ಬಾಹ್ಯ ಮತ್ತು ಆಂತರಿಕ ಸೌಂದರ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ : ರವಿ. ಟಿ.

suddionenews
1 Min Read

 

ಚಿತ್ರದುರ್ಗ, (ಜೂ.21) : ಮನುಷ್ಯನಿಗೆ ಬಾಹ್ಯ ಮತ್ತು ಆಂತರಿಕ ಸೌಂದರ್ಯ ಕಾಪಾಡುವಲ್ಲಿ ಯೋಗ ಪ್ರಮುಖ ಪಾತ್ರವಹಿಸುತ್ತದೆ ಎಂದು ಎಸ್ ಆರ್ ಎಸ್ ಕಾಲೇಜಿನ ಆಡಳಿತಾಧಿಕಾರಿ ರವಿ ಟಿ. ಹೇಳಿದರು.

ನಗರದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ 8 ನೇ ಅಂತರಾಷ್ಟೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯೋಗ ಬಲ್ಲವನಿಗೆ ರೋಗವಿಲ್ಲ, ಯೋಗ ಭಾರತದಲ್ಲಿ ಹುಟ್ಟಿದ ಜಾಗತಿಕ ವಿದ್ಯೆ ಇದು ವಿಶ್ವದಾದ್ಯಂತ ಹರಡಿ ಪ್ರಖ್ಯಾತಿ ಪಡೆದಿದೆ. ಆಧ್ಯಾತ್ಮಿಕ ಮತ್ತು ಆರೋಗ್ಯ ಎರಡು ಮುಖದಿಂದಲೂ ತನ್ನನ್ನೂ ನಂಬಿದವರನ್ನೂ ಪೊರೆಯಬಲ್ಲ ಪಾರಂಪರಿಕ ಕಲೆಯಾಗಿ ತನ್ನದೇ ಆದ ವಿಶೇಷ ಗುಣಗಳಿಂದದ ಜನರ ಆರೋಗ್ಯ ಕಾಪಾಡುವಲ್ಲಿ ಉತ್ತಮ ಪಾತ್ರವಹಿಸುತ್ತದೆ ಎಂದರು.

ಜಿಲ್ಲಾ ಯೋಗ ಕ್ರಿಡಾ & ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾದ ಚಿನ್ಮಯಾನಂದ ಗುರುಗಳು ಮುಖ್ಯ ಅತಿಥಿಯ ಾಗಿ ಭಾಗವಹಿಸಿದ್ದರು.

ಎಸ್ ಆರ್ ಎಸ್ ಬೃಹತ್ ಸಭಾಂಗಣದಲ್ಲಿ 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಸಂಸ್ಕೃತ ಶ್ಲೋಕದೊಂದಿಗೆ ಓಂಕಾರ ಉಚ್ಛಾರಣೆ ಹಾಗೂ ಯೋಗಾಸನಗಳು ಮತ್ತು ಪ್ರಾಣಾಯಾಮ, ಧ್ಯಾನ ಮತ್ತು ಯೋಗದ ನಾನಾ ಭಂಗಿಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು.

ಈ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಪ್ರಭಾಕರ್ ಎಮ್. ಎಸ್. ಮತ್ತು, ಕೋ-ಆರ್ಡಿನೇಟರ್‌ಗಳು ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *