ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.10 : ಜೀಯೋ ರೈನ್ ವಾಟರ್ ಬೋರ್ಡ್ ಜಲರಕ್ಷಕರು ಪರಿಚಯಾತ್ಮಕ ವಿಶೇಷ ಕಾರ್ಯಕ್ರಮ ಪ್ರತಿ ಬುಧವಾರ ಬೆಳಿಗ್ಗೆ 7-45 ಕ್ಕೆ ಆಕಾಶವಾಣಿ ಚಿತ್ರದುರ್ಗ ಎಫ್.ಎಂ.ಕೇಂದ್ರದಿಂದ ಪ್ರಸಾರವಾಗಲಿದೆ.
ಜಲಸಂರಕ್ಷಣೆಯಲ್ಲಿ ತೊಡಗಿರುವ ವ್ಯಕ್ತಿಗಳು, ಸಂಸ್ಥೆಗಳನ್ನು ಪರಿಚಯ ಮಾಡಿಕೊಡುವ ಸರಣಿ ಕಾರ್ಯಕ್ರಮದ ಪ್ರತಿ ಸಂಚಿಕೆಯ ಕೊನೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗುವುದು. ಆಯ್ಕೆಯಾದವರಿಗೆ ಬಹುಮಾನಗಳಿರುತ್ತವೆ. ಕಾರ್ಯಕ್ರಮ ಕೇಳಿ ಜಲಸಂರಕ್ಷಣೆಯಲ್ಲಿ ನೀವು ಕೈಜೋಡಿಸಿ ಎಂದು ಅಂತರ್‍ಜಲ ತಜ್ಞ ಎನ್.ಜೆ.ದೇವರಾಜರೆಡ್ಡಿ ಮನವಿ ಮಾಡಿದ್ದಾರೆ.