ಪ್ರಕೃತಿಯ ವಿಕೋಪಗಳಲ್ಲಿ ಒಂದಾದ ವಾಯುಗುಣ ಬದಲಾವಣೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಾಗುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ವಿಶ್ವ ಸಮಸ್ಥೆಯ ಅಂಗವಾದ ವಿಶ್ವ ಹವಾಮಾನ ಸಂಸ್ಥೆಯು ಡಿಸೆಂಬರ್ 1988ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐ.ಪಿ.ಸಿ.ಸಿ. (Iಟಿಣeಡಿ ಉoveಡಿಟಿmeಟಿಣ Pಚಿಟಿeಟ oಟಿ ಅಟimಚಿಣe ಅhಚಿಟಿge) ಸಂಸ್ಥೆಯನ್ನು ವಿಶ್ವ ಸಂಸ್ಥೆಯ 155 ರಾಷ್ಟ್ರಗಳು ಒಗ್ಗೂಡಿ ಜಿನಿವಾ ನಗರದಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯಿಂದ ವಾಯುಗಣ ಬದಲಾವಣೆಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ಪ್ರಪಂಚದಾದ್ಯಂತ ಇರುವ ಸಂಶೋಧನಾ ಕೇಂದ್ರಗಳಿಂದ ಸಂಗ್ರಹಿಸಿ ವಿಶ್ಲೇಷಿಸಿ ವರದಿಯನ್ನು ವಿಶ್ವ ಹವಾಮಾನ ಸಂಸ್ಥೆಗೆ ಸಲ್ಲಿಸುವ ಕಾರ್ಯನಡೆಯುತ್ತಿದೆ.
1990 ರಿಂದ ಇಲ್ಲಿಯ ವರೆಗೆ ಸುಮಾರು ವರದಿಗಳನ್ನು ಸಲ್ಲಿಸಲಾಗಿದೆ. ವರದಿಯ ಪ್ರಕಾರ ವಾಯುಗಣದ ಬದಲಾವಣೆಗೆ ಮುಖ್ಯಕಾರಣವೇನೆಂದರೆ ಉಷ್ಣಾಂಶದ ಹೆಚ್ಚಾಳವೇ ಕಾರಣ ಎಂದು ಸ್ಪಷ್ಟ ಪಡಿಸಲಾಗಿದೆ. ಇದನ್ನು ವಾಯುಮಂಡಲದ “ಬಿಸಿಯಾಗುವಿಕೆ” (ಜಾಗತೀಕ ತಾಪಮಾನ) ಎಂದು ಕರೆಯಲಾಗಿದೆ. ಇದಕ್ಕೆ ಮಾನವನ ಚಟುವಟಿಕೆಗಳು ಮುಖ್ಯಕಾರಣಲಾಗಿದೆ. ಮನುಷ್ಯನಿಂದ ವಾಯುಮಂಡಲದ ಗುಣಮಟ್ಟವು ಹಾಳಾಗಿ ಕಲುಷಿತವಾಗಿದೆ. ಇದೇ ಪರಿಸರ ಮಾಲಿನ್ಯ, ಇದು ವಾಯುಗುಣ ಬದಲಾವಣೆಗೆ ಮೂಲ ಕಾರಣವಾಗಿದೆ.
ವಿಶ್ವ ವಾಯುಗುಣದ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳ ಅತ್ಯಂತ ಭೀಕರವಾದವು. ಸಮುದ್ರದ ಮಟ್ಟ ಹೆಚ್ಚು ತಗ್ಗು ಪ್ರದೇಶಗಳು ಸಾಗರದ ನೀರಿನಿಂದ ಆವರಿಸಲ್ಪಡುತ್ತವೆ. ಮಳೆ ವೈಪರೀತ್ಯತೆಯಿಂದ ಕೂಡಿರುವುದು. ಬಿಸಿಲಿನ ಝಳ ಹೆಚ್ಚುವುದು. ಬರಗಾಲಗಳ ಭೀಕರತೆಯೂ ತೀವ್ರಗೊಳ್ಳುವುದು. ಚಂಡಮಾರುತದ ಹಾವಳಿ ಹೆಚ್ಚಾಗುವುದು. ಸಾಗರಗಳ ಉಬ್ಬರ ವಿಳಿತಗಳೂ ಭೀಕರವಾಗಿರುತ್ತವೆಯೆಂದು ವರದಿಗಳು ವಿಶ್ಲೇಷಿಸಿದೆ. ಈ ಎಲ್ಲಾ ಪರಿಣಾಮಗಳನ್ನು ವಿಶ್ಲೇಷಿಸಿ ಪ್ರಪಂಚದ ಉಷ್ಣಾಂಶದ ಹೆಚ್ಚಾಳವನ್ನು ಮಿತಿಯಲ್ಲಿರುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ವಾಯುಗುಣ ಬದಲಾವಣೆಯೇ ಭಾರತದ ಕೆಲವು ಭಾಗಗಳಲ್ಲಿ ಆಕಾಲಿಕ ಮಳೆ ಹಾಗೂ ಪ್ರವಾಹಗಳಿಗೆ ಕಾರಣವೆಂದು ತಿಳಿಸಿದೆ.
ವಾಯುಮಂಡಲ ಉಷ್ಣಾಂಶ ಹೆಚ್ಚಾಗಲು ಕಾರಣವಾದ ಇಂಗಾಲಮ್ಲ, ಮೀಥೇನ್, ನೈಟ್ರಸ್ ಆಕ್ಸೈಡ್ ಇವುಗಳ ಪರಿಣಾಮವಾಗಿ 21ನೇಯ ಶತಮಾನ ಅಂತ್ಯದ ವೇಳೆಗೆ ಪ್ರಪಂಚದ ಉಷ್ಣಾಂಶವು 20 ರಿಂದ 4.50 ಸೆ.ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಐಪಿಸಿಸಿ ಸಂಸ್ಥೆ ವರದಿ ಮಾಡಿದೆ ಮತ್ತು ಇದರಿಂದ ಭೂಮಿಯ ವಾಯುಗುಣವು ಬದಲಾವಣೆ ಹೊಂದುವುದು, ಇದನ್ನು ತಡೆಗಟ್ಟಲು ವಿಶ್ವ ರಾಷ್ಟ್ರಗಳು 2015ರಲ್ಲಿ ಫ್ರಾನ್ಸ್‍ನ ಪ್ಯಾರಿಸ್‍ನಲ್ಲಿ ಸಭೆ ಸೇರಿ ಭಾರತ ದೇಶ ಸೇರಿದಂತೆ ಎಲ್ಲಾ ರಾಷ್ಟ್ರಗಳು ಮುಂದಿನ ದಶಕದಲ್ಲಿ ಇಂಗಾಲಾಮ್ಲದ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ.
ಇತ್ತೀಚಿನ ದಿನಗಳಲ್ಲಿ ಯುರೋಪ್ ದೇಶ ಮತ್ತು ಇತರ ರಾಷ್ಟ್ರಗಳಲ್ಲಿ ಕಾಡ್ಗಿಚ್ಚು ಮತ್ತು ಉತ್ತರ ಭಾರತದಲ್ಲಿ ಹೆಚ್ಚಿನ ಮಳೆಯಾಗಿ ಭೂಕೂಸಿತ ಉಂಟಾಗಿ ಪ್ರವಾಹಗಳು ಸಂಭವಿಸಿವೆ ಎಂದು ವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.
ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)