ಬೆಂಗಳೂರು : ಬಾರೀ ವಿರೋಧ ಉಂಟು ಮಾಡಿದ್ದ ಜಾತಿಗಣತಿಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಸ್ವೀಕಾರ ಮಾಡಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಈ ವರದಿ ನೀಡಿದ್ದು, ಸುಮಾರಿ 200 ಪುಟಗಳಷ್ಟು ಇದೆ. ಅದರಲ್ಲಿ ಯಾವ್ಯಾವ ಜಾತಿ ಎಷ್ಟೆಷ್ಟು ಜನಸಂಖ್ಯೆ ಹೊಂದಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

ರಾಜ್ಯದಲ್ಲಿ ನಡೆಸಿರುವ 1351 ಜಾತಿಗಳ ಗಣತಿ ವರದಿಯಲ್ಲಿ ದಾಖಲಾಗಿರುವ ಜನಸಂಖ್ಯೆ ವಿವರ ಇಲ್ಲಿದ್ದು, ಈ ಬಾರಿ ಹೊಸದಾಗಿ 152 ಜಾತಿಗಳು ಗುರುತಿಸಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದೆ. ಹಿಂದುಳಿದ ವರ್ಗದಲ್ಲಿ ಕುರುಬ ಸಮುದಾಯ ಅತ್ಯಂತ ಹಿಂದುಳಿದ ದೊಡ್ಡ ಸಮುದಾಯ.
ಪರಿಶಿಷ್ಟ ಜಾತಿ-1.8ಕೋಟಿ
ಪರಿಶಿಷ್ಟ ಪಂಗಡ-45 ಲಕ್ಷ
ಮುಸ್ಲಿಂ-70 ಲಕ್ಷ
ಲಿಂಗಾಯತ-65 ಲಕ್ಷ
ಒಕ್ಕಲಿಗ -60 ಲಕ್ಷ
ಕುರುಬ-45 ಲಕ್ಷ
ಈಡಿಗ-15 ಲಕ್ಷ
ವಿಶ್ವಕರ್ಮ-15 ಲಕ್ಷ
ಬೆಸ್ತ-15 ಲಕ್ಷ
ಬ್ರಾಹ್ಮಣ-14 ಲಕ್ಷ
ಯಾದವ-10 ಲಕ್ಷ
ಮಡಿವಾಳ-6 ಲಕ್ಷ
ಅರೆ ಅಲೆಮಾರಿ-6 ಲಕ್ಷ
ಕುಂಬಾರ -5 ಲಕ್ಷ
ಸವಿತಾ ಸಮಾಜ-5 ಲಕ್ಷ
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









