Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

SSLC ಪಾಸ್ ಆಗಿದ್ರು ಇಂಟೆಲಿಜೆನ್ಸ್ ಸೇರಬಹುದು : ಬೆಂಗಳೂರಲ್ಲೇ ಇದೆ ಉದ್ಯೋಗ..!

---Advertisement---

ಎಸ್ಎಸ್ಎಲ್ಸಿ ಪಾಸ್ ಆದವರಿಗೆ ಯಾವುದಪ್ಪ ಕೆಲಸ ಸಿಗುತ್ತೆ ಅಂತ ಚಿಂತೆ ಮಾಡೋರಿಗೆ ಖುಷಿ ವಿಷಯ ಒಂದಿದೆ. ಅದರಲ್ಲೂ ಏನೇನೋ ಸರ್ಚ್ ಮಾಡೋ ಐಡಿಯಾ ಇರೋರಿಗೂ ಈಗ ಕೆಲಸ ಸಿಗುವ ಎಲ್ಲಾ ಸಾಧ್ಯತೆಗಳು ಕಾಣಿಸ್ತಾ ಇದಾವೆ. ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಎಸ್ಎಸ್ಎಲ್ಸಿ ಪಾಸ್ ಆದವರಿಗೂ ಕೆಲಕ್ಕೆ ಅರ್ಜಿ ಆಹ್ವಾನ ಮಾಡಿದ್ದಾರೆ.

2025ರಲ್ಲಿ ಇಂಟೆಲಿಜೆನ್ಸ್ ಬಹಳ ದೊಡ್ಡಮಟ್ಟದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡುತ್ತಿದೆ. 4 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹತ್ತನೇ ತರಗತಿ ಪಾಸ್ ಆದವರಿಗೂ ಇದೊಳ್ಳೆ ಅವಕಾಶ. ಅರ್ಜಿ ಹಾಕುವುದಕ್ಕೆ ಆಸಕ್ತಿ ಇರೋ ಅಭ್ಯರ್ಥಿಗಳು ಅದಕ್ಕಿರೋ ರೂಲ್ಸ್ ರೆಗ್ಯುಲೇಷನ್ಸ್ ಒಮ್ಮೆ ನೋಡಿಕೊಂಡು ಬಿಡಿ. ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಕೆ ಮಾಡಬೇಕು. ಬೆಂಗಳೂರಿನಲ್ಲೂ ಇಂಟೆಲಿಜೆನ್ಸ್ ಕಚೇರಿ ಇರುವುದರಿಂದ, ಇಲ್ಲಿಯು ಖಾಲಿ ಹುದ್ದೆಗಳು ಇದಾವೆ. ಹೀಗಾಗಿ ಬೆಂಗಳೂರಿನ ಬ್ರ್ಯಾಂಚ್ ಒಂದರಲ್ಲಿ 204p ಹುದ್ದೆಗಳು ಖಾಲಿ ಇದ್ದು, ಇಲ್ಲಿಯೇ ಕೆಲಸ ಮಾಡಬೇಕು ಎನ್ನುವವರು ಅರ್ಜಿ ಸಲ್ಲಿಕೆ ಮಾಡಬಹುದು.

ಸಹಾಯಕ ನಿರ್ದೇಶಕನ ಹುದ್ದೆ. ಸುಮಾರು 4,987 ಹುದ್ದೆಗಳು ಖಾಲಿ ಇದ್ದು, ಎಸ್ಎಸ್ಎಲ್ಸಿ ಓದಿರುವವರಿಗೆ ಈ ಕೆಲಸ ಸಿಗಲಿದೆ. 18-27 ವರ್ಷ ವಯೋಮಿತಿ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಎಸ್ಸಿ 574, ಎಸ್ಟಿ ಸಮುದಾಯಕ್ಕೆ 426 ಹುದ್ದೆಗಳನ್ನ ಮೀಸಲಿಡಲಾಗಿದೆ. ಉಳಿದಂತೆ ಆರ್ಥಿಕ ದುರ್ಬಲ ವಿಭಾಗಕ್ಕೆ 501, ಇನ್ನಿತರೆ ಹಿಂದುಳಿದ ವರ್ಗಗಳಿಗೆ 1,015, ಅನ್ ರಿಸರ್ವಡ್ ಗೆ 2,471 ಹುದ್ದೆಗಳನ್ನ ಮೀಸಲಿಡಲಾಗೆ. ಹೆಚ್ಚಿನ ಮಾಹಿತಿಗಾಗಿ https://www.bankersadda.com/wp-content/uploads/multisite/2025/07/25180119/ib-sa.pdf ಭೇಟಿ ನೀಡಿ. ಆಗಸ್ಟ್ 17 ಕೊನೆಯ ದಿನವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment