ಸಾಕಷ್ಟು ಜನರಿಗೆ ಪಿತ್ತದ ಸಮಸ್ಯೆ ಇರುತ್ತದೆ. ಪಿತ್ತ ಜಾಸ್ತಿಯಾದಷ್ಟು ಮನುಷ್ಯನಿಗೆ ಕಂಫರ್ಟಬಲ್ ಇರುವುದೇ ಇಲ್ಲ. ಪಿತ್ತ ಹೆಚ್ಚಾದರೆ ತಲೆ ಸುತ್ತು ಕೂಡ ಜಾಸ್ತಿ ಆಗುತ್ತದೆ. ಇದಕ್ಕಾಗಿ ಮಾತ್ರೆ ನುಂಗ್ತಾರೆ, ಟಾನಿಕ್ ಕುಡಿತಾರೆ. ಕೆಲವೊಂದಿಷ್ಟು ಮಂದಿಗೆ ಟೀ, ಕಾಫಿ ಕುಡಿದರೂ ಸಹ ಈ ಸಮಸ್ಯೆ ಎದುರಾಗುತ್ತದೆ. ಹಾಗಾದ್ರೆ ಈ ಪಿತ್ತದ ಸಮಸ್ಯೆಯಿಂದ ಪರಿಹಾರಕ್ಕಾಗಿ ಮನೆ ಮದ್ದನ್ನು ಬಳಸಬಹುದಾದರೆ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಒಂದು ವೇಳೆ ನಿಮಗೆ ಪಿತ್ತದ ಸಮಸ್ಯೆ ಎದುರಾದರೆ, ಬೇಗನೆ ಕಡಿಮೆಯಾಗಬೇಕು ಅಂದ್ರೆ ಪುನರ್ಪುಳಿ ಸಿಪ್ಲೆಗಳನ್ನ ತೆಗೆದುಕೊಂಡು ಅದಕ್ಕೆ ಅರ್ಧ ಲೋಟ ಆಗುವಷ್ಟು ಬಿಸಿ ನೀರನ್ನ ಹಾಕಿ. ಅದು ಬಣ್ಣ ಬಿಟ್ಟು ಕೊಳ್ಳುತ್ತದೆ. ಅರ್ಧ ಗಂಟೆಗಳ ಕಾಲ ನೆನೆಯಿಟ್ಟರೆ ಅದರಲ್ಲಿರುವ ಸತ್ವ ನೀರಿನಲ್ಲಿ ಬಿಟ್ಟುಕೊಳ್ಳುತ್ತದೆ. ಬಳಿಕ ಆ ನೀರನ್ನು ಒಂದು ಲೋಟಕ್ಕೆ ಸೇರಿಸಿಕೊಳ್ಳಿ. ಬಣ್ಣವೂ ಬಂದಿರುತ್ತದೆ.

ಆ ನೀರಿಗೆ ಸ್ವಲ್ಪ ಬೆಲ್ಲವನ್ನ ಬೆರೆಸಿಕೊಳ್ಳಿ. ಆ ನೀರನ್ನ ಒಂದು ಅಥವಾ ಎರಡು ದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬನ್ನಿ ನಿಮ್ಮ ಪಿತ್ತ ಹೇಗೆ ಮಾಯವಾಗುತ್ತದೆ ನೋಡಿ. ಮತ್ತೊಂದು ಮಾಹಿತಿ ಪುನರ್ಪುಳಿ ಈ ಸಮಯದಲ್ಲಿಯೇ ಸಿಗಲಿದೆ. ಅಂದ್ರೆ ಏಪ್ರಿಲ್, ಮೇ ತಿಂಗಳಲ್ಲಿ. ಈಗಲೇ ಸಿಪ್ಪೆಯನ್ನು ಒಣಗಿಸಿ ಶೇಖರಣೆ ಮಾಡಿಟ್ಟುಕೊಂಡರೆ ಬಹಳ ಅನುಕೂಲವಾಗುತ್ತದೆ. ಹೀಗೆ ಪಿತ್ತ ಹೆಚ್ಚಾದಾಗ ಬಳಕೆಗೆ ಬರಲಿದೆ.
ಎಳ್ಳಿ ಕಾಯಿಯಿಂದಾನೂ ಪಿತ್ತವನ್ನು ಕಡಿಮೆ ಮಾಡಿಕೊಳ್ಳಬಹುದು. ಬೆಳಗ್ಗೆ ಎದ್ದ ಕೂಡಲೇ ಎಳ್ಳಿ ಕಾಯಿ ಹಾಕಿ ಮಾಡಿದ ಜ್ಯೂಸ್ ಅನ್ನು ಒಂದೆರಡು ದಿನಗಳ ಕಾಲ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಪಿತ್ತ ವಾಸಿಯಾಗುತ್ತದೆ, ತಲೆ ಸುತ್ತು ಕೂಡ ಬರುವುದಿಲ್ಲ.

