Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಭಾರತದ ಡೆಕ್ಕನ್ ಟ್ರ್ಯಾಪ್ಸ್: ಇನ್ನೆಲೆ, ಇತಿಹಾಸ ಮತ್ತು ವೈಜ್ಞಾನಿಕ ಮಹತ್ವ ಇಲ್ಲಿದೆ

---Advertisement---

 

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿಜನಸಂಘ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ದಕನ್‌ ಪ್ರಸ್ಥಭೂಮಿ ಅಥವಾ ಬೃಹತ್‌ ಡೆಕ್ಕಾನ್‌ ಟ್ರಾಪ್ಸ್‌ ಭಾರತದ ಪಶ್ಚಿಮ ಮಧ್ಯಭಾಗದಲ್ಲಿರುವ ಬೃಹತ್‌ ಜಾಲಾಮುಖಿ ಲಾವಾ ರಸದಿಂದ ಶೇಖರಣೆಯಾಗಿದೆ. ಸುಮಾರು 66-70 ಮಿಲಿಯನ್‌ ವರ್ಷಗಳ ಹಿಂದೆ ಭಾರತೀಯ ಫಲಕವು ರಿಯೂನಿಯನ್‌ ಹಾಟ್‌ಸ್ಟಾಟ್‌ ಮೇಲೆ ಚಲಿಸಿದಾಗ ಸಂಭವಿಸಿದ ಭೀಕರ ಜ್ವಾಲಾಮುಖಿ ಸ್ಪೋಟಗಳಿಂದ ಇದು ರೂಪುಗೊಂಡಿದೆ. ಇದು ಭೂಮಿಯ ಮೇಲಿನ ಅತಿದೊಡ್ಡ ಜ್ವಾಲಾಮುಖಿ ಲಕ್ಷಣಗಳಲ್ಲಿ ಒಂದಾಗಿದ್ದು, ಮುಖ್ಯವಾಗಿ ಬ್ಯಾಸಾಲ್ಟಿಕ್‌ ಬಂಡೆಗಳಿಂದ ರೂಪಗೊಂಡಿದೆ.

ಕ್ರಿಟೀಶಿಯಸ್‌ ಯುಗದ ಕೊನೆಯಲ್ಲಿ ಭಾರತವು ಆಫ್ರಿಕಾದಿಂದ ಬೇರ್ಪಟ್ಟು ಉತ್ತರದತ್ತ ಚಲಿಸುತ್ತಿದ್ದಾಗ, ಭೂಮಿಯ ಮ್ಯಾಂಟ್ಲ್‌ ಬಾರಿ ಪ್ರಮಾಣದ ಲಾವಾ ರಸ ಹೊರಬಂದಿತು. ಇದು ಭೀಕರ “ಫಿಶರ್‌” ಎರುಷನ್‌ (Fissure Eruption) ಅಥವಾ ಬಿರುಕು ಜ್ವಾಲಾಮುಖಿಗಳಿಂದ ಹೊರಬಂದಿತು. ಲಾವರಸವು ಸಾವಿರಾರು ಕಿಲೋ ಮೀಟರ್‌ಗಳವರೆಗೆ ಹರಡಿ, ಪ್ರಸ್ಥಭೂಮಿಯನ್ನು ಲಾವಾ ಪದರಗಳಿಂದ ಆವರಿಸಿದೆ.

ಟ್ರಾಪ್‌ (Trap) ಎಂಬ ಪದವು ಸ್ಟೀಡಿಷ್‌ ಪದ “ಟ್ರಾಪ್‌” (ಸೋಪಿನಂತಿರುವ)ನಿಂದ ಬಂದಿದೆ, ಏಕೆಂದರೆ ಈ ಬಂಡೆಗಳು ಮೆಟ್ಟಲುಗಳಂತಹ ರಚನೆಯನ್ನು ಹೊಂದಿವೆ. ಇವು ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕದ ಉತ್ತರ ಭಾಗ ಮತ್ತು  ಮಧ್ಯಪ್ರದೇಶದ ಭಾಗಗಳಲ್ಲಿ ವ್ಯಾಪಿಸಿದೆ. ಲಾವಾರಸ ಪದರಗಳು ದಪ್ಪವಾಗಿವೆ. ಕೆಲವು ಸ್ಥಳಗಳಲ್ಲಿ 2 ಕಿ.ಮೀ.ಗಳಿಂತ ಹೆಚ್ಚಾಗಿರುತ್ತದೆ. ಈ ಜ್ವಾಲಾ ಮುಖಿ ಬಂಡೆಗಳ ಸವೆತದಿಂದಾಗಿ, ಇಲ್ಲಿನ ಪ್ರದೇಶದಲ್ಲಿ ಫಲವತ್ತಾದ ಕಪ್ಪು ಮಣ್ಣು ರೂಪುಗೊಂಡಿದೆ. ಇದು ಹತ್ತಿ ಬೆಳಗೆ ಅತ್ಯಂತ ಸೂಕ್ತವಾಗಿದೆ. ದಕನ್‌ ಟ್ರ್ಯಾಪ್‌ನ ಅತಿಯಾದ ಜ್ವಾಲಾಮುಖಿ ಚಟುವಟಿಕೆಯು ಆ ಸಮಯದಲ್ಲಿ ಸಂಭವಿಸಿದ ಡೈನೋಸಾರ್‌ಗಳ ಸಾಮೂಹಿಕ ಅಳಿವಿಗೆ ಒಂದು ಪ್ರಮುಖ ಕಾರಣ ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ.

ಈ ಪ್ರದೇಶಗಳಲ್ಲಿ ಜ್ವಾಲಾಮುಖಿ ಬಸಾಲ್ಟ್‌ ಶಿಲೆಗಳಿಂದ ರೂಪುಗೊಂಡಿರುವುದರಿಂದ, ಇಲ್ಲಿ ಅನೇಕ ದ್ವತೀಯ ಖನಿಜಗಳು ಕಂಡುಬರುತ್ತವೆ. ಈ ಪ್ರದೇಶಗಳಲ್ಲಿ ಅಪಾರ ಪ್ರಮಾಣದ ಜಿಯೋಲೈಟ್‌ ಖನಿಜಗಳು ಸಿಗುತ್ತದೆ. ಸುಂದರವಾದ ಸ್ಪಟಿಕಗಳು ಮತ್ತು ಕೊಲ್ಲಾಪುರ ಮತ್ತು ಸತಾರಾ ಜಿಲ್ಲೆಗಳಲ್ಲಿ ಬೃಹತ್‌ ಬಾಕ್ಸೈಟ್‌ (ಅಲ್ಯೂಮಿನಿಯಂ ಅದಿರು) ನಿಕ್ಷೇಪಗಳಿವೆ. ಮಧ್ಯಪ್ರದೇಶದ ಕಾಜಿಡೊಂಗ್ರಿ ಗಣಿಗಳಲ್ಲಿ ಮ್ಯಾಂಗನೀಸ್‌ ಮತ್ತು ತಾಮ್ರದ ಅದಿರು ದೊರಕುತ್ತವೆ. ನರ್ಮದಾ ಕಣಿವೆ ಮತ್ತು ಇತರೆ ಪ್ರದೇಶಗಳಲ್ಲಿ ಕಬ್ಬಿಣದ ಅದಿರು ಕೂಡ ದೊರೆಯುತ್ತದೆ. ವಿವಿಧ ಬಣ್ಣದ ಅಲಂಕಾರ ಶಿಲೆಗಳು (Gem Stones) ಲಭ್ಯತೆ ಇದೆ.

ಡೆಕ್ಕನ್‌ ಟ್ರ್ಯಾಪ್ಸ್‌ ಲಾವಾ ಶಿಲೆಗಳು ಕೇವಲ ಬೂದಿ-ಹಸಿರು ಬಸಾಲ್ಟ್‌ ಮಾತ್ರವಲ್ಲದೆ, ಭೂಮಿಯ ಇತಿಹಾಸದ ಒಂದು ಪ್ರಮುಖ ಮಟ್ಟವನ್ನು ದಾಖಲಿಸುವ ಪಳೆಯುಳಿಕೆಗಳ ಮತ್ತು ಅಮೂಲ್ಯವಾದ ಕೈಗಾರಿಕಾ ಖನಿಜಗಳು ದೊರಕುತ್ತವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...