ತುರುವನೂರಿನ ಗ್ರಾಮದ ವಿಶ್ವವಿದ್ಯಾನಿಲಯ ಘಟಕ (ಪದವಿ) ಕಾಲೇಜಿನ ಪದವಿ ವಿಷಯಗಳಾದ ಬಿ.ಸಿ.ಎ. ಮತ್ತು ಬ.ಇಡಿ.ಇಂಟೀಗ್ರೇಟೆಡ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಪೂರ್ವಭಾವಿ ಸಭೆ.
ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 27 :
ತುರುವನೂರು ಗ್ರಾಮ ಬಯಲುಸೀಮೆಯ ಅತೀ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿನ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಪದವಿಗಳ ಅವಶ್ಯಕತೆ ಇದೆ. ಒಂದು ಪಕ್ಷ ಈ ಪದವಿಗಳನ್ನು ಪ್ರಾರಂಭಿಸದೇ ಹೋದರೆ ಕ್ಷೇತ್ರದ ಶಾಸಕರ ಮುಖಂಡತ್ವದಲ್ಲಿ ಊರಿನ ಗ್ರಾಮಸ್ಥರು, ಮುಖಂಡರು ಒಗ್ಗೂಡಿ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದೆಂದು ಎಂದು ಮಾಜಿ ಗ್ರಾ.ಪಂ.ಅಧ್ಯಕ್ಷರಾದ ನಾಗರಾಜಪ್ಪ ಬಿ.ಎನ್. ಹೇಳಿದರು.
ಅವರು ತುರುವನೂರು ಗ್ರಾಮದ ವಿಶ್ವವಿದ್ಯಾನಿಲಯ ಘಟಕ (ಪದವಿ) ಕಾಲೇಜಿನ ಪದವಿ ವಿಷಯಗಳಾದ ಬಿ.ಸಿ.ಎ. ಮತ್ತು ಬ.ಇಡಿ.ಇಂಟೀಗ್ರೇಟೆಡ್ ಕೋರ್ಸ್‌ಗಳನ್ನು ಪ್ರಾರಂಭಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸಭೆಯಲ್ಲಿ ಕಾಲೇಜಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ದಾಖಲಾತಿ ಮತ್ತು ಮೂಲ ಸೌಲಭ್ಯಗಳು ಇತರ ಹೊಸ ಪದವಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಸುಧೀರ್ಘವಾಗಿ ಚರ್ಚಿಸಿಲಾಯಿತು. ಬಹುಮುಖ್ಯವಾಗಿ ಸಭೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಬಿ.ಸಿ.ಎ. ಪದವಿಯನ್ನು ಮತ್ತು ಸಂಯೋಜಿತ ಪದವಿ (ಬಿ.ಇಡಿ.ಇಂಟಿಗ್ರೇಟೆಡ್) ಪ್ರಾರಂಭಿಸಲೇಬೇಕೆಂದು ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾ.ಪಂ.ಸದಸ್ಯರಾದ ಮಂಜುನಾಥ ಡಿ.ಆರ್. ಶಂಕರಮೂರ್ತಿ, ಡಾ.ಸುರೇಶ,ಸಿ ನಿವೃತ್ತ ಪ್ರಾಂಶುಪಾಲರು, ಶೇಷಾದ್ರಿರೆಡ್ಡಿ, ನಿವೃತ್ತ ಕೆ.ಎ.ಎಸ್. ಅಧಿಕಾರಿಗಳು, ವಿವೇಕಾನಂದಪ್ಪ-ನಿವೃತ್ತ ಶಿಕ್ಷಕರು, ಕಾಕಿ ಹನುಮಂತರೆಡ್ಡಿ ಮತ್ತಿತರ ಮುಖಂಡರು ಹಾಗೂ ಪೋಷಕರು, ವಿದ್ಯಾರ್ಥಿಗಳು ಕಾಲೇಜಿನ ಎಲ್ಲಾ ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು.
ಈ ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಸಂಯೋಜನಾಧಿಕಾರಿಗಳಾದ ಡಾ.ರೂಪೇಶ್ ಕುಮಾರ್.ಆರ್. ಕೆ.ಮಹೇಶ್‌ರವರು ನಿರೂಪಿಸಿದರೆ, ಡಾ.ಮಾರುತಿಯವರು ಸ್ವಾಗತಿಸಿ ಮತ್ತು ಡಾ.ವಿಶ್ವನಾಥ ಕೆ.ಎನ್. ವಂದಿಸಿದರು.







