ನಾಡಗೀತೆಗೆ ಅವಮಾನ ಬರವಣಿಗೆ : ರೋಹಿತ್ ಚಕ್ರತೀರ್ಥ ಪರವಹಿಸಿದರಾ ಶಿಕ್ಷಣ ಸಚಿವ..?

suddionenews
1 Min Read

ಬೆಂಗಳೂರು: ರೋಹಿತ್ ಚಕ್ರತೀರ್ಥ ನಾಡಗೀತೆಯ ಬಗ್ಗೆ ಅವಹೇಳನವಾಗಿರುವ ಬರವಣಿಗೆ ಹಂಚಿದ್ದರ ಬಗ್ಗೆ ಆಕ್ರೋಶ ಹೊರಬಿದ್ದಿದೆ. ಕುವೆಂಪು ಅವರಿಗೆ ಅವಮಾನ ಮಾಡಿರುವವರಿಂದ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿಸಿದ್ದಾರೆ ಎಂದು ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಮಾತನಾಡಿದ್ದು, ಅಂದೇ ಇದನ್ನೆಲ್ಲಾ ತನಿಖೆ ನಡೆಸಿದ್ದರೆ ಎಲ್ಲವೂ ಮುಗಿದೇ ಹೋಗುತ್ತಿತ್ತು ಎಂದಿದ್ದಾರೆ.

ಇನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಈ ವಿಚಾರದಲ್ಲಿ ರೋಹಿತ್ ಚಕ್ರತೀರ್ಥನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿರುವ ಬಗ್ಗೆ ಮಾತನಾಡಿದ ಸಚಿವ ನಾಗೇಶ್ ಅವರು, ನಾವೂ ಸ್ವಾಮೀಜಿ ಬಗ್ಗೆ ಅತಿಯಾದ ಗೌರವವಿದೆ. ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪಠ್ಯಪುಸ್ತಕದಲ್ಲಿ ಕುವೆಂಪು ಅವರಿಗೆ ಎಲ್ಲಿಯೂ ಅವಮಾನವಾಗಿಲ್ಲ. ಪಠ್ಯಪುಸ್ತಕದ್ದಲ್ಲ. ಆದರೆ ನಾಡಗೀತೆ ಬಗ್ಗೆ ಅವರು ಬರೆದಿರುವುದು ಅವಮಾನವಾಗಿದೆ ಎಂಬುದು ಸ್ವಾಮೀಜಿಯವರು ಹೇಳಿರುವುದು. ಆ ರೀತಿ ನಾಡಗೀತೆಯನ್ನು ಯಾರು ಬರೆದರಲ್ಲ,   ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂಬ ಆಗ್ರಹ ಇದೆ. ಅದು ಸರಿ ಎಂಬುದು ನನಗೂ ಎನ್ನಿಸುತ್ತದೆ.

ಆ ನಾಡಗೀತೆಯನ್ನು ಅವಹೇಳನ ಮಾಡಿದ್ದಂತ ಬರವಣಿಗೆ ಮಾಡಿದವರ ಮೂಲ ಪತ್ತೆ ಮಾಡುತ್ತಿದ್ದಾರೆ. 2017 ರಲ್ಲಿ ಆ ರೀತಿ ಬಂದಿದ್ದು. ಆ ತಕ್ಷಣಕ್ಕೆ ಮಾಡಿಬಿಟ್ಟಿದ್ದರೆ, ಸಿದ್ದರಾಮಯ್ಯ ಸರ್ಕಾರ ಆಗಲೇ ಯಾರು ಅವಮಾನ ಮಾಡಿದ್ದು ಎಂಬುದನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಂಡಿದ್ದರೆ ಮುಗಿದೇ ಹೋಗುತ್ತಿತ್ತು. ಆಗಲೇ ಇವರೆ ಕೇಳಬೇಕಿತ್ತು. ಆಗ ಅಂದೇ ಕೊನೆಯಾಗುತ್ತಿತ್ತು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *