್ರಾಮೀಣ ಭಾಗದ ಜನರ ಕಷ್ಟವನ್ನ ಕುಮಾರಸ್ವಾಮಿ ಅವರು ಕೇಳಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಇಲ್ಲ ನಾನು ಫೈವ್ ಸ್ಟಾರ್ ನಲ್ಲಿದ್ದೀನಿ. ಶ್ರೀಲಂಕಾಗೆ ಹೋಗಿ ಕುಳಿತುಕೊಂಡಿದ್ದೀನಿ. ನಾನೇಗೆ ಅದನ್ನ ತಡೆಯೋದಕ್ಕೆ ಆಗುತ್ತೆ. ಅವರು ಸಿದ್ದರಾಮಯ್ಯ ಅವರ ಜೊತೆಗೆ ಮಾತನ್ನಾಡಬೇಕು. ನಾನು ಸಿದ್ದರಾಮಯ್ಯ ಅವರಿಗೆ ಕಳೆದ ಒಂದು ವಾರದ ಹಿಂದೆ ಏನ್ ಹೇಳಿದ್ದೀನಿ. ಬಿಟ್ಟು ಕೊಡಪ್ಪ ಅಂತ ದಿನಾ ಹೇಳ್ತಾ ಇಲ್ವಾ ಎಂದಿದ್ದಾರೆ. ಸಿಎಂ ಬದಲಾವಣೆ ವಿಚಾರಕ್ಕೆ ಶಾಸಕರ ಆರೋಪಕ್ಕೆ ಕ್ಲಾರಿಟಿಯನ್ನ ಕೊಟ್ಟಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...