Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ನವೆಂಬರ್.28 :ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ 2023-24ನೇ ಸಾಲಿನ ‘ವಿಜ್ಞಾನ ವಸ್ತು ಪ್ರದರ್ಶನವನ್ನು’ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ದೇವರಾಜರೆಡ್ಡಿ ಎನ್.ಜೆ ಅವರು ಮಾತನಾಡುತ್ತಾ ವಿದ್ಯಾರ್ಥಿಗಳ ಅಭಿರುಚಿ ಮತ್ತು  ಮನೋವೃತ್ತಿಗಳನ್ನು ಶ್ಲಾಘಿಸುತ್ತಾ ಅತ್ಯಾಧುನಿಕ ತಂತ್ರಜ್ಞಾನ ಯುಗದ ಈ ದಿನಗಳನ್ನು ಅವಶ್ಯಕವಾದ ಹಾಗೂ ಸಾಮಾಜಿಕ ಕಳಕಳಿಯುಳ್ಳ  ಮಾದರಿಗಳನ್ನು ತಯಾರಿಸಿ, ಪ್ರದರ್ಶಿಸಿದ ವಿದ್ಯಾರ್ಥಿಗಳ ಮಾದರಿಗಳನ್ನು ಗಮನಿಸಿ ಶ್ಲಾಘಿಸಿದರು.

ಅಲ್ಲದೇ ಭೂಮಿಯ ಅಂತರ್ಜಲ ಶೋಧನೆ ಮತ್ತು ಬಳಕೆ ಹಾಗೂ ಮಳೆ ನೀರು ಕೊಯ್ಲಿನ ಅಗತ್ಯತೆಯ ಮಹತ್ವವನ್ನು ಪಿಪಿಟಿ ಮೂಲಕ  ಪ್ರದರ್ಶಿಸಿ ನೆರೆದ ವಿದ್ಯಾರ್ಥಿಗಳಿಗೆ  ಮನವರಿಕೆ ಮಾಡಿಕೊಟ್ಟರು.

ಸಂಸ್ಥೆಯ  ನಿರ್ದೇಶಕರಾದ  ಎಸ್.ಎಂ.ಪೃಥ್ವೀಶ್ ಅವರು ಮಾತನಾಡುತ್ತಾ ದೈನಂದಿನ ತರಗತಿಗಳಲ್ಲಿ ಕಲಿಯುವ ಅಂಶಗಳನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಮಾದರಿಗಳನ್ನು ತಯಾರಿಸಿ ಅವುಗಳನ್ನು ಮೂರ್ತ ರೂಪಕ್ಕೆ ತಂದು, ಸಮಾಜಕ್ಕೆ ಅನುಕೂಲಕರವಾಗುವಂತಹ ಮಾದರಿಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಇಂತಹ ವಸ್ತುಪ್ರದರ್ಶಗಳು ಸಹಕಾರಿಯಾಗುತ್ತವೆ ಎಂಬುದನ್ನು ಮನವರಿಕೆ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ದೈನಂದಿನ ತರಗತಿಗಳ ಪ್ರಾಯೋಗಿಕ ಅನ್ವಯಗಳ ತಿಳುವಳಿಕೆ ಮೂಡಿಸಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ವಿಜಯ್ ಕುಮಾರ್  ಅವರು ಮಾತನಾಡುತ್ತಾ ಮಕ್ಕಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ವೈಜ್ಞಾನಿಕ ಮನೋಭಾವನೆ, ತಾರ್ಕಿಕ ಚಿಂತನೆ ಬೆಳೆಯುವಲ್ಲಿ ಸಹಕಾರಿಯಾಗಲಿದೆ, ಎಂದು ಹೇಳಿದರು.

ವೈಜ್ಞಾನಿಕ  ಚಿಂತನೆ ಕೇವಲ ಶಿಕ್ಷಣಕಷ್ಟೇ ಸೀಮಿತವಾಗದೆ, ಮಕ್ಕಳು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಎಂದು  ತೀರ್ಪುಗಾರರಾಗಿ ಆಗಮಿಸಿ ಮಾತನಾಡುತ್ತಾ ಶ್ರೀಯುತ ನಾಗೇಶ್.ಕೆ.ಓರವರು ಹೇಳಿದರು. ಅಲ್ಲದೇ ಮಕ್ಕಳು ತಮ್ಮ ಯೋಚನಾ ಶಕ್ತಿಯನ್ನು ಬಳಸಿ ವಿಜ್ಞಾನ ಮಾದರಿಗಳನ್ನು ತಯಾರಿಸಬೇಕು.  ಮಾರುಕಟ್ಟೆಯಲ್ಲಿ ದೊರೆಯುವ ರೆಡಿ ವಸ್ತುಗಳನ್ನು ತಂದು ತಯಾರಿಸುವುದರಿಂದ ಮಕ್ಕಳಲ್ಲಿ ವೈಜ್ಞಾನಿಕ ಕೌಶಲ್ಯ ಪ್ರಗತಿಯಾಗುವುದಿಲ್ಲ ಎಂದರು.

6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ  ಸಾರಿಗೆ ಮತ್ತು ಸಂವಹನ, ತ್ಯಾಜ್ಯ ವಸ್ತುಗಳ ಸದ್ಭಳಕೆ, ಮಳೆ ಕೊಯ್ಲು, ಆಹಾರ ಸಂರಕ್ಷಣೆ ಮತ್ತು ಭದ್ರತೆ,  ಗಣಿತದ ಮಾದರಿ ರಚನೆ, ಪರ್ಯಾಯ ಸಂಪನ್ಮೂಲಗಳ ನಿರ್ವಹಣೆ, ನೀರಿನ ಸರಿಯಾದ ನಿರ್ವಹಣೆ ಮತ್ತು ಆರೋಗ್ಯ ಮತ್ತು ಸಧೃಡತೆ,  ರೋಬೋಟಿಕ್ಸ್ ತಂತ್ರಜ್ಞಾನ  ಈ ವಿಷಯಗಳ ಅಡಿಯಲ್ಲಿ ಸುಮಾರು 210 ವಿದ್ಯಾರ್ಥಿಗಳು 103 ಮಾದರಿಗಳನ್ನು ತಯಾರಿಸಿ ಅತೀ ಉತ್ಸಾಹದಿಂದ ಭಾಗವಹಿಸಿ ಪ್ರದರ್ಶಿಸಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಗೌರೀಶ್.ವಿ.ಎನ್ ಸರ್ಕಾರಿ ಪ್ರೌಢಶಾಲೆ ಗೌಡನಹಳ್ಳಿ ಹಿರಿಯೂರು ತಾ|| ಮತ್ತು ಶ್ರೀಯುತ ಮೃತ್ಯುಂಜಯ ಸರ್ಕಾರಿ ಪ್ರೌಢಶಾಲೆ (ಕೋಟೆ) ಚಿತ್ರದುರ್ಗ ತೀರ್ಪುಗಾರರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಡಾ|| ಕೆ.ಎನ್. ಸ್ವಾಮಿ ಮತ್ತು ಮುಖ್ಯೋಪಾಧ್ಯಾಯರಾದ ಶ್ರೀ ಸಿ ಡಿ ಸಂಪತ್ ಕುಮಾರ್, ಐ.ಸಿ.ಎಸ್.ಸಿ.ವಿಭಾಗದ ಪ್ರಾಂಶುಪಾಲರಾದ ಶ್ರೀ ಪಿ. ಬಸವರಾಜಯ್ಯನವರು  ಹಾಗೂ ಸಂಸ್ಥೆಯ ಬೋಧಕ / ಬೋಧಕೇತರ ವರ್ಗದವರು ಹಾಗೂ  ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ತೃಷಾ 9ನೇ ತರಗತಿ ವಿದ್ಯಾರ್ಥಿನಿ ಪ್ರಾರ್ಥಿಸಿದರು. ಶ್ರೀ ತಿಪ್ಪೇಸ್ವಾಮಿ ಎನ್.ಜಿ. ನಿರೂಪಿಸಿದರು, ಮೇಘನಾ ಸ್ವಾಗತಿಸಿದರು, ರೇಖಾ. ಪಿ.ವಿ.  ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಶಿಕ್ಷಕರ ಹಿತರಕ್ಷಣೆಗೆ ಕೈ ಸರ್ಕಾರ ಬದ್ಧ | ಕೊಟ್ಟ ಮಾತು ತಪ್ಪದ ಸಿಎಂ ಸಿದ್ದು :  ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್

ಚಿತ್ರದುರ್ಗ, ಮೇ 19 :  ಶಿಕ್ಷಕರ ಹಿತ ಕಾಯುವಲ್ಲಿ ಕಾಂಗ್ರೆಸ್ ಸರ್ಕಾರದ ಬದ್ಧತೆ, ದೃಢ ನಿರ್ಧಾರ ಪ್ರಶ್ನಾತೀತ ಎಂದು ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ತಾಲೂಕಿನ ಸೀಬಾರದಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್

ವಿ.ಪಿ ಅಕಾಡೆಮಿ ವತಿಯಿಂದ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ : ಡಾ.ರುದ್ರಮುನಿ

ಸುದ್ದಿಒನ್, ಚಿತ್ರದುರ್ಗ, ಮೇ. 19 : ಸಾಂಪ್ರದಾಯಿಕ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ನಗರದ ವಿ.ಪಿ ಅಕಾಡೆಮಿ ವತಿಯಿಂದ ಆಸಕ್ತ ಮಕ್ಕಳಿಗೆ ಕೃಷಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಸಾವಯವ ಕೃಷಿ ಪದ್ಧತಿಯು ಆರೋಗ್ಯಕರ ವಾತಾವರಣವನ್ನು ಸೃಷ್ಟಿಸುವ

ಶಿವಶಿಂಪಿ ಸಮಾಜಕ್ಕೆ 25 ವರ್ಷ | ಅದ್ದೂರಿಯಾಗಿ ಆಚರಣೆಗೆ ವಾರ್ಷಿಕ ಸಭೆಯಲ್ಲಿ ತೀರ್ಮಾನ

ಸುದ್ದಿಒನ್, ಚಿತ್ರದುರ್ಗ ಮೇ. 19 : ಚತ್ರದುರ್ಗ ಜಿಲ್ಲೆಯಲ್ಲಿ ಶಿವಶಿಂಪಿ ಸಮಾಜ ಪ್ರಾರಂಭವಾಗಿ ಈ ವರ್ಷಕ್ಕೆ 25 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದರಿಂದ ಈ ವರ್ಷ ಅದ್ದೂರಿಯಾಗಿ ಆಚರಣೆ ಮಾಡಲು ಇಂದು ನಡೆದ ಚಿತ್ರದುರ್ಗ ಜಿಲ್ಲಾ

error: Content is protected !!