ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

suddionenews
1 Min Read

ಚಿತ್ರದುರ್ಗ, (ಜೂ.21) : ಶ್ರೀ ಹರಿ ಎಜುಕೇಷನ್ ಟ್ರಸ್ಟ್ ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ 8ನೇ ವರ್ಷದ ವಿಶ್ವ ಯೋಗ ದಿನಾಚರಣೆಯು ಯಶಸ್ವಿಯಾಗಿ ನೆರವೇರಿತು.

ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪೂರ್ಣಭೋಧಾಚಾರ್ಯ ವಹಿಸಿದ್ದರು. ಮುಖ್ಯಅಥಿತಿಗಳಾಗಿ ಕಾಲೇಜಿನ ಸಂಸ್ಥಾಪಕರಾದ ಮಂಜುನಾಥ ಶೆಟ್ಟಿ ಆಗಮಿಸಿದ್ದರು. ಶ್ರೀಮತಿ ರಕ್ಷಾ ಮಧು ವಾಣಿಜ್ಯ ವಿಭಾಗದ ಮುಖ್ಯಸ್ಥರು, ಅಜೇಯ್ ಉಪ-ಪ್ರಾಚಾರ್ಯರು, ಶ್ರೀಮತಿ ಜಯಲಕ್ಷ್ಮಿ ಪ್ರಾಧ್ಯಾಪಕರು ಮತ್ತು ಗಮಕಿಗಳು ಕಾರ್ಯಕ್ರಮಕ್ಕೆ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದಿಂದ ಸುಯೋಗ ಎಂಬುದರ ಅರಿವು ಮೂಡಿಸಿದರು ಮತ್ತು ಪ್ರಾಚಾರ್ಯರು ಯೋಗದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕಾಲೇಜಿನ ದೈಹಿಕ ಉಪನ್ಯಾಸಕರು ಈರಣ್ಣ ಹಾಗು ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀಯುತ ಜಾನಕಿರಾಮುಡು ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದ ಜೊತೆಗೆ ಇತರೆ ಆಸನಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರು ಶ್ರೀಮತಿ ವಾಣೀಶ್ರೀ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ನಿಸರ್ಗ ಮತ್ತು ಸ್ನೇಹಿತರು ಪ್ರಾರ್ಥನೆ ಹಾಡಿದರು. ಜೀವಶಾಸ್ತ್ರ ಉಪನ್ಯಾಸಕರಾದ
ಶ್ರೀ ಜಾಹ್ನವಿ ರವರು ವಂದನಾರ್ಪಣೆ ನೆರವೇರಿಸಿದರು.

ಕಾಲೇಜಿನ ಎಲ್ಲಾ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *