Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ,(ಜೂ.25) :  ಮಾನವನಿಗೆ ಜ್ಞಾನ, ಬೆಳಕನ್ನು ನೀಡಿ ದುಃಖವನ್ನು ದೂರ ಮಾಡುವುದು ವಿದ್ಯೆ ಎಂದು ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ತಿಳಿಸಿದರು.

ಕರ್ನಾಟಕ ಮುಸ್ಲಿಂ ಸಮಾಜ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘ ಜಿಲ್ಲಾ ಶಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ಮುಸ್ಲಿಂ ಸಮುದಾಯದಲ್ಲಿ ಸ್ಕೂಲ್ ಬಿಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಆದರೆ ನಿಮ್ಮ ಸಮುದಾಯದಲ್ಲಿ ಉನ್ನತವಾದ ಅಭ್ಯಾಸವನ್ನು ಮಾಡುವುದರ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೂಡುಗೆಯನ್ನು ನೀಡಿರುವ ಉದಾಹರಣೆಗಳು ಇವೆ.

ವಿದ್ಯೆ ಸರ್ವಕಾಲಕ್ಕೂ ಸಹಾ ಗೌರವವನ್ನು ತರುತ್ತದೆ. ಅದರೆ ಹಣ ಮತ್ತು ಅಧಿಕಾರ ಗೌರವವನ್ನು ನೀಡುವುದಿಲ್ಲ, ಮಾಜಿ ರಾಷ್ಟ್ರಪತಿಗಳಾದ ಕಲಾಂರವರು ವಿದ್ಯಾವಂತರಾಗಿದ್ದರಿಂದ ಅವರನ್ನು ರಾಷ್ಟ್ರಪತಿಗಳಾಗಿ ಮಾಡಿತು ಅಲ್ಲದೆ ಪ್ರಪಂಚದಲ್ಲಿ ಉತ್ತಮವಾದ ಹೆಸರನ್ನು ಹೊಂದಿದ್ದರು. ವಿದ್ಯೆಯಿಂದ ಬದುಕನ್ನು ನಡೆಸಲು ಸಾಧ್ಯವಿದೆ ಎಂದು ತೋರಿಸಿದವರು ಎಂದು ಶ್ರೀಗಳು ತಿಳಿಸಿದರು.

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸುವ ಶಕ್ತಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ. ಇದರಿಂದ ಉತ್ತಮವಾದ ವ್ಯಕ್ತಿಗಳನ್ನು ರೂಪಿಸಬಹುದಾಗಿದೆ. ಈಗ ಮುಸ್ಲಿಂ ಜನಾಂಗದಲ್ಲಿ ಶಾಲೆಯನ್ನು ಬಿಡಿಸುವವರ ಸಂಖ್ಯೆ ಕಡಿಮೆ ಇದೆ. ಮಕ್ಕಳಿಗೆ ಈ ರೀತಿಯಾದ ಸಹಾಯ ಮಾಡುವ ಕಲ್ಪನೆ ಉತ್ತಮವಾದದು, ವಿದ್ಯೆ ಯಾವೂತ್ತು ನಿಂತ ನೀರಾಗದೆ ಹರಿಯುವ ನೀರಾಗಬೇಕಿದೆ.

ಇದರಿಂದ ಮನಸ್ಸು ಮತ್ತು ದೇಶ ಸ್ವಚ್ಚವಾಗುತ್ತದೆ ಎಂದ ಶ್ರೀಗಳು ಪುಸ್ತಕ ಮಾತ್ರ ವಿದ್ಯೆ ಅಲ್ಲ, ಮೇದಾ ಶಕ್ತಿ ಪ್ರಚೋದಿಸುವ ವಿದ್ಯೆ ಆಗುತ್ತದೆ. ವಿದ್ಯೆ ಯಾವೂತ್ತು ಸಹಾ ದುಃಖವನ್ನು ನೀಡುವುದಿಲ್ಲ, ಮುಕ್ತಿಯನ್ನು ಪಡೆಯುವ ದಾರಿ ವಿದ್ಯೆಯಾಗಿದೆ ಎಂದು ಶಿವಲಿಂಗಾನಂದ ಮಹಾಸ್ವಾಮಿಗಳು ತಿಳಿಸಿದರು.

ವಕ್ಫ್ ಮಂಡಳಿ ರಾಜ್ಯ ಸಮಿತಿ ಸದಸ್ಯ ಡಾ.ಅನ್ವರ್‍ಪಾಷ ಮಾತನಾಡಿ, ಮಕ್ಕಳ ಪ್ರಗತಿಭೆಯನ್ನು ಗುರುತಿಸಿ ಅದನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಆಗ ಮಾತ್ರ ಪ್ರತಿಭೆಗಳು ಹೂರ ಬರಲು ಸಾಧ್ಯವಿದೆ. ಇಂತಹ ಕೆಲಸವನ್ನು ಈ ರೀತಿಯ ಸಂಘ ಸಂಸ್ಥೆಗಳು ಮಾಡಬೇಕಿದೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳಿಗೆ ಸೇತುವೆಯಾಗಿ ಕೆಲಸವನ್ನು ಮಾಡಬೇಕಿದೆ.

ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಿದರೆ ಮಾತ್ರವೇ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಪ್ರತಿ ದಿನ ನಿಮ್ಮ ಮಗು ಯಾವ ರೀತಿ ಓದುತ್ತಿದೆ, ಎಂಬುದನ್ನು ಪರಿಶೀಲನೆ ಮಾಡಿ ವಾರಕ್ಕೋಮ್ಮೆ ಶಾಲೆಯ ಶಿಕ್ಷಕರನ್ನು ಬೇಟಿ ನಿಮ್ಮ ಮಗುವಿನ ಬಗ್ಗೆ ತಿಳಿಯಬೇಕಿದೆ. ಈ ರೀತಿಯಾದ ಸ್ಪಂದನೆ ಇದ್ಧಾಗ ಮಾತ್ರ ವಿದ್ಯಾರ್ಥಿಗಳು ಉತ್ತಮವಾದ ಸ್ಥಾನಕ್ಕೆ ಹೋಗಲು ಸಾಧ್ಯವಿದೆ. ಶಿಕ್ಷಕರಾದವರು ಮಕ್ಕಳ ಭವಿಷ್ಯದ ಬಗ್ಗೆ ಆಲೋಚನೆಯನ್ನು ಮಾಡಬೇಕಿದೆ. ತಮ್ಮ ವೃತ್ತಿಯಲ್ಲಿ ಪ್ರಮಾಣಿಕತೆಯನ್ನು ರೂಢಿಸಿಕೊಳ್ಳುವಂತೆ ಕರೆ ನೀಡಿದರು.

ಆಧ್ಯಾತ್ಮಿಕ ಚಿಂತಕ ಅಬ್ದುಲ್ ಖಾದರ್ ಸಖಾಫಿ, ದಿವ್ಯ ಸಾನಿಧ್ಯ ವಹಿಸಿದ್ದರು. ಕೆ.ಎಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ನ್ಯಾಯವಾದಿ ಬಿ.ಕೆ.ರಹಮತ್‍ವುಲ್ಲಾ, ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಶಾಕೀರ್ ಅಹಮದ್ ಅ.ತೋಂಡಿಖಾನ್, ಕಾಂಗ್ರೆಸ್ ಮುಖಂಡ ಅಬ್ದುಲ್ ರೆಹಮಾನ್ ಭಾಗವಹಿಸಿದ್ದರು.

ಆಯಿಷ ಪ್ರಾರ್ಥಿಸಿದರೆ, ಕರ್ನಾಟಕ ಮುಸ್ಲಿಂ ಸಮಾಜದ ರಾಜ್ಯ ಸಂಚಾಲಕ ಎಂ.ಹನೀಫ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮಹಮ್ಮದ್ ತಾಜೀರ್ ಭಾಷಾ ಪ್ರಸ್ತಾವಿಕವಾಗಿ ಮಾತನಾಡಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬೇಸಿಗೆಯಲ್ಲಿ ಕೂದಲಿಗೆ ಎಣ್ಣೆ ಹಚ್ಚಿದರೆ ಏನಾಗುತ್ತೆ ಗೊತ್ತಾ ?

ಸುದ್ದಿಒನ್ : ಹವಾಮಾನದ ಬದಲಾವಣೆಗೆ ಅನುಗುಣವಾಗಿ ಚರ್ಮ ಮತ್ತು ಕೂದಲಿಗೆ ಸರಿಯಾದ ಪೋಷಣೆ ನೀಡಬೇಕು. ಇಲ್ಲದಿದ್ದರೆ ಖಂಡಿತವಾಗಿಯೂ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ, ಅನೇಕ ಜನರು ತಮ್ಮ ಕೂದಲಿಗೆ ಎಣ್ಣೆಯನ್ನು ಹಾಕುವುದಿಲ್ಲ ಏಕೆಂದರೆ ಅದು ಬೇಸಿಗೆಯಲ್ಲಿ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ

ಈ ರಾಶಿಯವರು ತುಂಬಾ ಪ್ರೀತಿಸುವರು ಆದರೆ ಬೇರೆಯವರ ಜೊತೆ ಮದುವೆ ಒಳ್ಳೆಯದಲ್ಲ, ಗುರುವಾರ ರಾಶಿ ಭವಿಷ್ಯ -ಮೇ-2,2024 ಸೂರ್ಯೋದಯ: 05:53, ಸೂರ್ಯಾಸ್ತ : 06:32 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ ,

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

error: Content is protected !!