ಎಸ್ಎಸ್ಎಲ್ಸಿ ಪಾಸ್ ಆದವರಿಗೆ ಯಾವುದಪ್ಪ ಕೆಲಸ ಸಿಗುತ್ತೆ ಅಂತ ಚಿಂತೆ ಮಾಡೋರಿಗೆ ಖುಷಿ ವಿಷಯ ಒಂದಿದೆ. ಅದರಲ್ಲೂ ಏನೇನೋ ಸರ್ಚ್ ಮಾಡೋ ಐಡಿಯಾ ಇರೋರಿಗೂ ಈಗ ಕೆಲಸ ಸಿಗುವ ಎಲ್ಲಾ ಸಾಧ್ಯತೆಗಳು ಕಾಣಿಸ್ತಾ ಇದಾವೆ. ಇಂಟೆಲಿಜೆನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಎಸ್ಎಸ್ಎಲ್ಸಿ ಪಾಸ್ ಆದವರಿಗೂ ಕೆಲಕ್ಕೆ ಅರ್ಜಿ ಆಹ್ವಾನ ಮಾಡಿದ್ದಾರೆ.
2025ರಲ್ಲಿ ಇಂಟೆಲಿಜೆನ್ಸ್ ಬಹಳ ದೊಡ್ಡಮಟ್ಟದಲ್ಲಿ ಉದ್ಯೋಗಕ್ಕೆ ಅರ್ಜಿ ಆಹ್ವಾನ ಮಾಡುತ್ತಿದೆ. 4 ಸಾವಿರಕ್ಕೂ ಅಧಿಕ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಹತ್ತನೇ ತರಗತಿ ಪಾಸ್ ಆದವರಿಗೂ ಇದೊಳ್ಳೆ ಅವಕಾಶ. ಅರ್ಜಿ ಹಾಕುವುದಕ್ಕೆ ಆಸಕ್ತಿ ಇರೋ ಅಭ್ಯರ್ಥಿಗಳು ಅದಕ್ಕಿರೋ ರೂಲ್ಸ್ ರೆಗ್ಯುಲೇಷನ್ಸ್ ಒಮ್ಮೆ ನೋಡಿಕೊಂಡು ಬಿಡಿ. ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಕೆ ಮಾಡಬೇಕು. ಬೆಂಗಳೂರಿನಲ್ಲೂ ಇಂಟೆಲಿಜೆನ್ಸ್ ಕಚೇರಿ ಇರುವುದರಿಂದ, ಇಲ್ಲಿಯು ಖಾಲಿ ಹುದ್ದೆಗಳು ಇದಾವೆ. ಹೀಗಾಗಿ ಬೆಂಗಳೂರಿನ ಬ್ರ್ಯಾಂಚ್ ಒಂದರಲ್ಲಿ 204p ಹುದ್ದೆಗಳು ಖಾಲಿ ಇದ್ದು, ಇಲ್ಲಿಯೇ ಕೆಲಸ ಮಾಡಬೇಕು ಎನ್ನುವವರು ಅರ್ಜಿ ಸಲ್ಲಿಕೆ ಮಾಡಬಹುದು.
ಸಹಾಯಕ ನಿರ್ದೇಶಕನ ಹುದ್ದೆ. ಸುಮಾರು 4,987 ಹುದ್ದೆಗಳು ಖಾಲಿ ಇದ್ದು, ಎಸ್ಎಸ್ಎಲ್ಸಿ ಓದಿರುವವರಿಗೆ ಈ ಕೆಲಸ ಸಿಗಲಿದೆ. 18-27 ವರ್ಷ ವಯೋಮಿತಿ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು. ಇನ್ನು ಎಸ್ಸಿ 574, ಎಸ್ಟಿ ಸಮುದಾಯಕ್ಕೆ 426 ಹುದ್ದೆಗಳನ್ನ ಮೀಸಲಿಡಲಾಗಿದೆ. ಉಳಿದಂತೆ ಆರ್ಥಿಕ ದುರ್ಬಲ ವಿಭಾಗಕ್ಕೆ 501, ಇನ್ನಿತರೆ ಹಿಂದುಳಿದ ವರ್ಗಗಳಿಗೆ 1,015, ಅನ್ ರಿಸರ್ವಡ್ ಗೆ 2,471 ಹುದ್ದೆಗಳನ್ನ ಮೀಸಲಿಡಲಾಗೆ. ಹೆಚ್ಚಿನ ಮಾಹಿತಿಗಾಗಿ https://www.bankersadda.com/wp-content/uploads/multisite/2025/07/25180119/ib-sa.pdf ಭೇಟಿ ನೀಡಿ. ಆಗಸ್ಟ್ 17 ಕೊನೆಯ ದಿನವಾಗಿದೆ.
