ಬೆಂಗಳೂರು: ನನ್ನನ್ನು ಹೆದರಿಸಲು ಬರಬೇಡಿ. ನಾನು ಯಾವನಿಗೂ ಹೆದರುವುದಿಲ್ಲ ಎಂದು ಅಪಾರ್ಟ್ಮೆಂಟ್ ಅಸೋಸಿಯೇಷನ್ ಖಚಾಂಚಿ ಕಿರಣ್ ಹೆಬ್ಬಾರ್ ವಿರುದ್ಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇರವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಕಿರಣ್ ಹೆಬ್ಬಾರ್ ಎನ್ನುವವರು ಪತ್ರ ಬರೆದಿದ್ದಾರೆ. ಕೆಲವರಿಗೆ ನಾನು ಯಾರೂ ಅನ್ನೋದೆ ಗೊತ್ತಿಲ್ಲ. ಆತ ಕಾಂಗ್ರೆಸ್ ಸರ್ಕಾರ ಕೆಲಸ ಮಾಡಿಲ್ಲ ಅಂತ ಎಚ್ಚರಿಕೆಯ ಪತ್ರ ಬರೆದಿದ್ದಾನೆ. ಸಾಮಾನ್ಯ ಜ್ಞಾನ ಇಟ್ಟುಕೊಂಡು ನನ್ನ ಹತ್ತಿರ ಡೀಲ್ ಮಾಡಬೇಕು. ನನಗೆ ವಾರ್ನ್ ಮಾಡುವುದು, ಎಚ್ಚರಿಕೆ ಕೊಡುವುದು ನಡೆಯುವುದಿಲ್ಲ. ಪ್ರಧಾನಿ, ಹೋಂ ಮಿನಿಸ್ಟರ್ ಗೆ ಹೆದರದೆ ಜೈಲಿಗೆ ಹೋದವನು ನಾನು. ಇವನು ಯಾರು ಹೆಬ್ಬಾರ್ ಗರ ಹೆದರುತ್ತೀನಾ..? ನಿಮ್ಮ ವಾರ್ನಿಂಗ್ ಗೆ ನಾವೂ ಹೆದರುವುದಿಲ್ಲ. ನಿಮಗೆ ಕೊಟ್ಟಿರುವ ಮಾತನ್ನ ಉಳಿಸಿಕೊಂಡಿಲ್ವಾ..? ಈ ಸರ್ಕಾರವನ್ನು ಹೆದರಿಸೋದಕ್ಕೆ ಬರಬೇಡಿ.
ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ನಿಮ್ಮ ಕೆಲಸ ಮಾಡಿಸಿಕೊಳ್ಳಿ. ಬಿಜೆಪಿಗೆ ಹೆಚ್ಚು ವೋಟ್ ಬೆಂಗಳೂರಿಲ್ಲಿ ತಾನೇ ಕೊಟ್ಟಿದ್ದು. ಭ್ರಮೆ ಬೇಡ. ಬೆದರಿಕೆ ಹಕುವುದು ಬೇಡ. ಬೆದರಿಕೆ ಹಾಕುವುದು ನಮ್ಮ ಸರ್ಕಾರ್ ವಿರುದ್ಧ ನಡೆಯಲ್ಲ. ನಾನು ನೇರ ದಿಟ್ಟವಾಗಿ ಮಾತನಾಡುತ್ತೀನಿ. ಏನು ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ನಾನು ಕಟುವಾಗಿ ಮಾತನಾಡಿದರು, ಮನಸ್ಪೂರ್ತಿಯಾಗಿ ಕೆಲಸವನ್ನು ಮಾಡುತ್ತೇನೆ. ಯಾಕೆ ನಾವೂ ಗ್ಯಾರಂಟಿಗಳನ್ನ ಕೊಟ್ಟಿಲ್ವಾ..? ಎಲ್ಲಾ ರಾಜ್ಯಗಳಲ್ಲೂ ನಮ್ಮ ಗ್ಯಾರಂಟಿಯದ್ದೇ ಚರ್ಚೆಯಿದೆ. ಯಾರು ಯಾರನ್ನೋ ಹೆದರಿಸಿದಂತೆ ನನ್ನ ಹತ್ತಿರ ನಡೆಯುವುದಿಲ್ಲ. ನಾವು ಇರುವುದೇ ನಿಮ್ಮ ಸೇವೆ ಮಾಡುವುದಕ್ಕಾಗಿ ಎಂದು ಡಿಕೆ ಶಿವಕುಮಾರ್ ಉತ್ತರ ಕೊಟ್ಟಿದ್ದಾರೆ.





