ರಾಮನಗರ ಸರ್ಕಾರಿ ಶಾಲೆ ಶಿಕ್ಷಕನ ಬೇಜವಬ್ದಾರಿ : ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲು..!

1 Min Read

 

ರಾಮನಗರ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಂದ ಕೆಲಸ ಮಾಡಿಸುವುದು ಸಹಜ. ಅದು ಒಂದು ರೀತಿಯ ಮಕ್ಕಳ ಕೌಶಲ್ಯ ತರಬೇತಿಯಂತೆಯೂ ಆಗುತ್ತದೆ. ಆದರೆ ಆ ಕೆಲಸಗಳು ಯಾವುದಾಗಿರಬೇಕು ಎಂಬ ಗಮನ ಶಿಕ್ಷಕರಲ್ಲಿ ಇರಬೇಕು. ಮಾಗಡಿ ತಾಲೂಕಿನ ತೂಬಿನಕರೆ ಗ್ರಾಮದಲ್ಲಿನ ಶಾಲೆಯಲ್ಲಿ ಮುಖ್ಯ ಶಿಕ್ಷಕರೇ ಮಕ್ಕಳಿಗೆ ಡೇಂಜರ್ ಎನಿಸುವ ಕೆಲಸ ಮಾಡಿಸಿ, ಈಗ ಆಸ್ಪತ್ರೆ ಪಾಲಾಗುವಂತೆ ಮಾಡಿದ್ದಾರೆ.

3ನೇ ತರಗತಿಯ ಮಕ್ಕಳಿಗೆ ಕ್ಲೀನಿಂಗ್ ಮಾಡಲು ಬಿಟ್ಟರೆ, ಅದರಲ್ಲೂ ಶೌಚಾಲಯ ಸ್ವಚ್ಛ ಮಾಡಲು ಬಿಟ್ಟರೆ ಹೇಗೆ..? ಇಲ್ಲಿನ ಶಾಲೆಯ ಶಿಕ್ಷಕರು 3 ನೇ ತರಗತಿಯ ವಿದ್ಯಾರ್ಥಿನಿಯ ಕೈಗೆ ಬ್ಲಿಚಿಂಗ್, ಆ್ಯಸಿಡ್ ಕೊಟ್ಟು ಕ್ಲೀನ್ ಮಾಡುವುದಕ್ಕೆ ಕಳುಹಿಸಿದ್ದಾರೆ. ಆದರೆ ಕ್ಲೀನ್ ಮಾಡುವಾಗ ವಿದ್ಯಾರ್ಥಿನಿಗೆ ಪ್ರಜ್ಞೆ ತಪ್ಪಿದೆ.

ಶಿಕ್ಷಕಿ ಹೇಳಿದಂತೆ ಬ್ಲೀಚಿಂಗ್ ಪೌಡರ್ ಹಾಕಿ, ಆ್ಯಸಿಡ್ ಹಾಕಿ ಶೌಚಾಲಯ ಕ್ಲೀನ್ ಮಾಡಿದ್ದಾಳೆ. ಆದರೆ ಈ ವೇಳೆ ವಿದ್ಯಾರ್ಥಿನಿಗೆ ಅನಾರೋಗ್ಯ ಕಾಡಿದೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಶಿಕ್ಷಕನ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಲಾಗಿದೆ. ಶಾಲೆಯಿಂದ ಆ ಶಿಕ್ಷಕನನ್ನು ಅಮಾನತು ಮಾಡುವಂತೆ ಪೋಷಕರು ಆಗ್ರಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *