Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪಾಕಿಸ್ತಾನದ ಉಗ್ರರಿಗೆ ಕೊಡ್ತಾ ಇರುವ ಸೌಲಭ್ಯವನ್ನು ನಟ ದರ್ಶನ್ ಗೆ ಕೊಡ್ತಿಲ್ವಾ..?

---Advertisement---

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರಿಗೆ ಮೂಲಭೂತ ಸೌಲಭ್ಯಗಳನ್ನ ನೀಡಿ ಎಂದು ಈಗಾಗಲೇ ಕೋರ್ಟ್ ಸಲಹೆ ನೀಡಿದೆ. ಆದರೂ ಸೌಲಭ್ಯ ಸಿಕ್ತಾ ಇಲ್ಲ ಅಂತ ದರ್ಶನ್ ಪರ ವಕೀಲರು ಕೋರ್ಟ್ ನಲ್ಲಿ ಅರ್ಜಿ ಹಾಕಿದ್ದಾರೆ. ಆ ಸಂಬಂಧ ಇಂದು ಕೂಡ ವಾದ ಮಂಡಿಸಿದ್ದಾರೆ. ಹಾಗಾದ್ರೆ ಆ ವಾದ ಹೇಗಿತ್ತು..? ಏನೆಲ್ಲಾ ಅಂಶಗಳನ್ನ ತಿಳಿಸಿದ್ದಾರೆ ಎಂಬ ಮಾಹಿತಿ ಇಲ್ಲಿದೆ. ಸದ್ಯ ಸೆಪ್ಟೆಂಬರ್ 19ಕ್ಕೆ ವಿಚಾರಣೆ ಮುಂದೂಡಿಕೆ ಆಗಿದೆ.

ಕೋರ್ಟ್ ನಲ್ಲಿ ವಾದ ಮಂಡಿಸಿದ ದರ್ಶನ್ ಪರ ವಕೀಲರಾದ ಸುನೀಲ್, ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ. ಕೋರ್ಟ್ ಆದೇಶವನ್ನು ತೀರಾ ಹಗುರವಾಗಿ ಪರಿಗಣಿಸಿದ್ದಾರೆ. ಕೋರ್ಟ್ ಆದೇಶ ಇದ್ದರೂ ಏನು ಕೊಡುತ್ತಿಲ್ಲ. ಏನು ಕೊಟ್ಟಿದ್ದಾರೆ ಎಂದು ಆರೋಪಿಗಳ ಮೂಲಕವೇ ಹೇಳಿಸಿ. ಯಾಕಂದ್ರೆ, ಜೈಲು ಅಧಿಕಾರಿಗಳು ಏನು ಬೇಕಾದರು ಬರೆದುಕೊಂಡು ಬರಬಹುದು. ಕೋರ್ಟ್ ಗೆ ಜೈಲು ವರದಿ ಸಲ್ಲಿಕೆ ಮಾಡಿದ್ದರು. ಹೊಸ ಆರೋಪಿ ಜೈಲಿಗೆ ಬಂದಾಗ 14 ದಿನ ಮಾತ್ರ ಕ್ವಾರಂಟೈನ್ ಮಾಡಬೇಕು. ಆರೋಗ್ಯ ಪರಿಶೀಲನೆ ಬಳಿಕ ಆರೋಗ್ಯ ಪರಿಶೀಲನೆ ನಡೆಸಿ ಸಾಮಾನ್ಯ ಸೆಲ್ ಗಳಿಗೆ ಶಿಫ್ಟ್ ಮಾಡಬೇಕು. ಆದ್ರೆ ದರ್ಶನ್ ಅವರನ್ನು ಕಳೆದ ಒಂದು ತಿಂಗಳಿನಿಂದ ಇಟ್ಟಿದ್ದಾರೆ. ಯಾವ ಎಂಎಲ್ಎ, ಎಂಪಿಗಳನ್ನ 14 ದಿನಕ್ಕಿಂತ ಹೆಚ್ಚು ಕ್ವಾರಂಟೈನ್ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಇನ್ನು ನಟ ದರ್ಶನ್ ಪಕ್ಕದ ಸೆಲ್ ನಲ್ಲಿಯೇ ಪಾಕಿಸ್ತಾನದ ಉಗ್ರರು ಇದ್ದಾರೆ. ಅವರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಕೇರಂ, ಟಿವಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ ಎಂದು ವಕೀಲ ಸುನೀಲ್ ಅವರು ವಾದ ಮಂಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...