ತುಮಕೂರು: ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ವರಿಸಿ ದೊಡ್ಡ ಅಭಿಯಾನವನ್ನೇ ಶುರು ಮಾಡಿದ್ದಾರೆ. ಆಗಾಗ ಈ ಕಮಿಷನ್ ವಿಚಾರ ಬೆಳಕಿಗೆ ಬರ್ತಾನೆ ಇರುತ್ತೆ. ಇದೀಗ ಮಾಧುಸ್ವಾಮಿ ಆಡಿದ ಮಾತುಗಳು ಸತ್ಯವಿರಬಹುದೇನೋ ಎಂಬಂತ ಚರ್ಚೆಗಳನ್ನು ಹುಟ್ಟು ಹಾಕಿದೆ.
ಇಂದು ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಗ ಪ್ರಶಾಂತ್ ಸೇರಿದಂತೆ ಐವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಂದು ಅಂದಾಜು ಲೆಕ್ಕದಲ್ಲಿ ಎಂಟು ಕೋಟಿಗೂ ಅಧಿಕವಾದ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಾತನಾಡುವಾಗ ಸಚಿವ ಮಾಧುಸ್ವಾಮಿ ಅವರು, 40% ದಂಧೆ ಮಾಡೋಕೆ ಅವರ್ಯಾರು ಮಂತ್ರಿಗಳಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಮಾಧುಸ್ವಾಮಿ ಅವರು ಹೇಳಿದ್ದು ಹೀಗಿದೆ : 40% ಕಮಿಷನ್ ದಂಧೆ ಮಾಡೋಕೆ ಅವರ್ಯಾರು ಮಂತ್ರಿಯಲ್ಲ. ಸರ್ಕಾರಿ ನೌಕರರು. ಅವರು ಹೇಳದೆ ನಾವೂ ಉತ್ತರ ಕೊಡಲು ಸಾಧ್ಯವಿಲ್ಲ. ಶಾಸಕರಿಗೂ ಮಂತ್ರಿಗಳಿಗೂ ಏನಪ್ಪ ಸಂಬಂಧ..? ಎಂದು ಪ್ರಶ್ನಿಸಿದ್ದಾರೆ.