ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯವನ್ನ ಈಗ ಸಾಕಷ್ಟು ಜನರು ವಿರೋಧಿಸ್ತಾ ಇದ್ದಾರೆ. ಇಂದು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ನಡೆಯಬೇಕಿರುವ ಪಂದ್ಯಕ್ಕೆ ಕ್ಷಣಗಣನೆ ಶಯರುವಾಗಿರುವ ಬೆನ್ನಲ್ಲೇ ವಿರೋಧವೂ ಕೇಳಿ ಬರುತ್ತಿದೆ. ಅದರಲ್ಲು ಪಹಲ್ಗಾಮ್ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡ ಅದೆಷ್ಟೋ ಹೆಣ್ಣು ಮಕ್ಕಳು ಈ ಪಂದ್ಯಕ್ಕೆ ವಿರೋಧಿಸ್ತಾ ಇದ್ದಾರೆ. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧಿಸ್ತಾ ಇದ್ದಾರೆ. ಹಾಗಾದ್ರೆ ಈ ಮ್ಯಾಚ್ ಬಗ್ಗೆ ಅವರು ಮಾತನಾಡಿದ್ದು ಏನು ಎಂಬ ಮಾಹಿತಿ ಇಲ್ಲಿದೆ.
ಈ ಸಂಬಂಧ ನನ್ನದಂತು ವಿರೋಧವಿದೆ. ಭಾರತದ ವಿರುದ್ಧ ಪಾಕಿಸ್ತಾನ ನಿರಂತರ ಭಯೋತ್ಪಾದನೆ ಮಾಡ್ತಾನೆ ಇದೆ. ಅವರು ಎಲ್ಲಿಯವರೆಗೂ ಭಯೋತ್ಪಾದನೆ ನಿಲ್ಲಿಸೋದಿಲ್ಲ ಎಲ್ಲಿವರೆಗೂ ಕಾಶ್ಮೀರವನ್ನು ಬಿಟ್ಟುಕೊಡುವುದಿಲ್ಲ, ಅಲ್ಲಿ ತನಕ ಅವರ ಜೋಡಿ ಯಾವ ಆಟನೂ ಆಡಬಾರದು. ಗುಂಡಿಗೆ ಗುಂಡು ಕೊಡೋದು ಅಷ್ಟೇ ಮಾಡಬೇಕು. ಜಗತ್ತಿನ ಯಾವುದೋ ಒಂದು ಪ್ರಚಾರಕ್ಕೆ ಅವರ ಜೋಡಿ ಕ್ರಿಕೆಟ್ ಆಡೋದು ಫುಟ್ ಬಾಲ್ ಆಡೋದಮ್ನ ಮಾಡಬಾರದು. ಇದು ನನ್ನ ಅಭಿಪ್ರಾಯ ಎಂದಿದ್ದಾರೆ.
ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಶುಭಂ ದ್ವುವೇದಿ ಪತ್ನಿ ಐಶಾನ್ಯ ದ್ವಿವೇದಿ ಅವರು ಕೂಡ ಈ ಪಂದ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 2025ರ ಏಷ್ಯಾ ಕಪ್ ನ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಖಂಡಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಬಿಸಿಸಿಐ ಒಪ್ಪಿಕೊಳ್ಳಬಾರದಿತ್ತು. ದಾಳಿಗೊಳಗಾದ 26 ಕುಟುಂಬಗಳ ಬಗ್ಗೆ ಬಿಸಿಸಿಐ ಭಾವನಾತ್ಮಕವಾಗಿಲ್ಲ ಎಂದು ಭಾವಿಸುತ್ತೇನೆ. ಕ್ರಿಕೆಟಿಗರನ್ನು ರಾಷ್ಟ್ರೀಯವಾದಿಗಳು ಎಂದು ಹೇಳಲಾಗುತ್ತದೆ. ಒಬ್ಬರು, ಇಬ್ಬರು ಕ್ರಿಕೆಟ್ ಆಟಗಾರರ ಹೊರತುಪಡಿಸಿ, ಯಾರೊಬ್ಬರೂ ಪಂದ್ಯವನ್ನು ಬಹಿಷ್ಕರಿಸಬೇಕೆಂದು ಯಾರೂ ಮುಂದೆ ಬರಲಿಲ್ಲ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















