Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜನವರಿ 25 ರಿಂದ 30 ರವರೆಗೆ ಮಹಾರಾಷ್ಟ್ರದಲ್ಲಿ ರಾಷ್ಟ್ರಮಟ್ಟದ ಮಹಾಕುಂಭ-2023 : ಸರ್ದಾರ್ ಸೇವಾಲಾಲ್ ಸ್ವಾಮೀಜಿ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಚಿತ್ರದುರ್ಗ, (ಡಿ.12): ಅನ್ಯ ಸಂಸ್ಕೃತಿಯಿಂದ ನಮ್ಮ ಭಾಷೆ, ಆಚಾರ, ವಿಚಾರಗಳ ಮೇಲೆ ಪೆಟ್ಟು ಬೀಳುತ್ತಿರುವುದರಿಂದ ಧಾರ್ಮಿಕ ತಳಹದಿಯ ಮೇಲೆ ಬಂಜಾರ ಜನಾಂಗ ಸಂಘಟಿತರಾಗುವಂತೆ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಕರೆ ನೀಡಿದರು.

ಅಖಿಲ ಭಾರತೀಯ ಬಂಜಾರ ಮತ್ತು ಲಬಾನಾ ಸಮಾಜದ ವತಿಯಿಂದ ಜ.25 ರಿಂದ 30 ರವರೆಗೆ ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಗೋದ್ರಿಯಲ್ಲಿ ನಡೆಯುವ ಮಹಾಕುಂಭ-2023 ರ ಪ್ರಯುಕ್ತ ಬಂಜಾರ ಗುರುಪೀಠದಲ್ಲಿ ನಡೆದ ಪ್ರಾಂತ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ಮಹಾಕುಂಭ ಇದಾಗಿರುವುದರಿಂದ ದೇಶ ಮತ್ತು ವಿದೇಶಗಳಿಂದ ಬಂಜಾರ ಸಮಾಜದವರು ಭಾಗವಹಿಸಲಿದ್ದು, ಸಾಮರಸ್ಯ ಮೂಡಿಸುವ ಈ ಕಾರ್ಯಕ್ರಮದಲ್ಲಿ ಬಂಜಾರ ಸಮಾಜದ ಕಲೆ, ಸಂಸ್ಕøತಿ, ಗುರುಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ. ಬಂಜಾರ ಸಮಾಜದವರನ್ನು ಹೆಚ್ಚು ಮತಾಂತರಗೊಳಿಸುತ್ತಿರುವುದನ್ನು ತಡೆಗಟ್ಟಬೇಕಾಗಿರುವುದರಿಂದ ಹಳ್ಳಿ ಹಳ್ಳಿಗಳಲ್ಲಿ ಬಂಜಾರ ಜನಾಂಗವನ್ನು ಜಾಗೃತಿಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ಚಿತ್ರದುರ್ಗದಿಂದ ಎರಡು ಸಾವಿರಕ್ಕೂ ಹೆಚ್ಚು ಬಂಜಾರ ಜನಾಂಗ ಮಹಾಕುಂಭದಲ್ಲಿ ಪಾಲ್ಗೊಳ್ಳಲಿದ್ದು, ಸುಮಾರು ಎಂಟರಿಂದ ಹತ್ತು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್‍ನಾಯ್ಕ ಮಾತನಾಡುತ್ತ 370 ವಿಧದಲ್ಲಿ ಬಂಜಾರ ಜನಾಂಗವನ್ನು ಮತಾಂತರಗೊಳಿಸಲಾಗುತ್ತಿದೆ. ನಮ್ಮ ಕಣ್ಣೆದುರಿನಲ್ಲಿಯೇ ಮತಾಂತರ ನಡೆಯುತ್ತಿದ್ದರೂ ತಡೆಯಲು ಆಗುತ್ತಿಲ್ಲ. ಕರಿಯಟ್ಟಿಯಲ್ಲಿ ಹನ್ನೆರಡು ಮನೆಗಳಿದ್ದು, ಕರಿಯಮ್ಮನ ಪೂಜಾರಿಯೇ ಮತಾಂತರ ಮಾಡಿದ್ದಾರೆ. ಬಂಜಾರ ಜನಾಂಗಕ್ಕೆ ಹಣದ ಆಸೆ ತೋರಿಸಿ ಮತಾಂತರ ಮಾಡಿಕೊಳ್ಳುತ್ತಿರುವುದನ್ನು ನಿಲ್ಲಿಸಬೇಕಾಗಿರುವುದರಿಂದ ಮೊದಲು ಸಂಘಟಿತರಾಗಬೇಕೆಂದು ತಿಳಿಸಿದರು.
ಬಂಜಾರ ಜನಾಂಗಕ್ಕೆ ತನ್ನದೆ ಆದ ಕಲೆ ಸಂಸ್ಕೃತಿ, ಆಚಾರ ವಿಚಾರಗಳಿದೆ. ಈಗಾಗಲೆ ಮತಾಂತರಗೊಂಡಿರುವವರನ್ನು ವಾಪಸ್ ಬರುವಂತೆ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಮತಾಂತರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದರು.

ಬಂಜಾರ ಸಮಾಜದ ಮುಖಂಡ ಡಾ.ಮೋಹನ್ ಮಾತನಾಡಿ ನಮ್ಮಲ್ಲಿ ಹಣಬಲ, ಜನಬಲವಿಲ್ಲದ ಕಾರಣ ಮತಾಂತರವಾಗುತ್ತಿದ್ದರೂ ನೋಡಿಕೊಂಡು ಅಸಹಾಯಕರಾಗಿದ್ದೇವೆ. ಕ್ರೈಸ್ತರಿಗೆ ವಿದೇಶಗಳಿಂದ ಕೋಟಿಗಟ್ಟಲೆ ಹಣ ಹರಿದು ಬರುತ್ತದೆ. ಹಾಗಾಗಿ ಅವರು ಲಂಬಾಣಿ ಜನಾಂಗದವರನ್ನು ಗುರಿಯಾಗಿಸಿಕೊಂಡು ಆಮಿಷವೊಡ್ಡಿ ಮತಾಂತರಗೊಳಿಸುತ್ತಿದ್ದಾರೆ. ನಮ್ಮಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಸಾಕಷ್ಟು ಜನರಿದ್ದಾರೆ. ಆದರೆ ಮಠದ ಅಭಿವೃದ್ದಿಗೆ ಯಾರು ಸಹಾಯ ಮಾಡಲು ಮುಂದೆ ಬರುತ್ತಿಲ್ಲ. ಲಂಬಾಣಿ ಜನಾಂಗದಲ್ಲಿ ಕಲೆಯಿದೆ. ವಿದ್ಯಾವಂತರಿದ್ದಾರೆ. ಹಣಕಾಸಿನ ಮುಗ್ಗಟ್ಟು, ಬಡತನ ಮತಾಂತರಕ್ಕೆ ಕಾರಣವಾಗಿದೆ. ಬಂಜಾರ ಜನಾಂಗದ ಪ್ರತಿಯೊಬ್ಬರು ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದೇವೆನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.

ಧರ್ಮ ಪ್ರಚಾರಕ ತುಳಸಿನಾಯ್ಕ, ಬಂಜಾರ ಜನಾಂಗದ ಯುವ ಮುಖಂಡ ಜಯಸಿಂಹ ಕಾಟ್ರೋಚ್, ಗುರುಪ್ರಸಾದ್ ವೇದಿಕೆಯಲ್ಲಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ನಿರ್ದೇಶಕಿ ರುದ್ರಾಕ್ಷಿಭಾಯಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರವಿನಾಯ್ಕ, ತಿಪ್ಪೇಸ್ವಾಮಿ ನಾಯ್ಕ ಹಾಗೂ ಜನಾಂಗದ ಮುಖಂಡರುಗಳು ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

ಚಿತ್ರದುರ್ಗದಲ್ಲಿ ಅಕ್ಕ-ತಂಗಿಯರ ಸಂಭ್ರಮದ ಭೇಟಿ, ಸಂಭ್ರಮಿಸಿದ ಜನತೆ : ತಿಪ್ಪಿನಘಟ್ಟಮ್ಮ, ಬರಗೇರಮ್ಮ ದೇವಿಯ ಭೇಟಿಗೆ ಕಾತರದಿಂದ ಕಾದ ಭಕ್ತರು

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಮೇ. 07 :  ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ

error: Content is protected !!