Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾಗತಿಕ ತಪಮಾನದಿಂದ ವಾಯುಗುಣದ ಮೇಲೆ ಯಾವ ರೀತಿಯ ಪರಿಣಾಮ ?

Facebook
Twitter
Telegram
WhatsApp

 

ಪ್ರಕೃತಿಯ ವಿಕೋಪಗಳಲ್ಲಿ ಒಂದಾದ ವಾಯುಗುಣ ಬದಲಾವಣೆ ಮತ್ತು ಬಿಸಿಲಿನ ತಾಪಮಾನ ಹೆಚ್ಚಾಗುವುದಕ್ಕೆ ಕಾರಣಗಳನ್ನು ಪತ್ತೆಹಚ್ಚಲು ವಿಶ್ವ ಸಮಸ್ಥೆಯ ಅಂಗವಾದ ವಿಶ್ವ ಹವಾಮಾನ ಸಂಸ್ಥೆಯು ಡಿಸೆಂಬರ್ 1988ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಐ.ಪಿ.ಸಿ.ಸಿ. (Iಟಿಣeಡಿ ಉoveಡಿಟಿmeಟಿಣ Pಚಿಟಿeಟ oಟಿ ಅಟimಚಿಣe ಅhಚಿಟಿge) ಸಂಸ್ಥೆಯನ್ನು ವಿಶ್ವ ಸಂಸ್ಥೆಯ 155 ರಾಷ್ಟ್ರಗಳು ಒಗ್ಗೂಡಿ ಜಿನಿವಾ ನಗರದಲ್ಲಿ ಸ್ಥಾಪಿಸಲಾಯಿತು. ಈ ಸಂಸ್ಥೆಯಿಂದ ವಾಯುಗಣ ಬದಲಾವಣೆಗೆ ಸಂಬಂಧಿಸಿದ ವೈಜ್ಞಾನಿಕ ಮಾಹಿತಿಯನ್ನು ಪ್ರಪಂಚದಾದ್ಯಂತ ಇರುವ ಸಂಶೋಧನಾ ಕೇಂದ್ರಗಳಿಂದ ಸಂಗ್ರಹಿಸಿ ವಿಶ್ಲೇಷಿಸಿ ವರದಿಯನ್ನು ವಿಶ್ವ ಹವಾಮಾನ ಸಂಸ್ಥೆಗೆ ಸಲ್ಲಿಸುವ ಕಾರ್ಯನಡೆಯುತ್ತಿದೆ.

1990 ರಿಂದ ಇಲ್ಲಿಯ ವರೆಗೆ ಸುಮಾರು ವರದಿಗಳನ್ನು ಸಲ್ಲಿಸಲಾಗಿದೆ. ವರದಿಯ ಪ್ರಕಾರ ವಾಯುಗಣದ ಬದಲಾವಣೆಗೆ ಮುಖ್ಯಕಾರಣವೇನೆಂದರೆ ಉಷ್ಣಾಂಶದ ಹೆಚ್ಚಾಳವೇ ಕಾರಣ ಎಂದು ಸ್ಪಷ್ಟ ಪಡಿಸಲಾಗಿದೆ. ಇದನ್ನು ವಾಯುಮಂಡಲದ “ಬಿಸಿಯಾಗುವಿಕೆ” (ಜಾಗತೀಕ ತಾಪಮಾನ) ಎಂದು ಕರೆಯಲಾಗಿದೆ. ಇದಕ್ಕೆ ಮಾನವನ ಚಟುವಟಿಕೆಗಳು ಮುಖ್ಯಕಾರಣಲಾಗಿದೆ. ಮನುಷ್ಯನಿಂದ ವಾಯುಮಂಡಲದ ಗುಣಮಟ್ಟವು ಹಾಳಾಗಿ ಕಲುಷಿತವಾಗಿದೆ. ಇದೇ ಪರಿಸರ ಮಾಲಿನ್ಯ, ಇದು ವಾಯುಗುಣ ಬದಲಾವಣೆಗೆ ಮೂಲ ಕಾರಣವಾಗಿದೆ.

ವಿಶ್ವ ವಾಯುಗುಣದ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳ ಅತ್ಯಂತ ಭೀಕರವಾದವು. ಸಮುದ್ರದ ಮಟ್ಟ ಹೆಚ್ಚು ತಗ್ಗು ಪ್ರದೇಶಗಳು ಸಾಗರದ ನೀರಿನಿಂದ ಆವರಿಸಲ್ಪಡುತ್ತವೆ. ಮಳೆ ವೈಪರೀತ್ಯತೆಯಿಂದ ಕೂಡಿರುವುದು. ಬಿಸಿಲಿನ ಝಳ ಹೆಚ್ಚುವುದು. ಬರಗಾಲಗಳ ಭೀಕರತೆಯೂ ತೀವ್ರಗೊಳ್ಳುವುದು. ಚಂಡಮಾರುತದ ಹಾವಳಿ ಹೆಚ್ಚಾಗುವುದು. ಸಾಗರಗಳ ಉಬ್ಬರ ವಿಳಿತಗಳೂ ಭೀಕರವಾಗಿರುತ್ತವೆಯೆಂದು ವರದಿಗಳು ವಿಶ್ಲೇಷಿಸಿದೆ. ಈ ಎಲ್ಲಾ ಪರಿಣಾಮಗಳನ್ನು ವಿಶ್ಲೇಷಿಸಿ ಪ್ರಪಂಚದ ಉಷ್ಣಾಂಶದ ಹೆಚ್ಚಾಳವನ್ನು ಮಿತಿಯಲ್ಲಿರುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ವಾಯುಗುಣ ಬದಲಾವಣೆಯೇ ಭಾರತದ ಕೆಲವು ಭಾಗಗಳಲ್ಲಿ ಆಕಾಲಿಕ ಮಳೆ ಹಾಗೂ ಪ್ರವಾಹಗಳಿಗೆ ಕಾರಣವೆಂದು ತಿಳಿಸಿದೆ.

ವಾಯುಮಂಡಲ ಉಷ್ಣಾಂಶ ಹೆಚ್ಚಾಗಲು ಕಾರಣವಾದ ಇಂಗಾಲಮ್ಲ, ಮೀಥೇನ್, ನೈಟ್ರಸ್ ಆಕ್ಸೈಡ್ ಇವುಗಳ ಪರಿಣಾಮವಾಗಿ 21ನೇಯ ಶತಮಾನ ಅಂತ್ಯದ ವೇಳೆಗೆ ಪ್ರಪಂಚದ ಉಷ್ಣಾಂಶವು 20 ರಿಂದ 4.50 ಸೆ.ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಐಪಿಸಿಸಿ ಸಂಸ್ಥೆ ವರದಿ ಮಾಡಿದೆ ಮತ್ತು ಇದರಿಂದ ಭೂಮಿಯ ವಾಯುಗುಣವು ಬದಲಾವಣೆ ಹೊಂದುವುದು, ಇದನ್ನು ತಡೆಗಟ್ಟಲು ವಿಶ್ವ ರಾಷ್ಟ್ರಗಳು 2015ರಲ್ಲಿ ಫ್ರಾನ್ಸ್‍ನ ಪ್ಯಾರಿಸ್‍ನಲ್ಲಿ ಸಭೆ ಸೇರಿ ಭಾರತ ದೇಶ ಸೇರಿದಂತೆ ಎಲ್ಲಾ ರಾಷ್ಟ್ರಗಳು ಮುಂದಿನ ದಶಕದಲ್ಲಿ ಇಂಗಾಲಾಮ್ಲದ ಉತ್ಪಾದನೆಯನ್ನು ಕಡಿಮೆ ಮಾಡಲು ಒಪ್ಪಂದಕ್ಕೆ ಸಹಿ ಹಾಕಿದೆ.

ಇತ್ತೀಚಿನ ದಿನಗಳಲ್ಲಿ ಯುರೋಪ್ ದೇಶ ಮತ್ತು ಇತರ ರಾಷ್ಟ್ರಗಳಲ್ಲಿ ಕಾಡ್ಗಿಚ್ಚು ಮತ್ತು ಉತ್ತರ ಭಾರತದಲ್ಲಿ ಹೆಚ್ಚಿನ ಮಳೆಯಾಗಿ ಭೂಕೂಸಿತ ಉಂಟಾಗಿ ಪ್ರವಾಹಗಳು ಸಂಭವಿಸಿವೆ ಎಂದು ವೈಜ್ಞಾನಿಕವಾಗಿ ಅಭಿಪ್ರಾಯ ಪಡಲಾಗಿದೆ.

ವಿಶೇಷ ಲೇಖನ :
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈರುಳ್ಳಿ ಬೆಲೆಯಲ್ಲಿ ಮತ್ತೆ ಏರಿಕೆ : ಗ್ರಾಹಕರು ಕಂಗಾಲು..!

ಬೆಂಗಳೂರು: ಈರುಳ್ಳಿ ಬೆಲೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದು ಮನೆಯಲ್ಲಿ ಅಡುಗೆ ಮಾಡುವವರ ಪಾಲಿಗೆ, ಹೊಟೇಲ್ ಉದ್ಯಮಿಗಳಿಗೆ ಹೆಚ್ಚು ತಲೆ ನೋವಾಗಿದೆ. ಹೀಗೆ ದಿನನಿತ್ಯ ಬಲಸುವ ಪದಾರ್ಥಗಳು ಹೀಗೆ ಬೆಲೆ ಏರಿಕೆಯಾಗುತ್ತಲೇ ಇದ್ದರೆ

ಮಹಿಳೆಯರೆ ಎಚ್ಚರ : ಚಿತ್ರದುರ್ಗದಲ್ಲಿ ಕಾಂಪೌಂಡ್ ಗೆ ನುಗ್ಗಿ ಚಿನ್ನದ ಸರ ಕದ್ದ ಖದೀಮರು..!

ಚಿತ್ರದುರ್ಗ: ಚಿನ್ನದ ಸರ ಕದಿಯುವ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಪೊಲೀಸರು ಕೂಡ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ, ಜನರಿಗೆ ಜಾಗೃತಿ ಮೂಡಿಸಿದ್ದಾರೆ. ಆದರೂ ಕಳ್ಳರು ಮಾತ್ರ ತಮ್ಮ ಕೈಚಳಕವನ್ನು ತೋರಿಸುತ್ತಲೆ ಇದ್ದಾರೆ. ರಸ್ತೆಯಲ್ಲಿ ಹೋಗುವಾಗ, ಒಂಟಿ ಹೆಂಗಸರನ್ನ

3 ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭ : ಕಣದಲ್ಲಿರೋದು ಎಷ್ಟು ಅಭ್ಯರ್ಥಿಗಳು..?

ಬಾರೀ ಕುತೂಹಲಕ್ಕೆ ಕಾರಣವಾಗಿದ್ದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದಾನೇ ಮತದಾನ ಶುರುವಾಗಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಘಟಾನುಘಟಿ ನಾಯಕರು ಅಖಾಡದಲ್ಲಿದ್ದು, ಈಗ ಅಗ್ನಿಪರೀಕ್ಷೆಗೆ ನಿಂತಿದ್ದಾರೆ.

error: Content is protected !!